ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಾಶಯಗಳ ಶುಕ್ರವಾರದ ನೀರಿನ ಮಟ್ಟ!

|
Google Oneindia Kannada News

ಬೆಂಗಳೂರು, ಜೂ.28 : ರಾಜ್ಯದಲ್ಲಿ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದೆ. ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ಶುಕ್ರವಾರವೂ ಮಳೆಯ ಅರ್ಭಟ ಸ್ಪಲ್ಟ ಮಟ್ಟಿಗೆ ತಗ್ಗಿದೆ.

ಕೊಡಗು ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿದ ಮಳೆ ಗುರುವಾರ ಕಡಿಮೆಯಾಗಿತ್ತು. ಇದರಿಂದ ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲೂ ಗುರುವಾರ ಮಳೆ ಕೊಂಚ ಬಿಡುವು ತೆಗೆದುಕೊಂಡಿದೆ.

ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಹಾರಂಗಿ ಜಲಾಶಯ ಭರ್ತಿಗೆ 10 ಅಡಿ ನೀರು ಬೇಕಾಗಿದೆ. ಕೆಆರ್ಎಸ್ ಜಲಾಶಯಕ್ಕೆ ಎರಡು ದಿನದಲ್ಲಿ ಆರು ಅಡಿ ನೀರು ಹರಿದು ಬಂದಿದೆ.

ಹಾರಂಗಿ ಜಲಾಶಯ : ಹಾರಂಗಿ ಜಲಾಶಯದ ಒಳಹರಿವು 13,831 ಕ್ಯುಸೆಕ್ ಆಗಿದ್ದು, ಜಲಾಶಯದಲ್ಲಿ 2,849 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಭರ್ತಿಗೆ 10 ಅಡಿ ನೀರು ಬೇಕಾಗಿದೆ.

Harangi

ಕಬಿನಿಯೂ ಭರ್ತಿ : ಕಳೆದ ನಾಲ್ಕು ದಿನಗಳಿಂದ ಕಬಿನಿ ಜಲಾಶಯಕ್ಕೆ 35,000 ಕ್ಯುಸೆಕ್ ಒಳಹರಿವು ಹರಿದು ಬರುತ್ತಿದ್ದು, ಜಲಾಶಯದಲ್ಲಿ 2,280 ಅಡಿ ನೀರು ಸಂಗ್ರಹಣೆಯಾಗಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಾಗಿದ್ದು, ಭರ್ತಿಗೆ ಕೇವಲ ನಾಲ್ಕ ಅಡಿ ನೀರಿನ ಅಗತ್ಯವಿದೆ.

ನಿಧಾನವಾಗಿ ಭರ್ತಿಯಾಗುತ್ತಿದೆ ಕೆಆರ್ಎಸ್ : ಕಾವೇರಿ ಪಾತ್ರದ ಪ್ರಮುಖ ಜಲಾಶಯ ಕೆಆರ್ಎಸ್ ನಿಧಾನವಾಗಿ ತುಂಬುತ್ತಿದೆ. ಗುರುವಾರ ಡ್ಯಾಂನಲ್ಲಿ 85.90 ಅಡಿ ನೀರು ಸಂಗ್ರಹವಾಗಿತ್ತು. 21,147 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದೆ.

ಲಿಂಗನಮಕ್ಕಿಯೂ ಎಷ್ಟು ನೀರಿದೆ : ಮಲೆನಾಡಿನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಲಿಂಗನಮಕ್ಕಿ ಜಲಾಶಯಕ್ಕೆ ಎರಡು ದಿನದಲ್ಲಿ ನಾಲ್ಕು ಅಡಿ ನೀರು ಹರಿದು ಬಂದಿದೆ. ಡ್ಯಾಂನಲ್ಲಿ 1,765.70 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 1,819 ಅಡಿ.

ಜಲಾಶಯದ ಸ್ಥಿತಿಗತಿ

ಜಲಾಶಯ ಇಂದಿನ ಮಟ್ಟ ಪೂರ್ಣಮಟ್ಟ
ತುಂಗಭದ್ರಾ 1592.25 ಅಡಿ 1633 ಅಡಿ
ಆಲಮಟ್ಟಿ 510 ಮೀ 519.60 ಮೀ
ಹೇಮಾವತಿ 2,883 ಅಡಿ 2,992 ಅಡಿ
ಭದ್ರಾ 132.50 ಅಡಿ 186.00 ಅಡಿ

English summary
The inflow into the reservoirs in the state has increased considerably. water levels in all dams increasing. and the Harangi dam is just short of 9.6 feet short of reaching the maximum level. The water level stood at 85.90 feet in the KRS dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X