ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಮ್ಮನಿಗೆ ಹುಟ್ಟಿದ್ದು ಗಂಡು, ಕೊಟ್ಟಿದ್ದು ಹೆಣ್ಣು!

By Prasad
|
Google Oneindia Kannada News

Child swapping incident in Chitradurga
ಚಿತ್ರದುರ್ಗ, ಜೂ. 28 : ಸರಕಾರಿ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸೃಷ್ಟಿಸಿರುವ ಗೊಂದಲ ಮತ್ತು ಮಾಡಿರುವ 'ಗೋಲ್ ಮಾಲ್'ನಿಂದಾಗಿ ಹೆತ್ತಮ್ಮನಿಗೆ ಗಂಡಿನ ಬದಲಾಗಿ ಹೆಣ್ಣು ಮಗುವನ್ನು ನೀಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೂನಿಗರಹಳ್ಳಿ ಎಂಬ ಗ್ರಾಮದ ವಿಜಯಮ್ಮ ಎಂಬ ಮಹಿಳೆ ಜೂ.22ರಂದು ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. 22ರಂದೇ ಹೆರಿಗೆಯಾಗಿ ಅವರಿಗೆ ಗಂಡುಮಗುವಾಗಿದೆ ಎಂದು ಹೇಳಲಾಗಿತ್ತು ಮತ್ತು ದಾಖಲೆಯಲ್ಲಿಯೂ ನಮೂದಿಸಲಾಗಿತ್ತು.

ಆ ಮಗುವಿಗೆ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಇದ್ದುದರಿಂದ ಮಗುವನ್ನು ಇಷ್ಟು ದಿನ ಐಸಿಯುನಲ್ಲಿ ಚಿಕಿತ್ಸೆಗೆಂದು ಇಡಲಾಗಿತ್ತು. ಚಿಕಿತ್ಸೆ ನೀಡಿದ ಬಳಿಕ ವಿಜಯಮ್ಮನಿಗೆ ನೀಡಿದ್ದು ಗಂಡುಮಗುವಲ್ಲ ಹೆಣ್ಣುಮಗು. ಇದರಿಂದ ವಿಜಯಮ್ಮನ ಕುಟುಂಬದವರು ಅಚ್ಚರಿ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾನು ಹೆತ್ತ ಗಂಡುಮಗುವನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ, ನನಗೆ ಬೇರೆಯವರು ಹಡೆದಿರುವ ಹೆಣ್ಣು ಮಗು ನೀಡಲಾಗಿದೆ ಎಂದು ವಿಜಯಮ್ಮ ದುಃಖ ತೋಡಿಕೊಂಡಿದ್ದಾರೆ. ವಿಜಯಮ್ಮನ ಅತ್ತೆ ಬಸಮ್ಮ ಕೂಡ, ತಾನು ವಿಜಯಮ್ಮ ಹೆತ್ತಾಗ ಗಂಡು ಮಗುವನ್ನು ನೋಡಿದ್ದೆ ಎಂದು ಹೇಳಿದ್ದಾರೆ.

ಆದರೆ, ಆಸ್ಪತ್ರೆಯ ಸರ್ಜನ್ ಡಾ. ವಿಜಯ್ ಕುಮಾರ್ ಹೇಳುವುದೇ ಬೇರೆ. ವಿಜಯಮ್ಮ ಹೆತ್ತ ಸಂದರ್ಭದಲ್ಲಿ ಯಾವ ಗಂಡುಮಗುವೂ ಜನ್ಮತಾಳಿಲ್ಲ. ವಿಜಯಮ್ಮನಿಗೆ ಹುಟ್ಟಿದ್ದು ಹೆಣ್ಣುಮಗುವೇ. ಆದರೆ, ಸಿಬ್ಬಂದಿಗಳು ತಪ್ಪಾಗಿ ದಾಖಲೆಯಲ್ಲಿ ನಮೂದಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದಿರುವ ಅವರು, ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಜೊತೆಗೆ, ಮಗುವಿನ ಡಿಎನ್ಎ ಪರೀಕ್ಷೆ ಮಾಡಿ, ಹೆಣ್ಣುಮಗು ವಿಜಯಮ್ಮ ಹೆತ್ತ ಮಗು ಹೌದೋ ಅಲ್ಲವೋ ಎಂಬುದು ತೀರ್ಮಾನ ಮಾಡಿದ ನಂತರವೇ ಅವರಿಗೆ ಮಗುವನ್ನು ಒಪ್ಪಿಸಲಾಗುವುದು. ಇಲ್ಲಿ ಯಾವುದೇ ಗೋಲ್ ಮಾಲ್ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಮಾತನ್ನು ಕೇಳಲು ವಿಜಯಮ್ಮನ ಕುಟುಂಬದವರು ಸಿದ್ಧರಿಲ್ಲ. ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

English summary
Child swapping incident is reported in Chitradurga. Vijayamma had given birth to male child on June 22, which was kept in ICU in district govt hospital. But, after the treatment Vijayamma was told that she has given birth to female and not male.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X