ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಿಕರೆ ಈ ಔಷಧಿಗಳನ್ನು ಉಪಯೋಗಿಸಬೇಡಿ

By Prasad
|
Google Oneindia Kannada News

Three popular medicines banned
ಬೆಂಗಳೂರು, ಜೂ. 29 : ಮಧುಮೇಹ ರೋಗಿಗಳು ಹೆಚ್ಚಾಗಿ ತೆಗೆದುಕೊಳ್ಳುವ ಪಿಯೊಗ್ಲಿಟಾಜೋನ್, ನೋವು ನಿವಾರಕ ಮಾತ್ರ ಅನಾಲ್ಜಿನ್ ಸೇರಿದಂತೆ ಮೂರು ಬಹೂಪಯೋಗಿ ಮತ್ತು ಜನಪ್ರಿಯ ಔಷಧಿಗಳನ್ನು ನಿಷೇಧಿಸಿದೆ. ಇವುಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಇವನ್ನು ನಿಷೇಧಿಸಿದೆ.

ಕೇಂದ್ರ ಸರ್ಕಾರ ಈ ಕೆಳಕಂಡ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಲು ಔಷಧ ಮತ್ತು ಕಾಂತಿವರ್ಧಕಗಳ ಅಧಿನಿಯಮ 1940ರ ಸೆಕ್ಷನ್ 26ಎ ಅಡಿಯಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

1. ಪಿಯೊಗ್ಲಿಟಾಜೋನ್ ಮತ್ತು ಇದನ್ನೊಳಗೊಂಡ ಇತರ ಔಷಧಗಳು
2. ಅನಾಲ್ಜಿನ್ ಮತ್ತು ಇದನ್ನೊಳಗೊಂಡ ಇತರ ಔಷಧಗಳು
3. ಪ್ಲೂಫೆಂಥಿಕ್ಸಾಲ್+ಮೆಲಿಟ್ರಾಸಿನ ನ ಸ್ಥಿರ ಪ್ರಮಾಣದ ಔಷಧ

ಕರ್ನಾಟಕ ರಾಜ್ಯದಲ್ಲಿರುವ ಔಷಧ ತಯಾರಕರು ಮೇಲ್ಕಂಡ ಔಷಧಗಳ ತಯಾರಿಕೆಯನ್ನು ನಿಲ್ಲಿಸುವಂತೆ ಮತ್ತು ಈ ಹಿಂದೆ ತಯಾರಿಸಿದ ಔಷಧಗಳನ್ನು ವಿತರಣಾ ಸರಪಳಿಯಿಂದ ಈ ಕೂಡಲೇ ಹಿಂಪಡೆಯುವಂತೆ ಸೂಚಿಸಲಾಗಿದೆ.

ಎಲ್ಲ ಔಷಧ ವ್ಯಾಪಾರಿಗಳು ಈ ಮೇಲ್ಕಂಡ ಔಷಧಗಳ ಮಾರಾಟವನ್ನು ತಡೆಹಿಡಿಯಲು ಮತ್ತು ಅವರ ಕಾರ್ಯವ್ಯಾಪ್ತಿಯ ಔಷಧ ಪರಿವೀಕ್ಷಕರು, ಸಹಾಯಕ ಔಷಧ ನಿಯಂತ್ರಕರು, ಉಪ ಔಷಧ ನಿಯಂತ್ರಕರವರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಎಲ್ಲ ವೈದ್ಯರು, ನರ್ಸಿಂಗ್ ಹೋಮ್‌ಗಳು ಮತ್ತು ಆಸ್ಪತ್ರೆಗಳು ಸದರಿ ಔಷಧಗಳಿಗೆ ಸಲಹಾ ಚೀಟಿಯನ್ನು ನೀಡುವುದನ್ನು ಮತ್ತು ಉಪಯೋಗಿಸುವುದನ್ನು ಈ ಕೂಡಲೇ ನಿಲ್ಲಿಸಲು ಕೋರಲಾಗಿದೆ ಹಾಗೂ ಸಾರ್ವಜನಿಕರು ಈ ಔಷಧಗಳನ್ನು ಉಪಯೋಗಿಸಕೂಡದು ಎಂದು ಈ ಮೂಲಕ ಮಾಹಿತಿ ನೀಡಲಾಗಿದೆ.

English summary
Central govt has banned widely prescribed and popular 3 medicines in the wake of health risks associated with them. Karnataka state govt has asked doctors, distributors not to prescribe and sell these medicines. Public are also suggested not to buy them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X