ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ : ಮಾಲೂರಿಗೆ ಮತ್ತೆ ಬಂದ ಗಜಪಡೆ!

|
Google Oneindia Kannada News

elephant
ಕೋಲಾರ, ಜೂ.28 : ನಾಲ್ಕು ದಿನಗಳ ಹಿಂದೆ ಕಾಡಿಗೆ ಮರಳಿದ್ದ ಗಜಪಡೆಗಳು ಮಾಲೂರಿನಲ್ಲಿ ಮತ್ತೆ ಪ್ರತ್ಯಕ್ಷವಾಗಿವೆ. ಶುಕ್ರವಾರ ಬೆಳಗ್ಗೆ ಮಾಲೂರಿನ ಕೆ.ಎಂ.ದೊಡ್ಡಿ ಗ್ರಾಮಕ್ಕೆ ಆರು ಕಾಡಾನೆಗಳು ಆಗಮಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೆ.ಎಂ.ದೊಡ್ಡಿ ಗ್ರಾಮದ ನೀಲಗಿರಿ ತೋಪಿನ ಬಳಿ ಕಾಡಾನೆಗಳು ಬೀಡು ಬಿಟ್ಟಿರುವುದನ್ನು ನೋಡಿದ್ದೇವೆ ಎಂದು ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಳಿಗೆ ನೀಲಗಿರಿ ತೋಪಿನಲ್ಲಿ ಆನೆಗಳು ಆಶ್ರಯ ಪಡೆದಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಮಂಗಳವಾರ ಕಾಡಿಗೆ ಅಟ್ಟಲಾದ ಆನೆಗಳು ವಾಪಸ್ ಬಂದಿವೆಯೇ? ಅಥವ ಇವು ಬೇರೆ ಆನೆಗಳೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಶನಿವಾರ ಮಾಲೂರಿನಲ್ಲಿ 13 ಆನೆಗಳು ಕಾಡಿಸಿಕೊಂಡಿದ್ದವು. ನಂತರ ಅವು ಬೆಂಗಳೂರಿನ ಹುಸ್ಕೂರು ಕೆರೆಗೆ ಬಂದು ಬೀಡು ಬಿಟ್ಟಿದ್ದವು. ಸೋಮವಾರ ಸಂಜೆಯಿಂದ ನಡೆಸಿ ಕಾರ್ಯಚರಣೆ ಫಲವಾಗಿ ಅವು, ತಮಿಳುನಾಡು ರಾಜ್ಯದ ದೇವರ ಬೆಟ್ಟ ಕಾಡಿಗೆ ತೆರಳಿದ್ದವು.(ಆನೆ ದಾಳಿಗೆ ಪತ್ರಕರ್ತ ಬಲಿ)

ಅರಣ್ಯಾಧಿಕಾರಿಗಳ ಪರಿಶೀಲನೆ ಮುಂದುವರೆದಿದ್ದು, ಆನೆಗಳನ್ನು ಕಾಡಿಗೆ ಮರಳುತ್ತವೆಯೇ? ಅಥವ ಅವುಗಳನ್ನು ಓಡಿಸುವ ಕಾರ್ಯಚರಣೆ ನಡೆಸಬೇಕೆ ಎಂದು ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.(ಆನೆ ಹಿಂಡು ತಮಿಳುನಾಡಿಗೆ ವಾಪಸ್; ಸಾಕಪ್ಪಾ ಸಾಕು)

English summary
6 elephants found in Kolar district, Malur taluk, K.M.Doddi village. on Friday, June, 28 villagers found elephants and inform to forest department officials. officials reach the place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X