ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಪ್ರಳಯ: ಹುಡುಕಾಟ ನಿರಂತರ, ಸೇನೆ ವೆಬ್ ಸೈಟ್

By Mahesh
|
Google Oneindia Kannada News

ಉತ್ತರಾಖಂಡ್, ಜೂ.27: ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ ಮುಗಿಯುವವರೆಗೂ ನಮ್ಮ ಅಧಿಕಾರಿಗಳು ವಿಶ್ರಾಂತಿ ಪಡೆಯುವುದಿಲ್ಲ ಎಂದು ಭಾರತೀಯ ವಾಯು ಪಡೆ(ಐಎಎಫ್) ಮುಖ್ಯಸ್ಥ ಎನ್ ಎಕೆ ಬ್ರೌನ್ ಅವರು ಹೇಳಿದ್ದಾರೆ. ಈ ನಡುವೆ ಸಂತ್ರಸ್ತರ ಹುಡುಕಾಟಕ್ಕೆ ಅನುಕೂಲವಾಗಲು ಹೊಸ ವೆಬ್ ತಾಣವನ್ನು ಭೂ ಸೇನೆ ಲೋಕಾರ್ಪಣೆ ಮಾಡಿದೆ.

www.suryahopes.in ಎಂಬ ವೆಬ್ ತಾಣದಲ್ಲಿ ಕೇದಾರನಾಥ ಕಣಿವೆ, ಜೋಶಿಮಠ, ಬದ್ರಿನಾಥ ಸೇರಿದಂತೆ ಉತ್ತರಾಖಂಡ್ ರಾಜ್ಯದ ಜಲಪ್ರಳಯದಲ್ಲಿ ಸಿಲುಕಿದವರ ಹುಡುಕಾಟ ಮಾಡಿ ವಿವರಗಳನ್ನು ಪಡೆಯಬಹು. ಈಗಾಗಲೇ ರಾಜ್ಯದ ಸರ್ಕಾರಿ ಹೆಲ್ಪ್ ಲೈನ್ ಗಳು, ಐಟಿಬಿಪಿ ಸಹಾಯವಾಣಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಜೊತೆಗೆ ಗೂಗಲ್ ಪೀಪಲ್ ಫೈಂಡರ್ ಕೂಡಾ ಜನರ ಹುಡುಕಾಟಕ್ಕೆ ನೆರವು ನೀಡಿದೆ.

ಪ್ರವಾಹ ಸಂತ್ರಸ್ತರನ್ನು ಹೊತ್ತು ಬರುತ್ತಿದ್ದ ರಕ್ಷಣಾ ಪಡೆಯ ಹೆಲಿಕಾಪ್ಟರ್ ಎಂಐ17 ವಿ5 ಪತನವಾದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರೌನ್, ಉತ್ತರಾಖಂಡನ ಪ್ರವಾಹದಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನು ರಕ್ಷಿಸುವವರೆಗೆ ನಮ್ಮ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಮತ್ತು ರಕ್ಷಣಾ ಕಾರ್ಯ ಮುಗಿಯುವವರೆಗೂ ವಿಶ್ರಮಿಸುವುದಿಲ್ಲ ಎಂದಿದ್ದಾರೆ.

ಸುಮಾರು 8 ರಿಂದ 10 ಸಾವಿರ ಜನರ ರಕ್ಷಣೆ ಇನ್ನೂ ಆಗಬೇಕಿದೆ. ಸಾವಿರಾರು ಜನರ ಶವಗಳು ಪತ್ತೆಯಾಗಿದೆ. ಸಾವು ನೋವಿನ ನಡುವೆ ಭಾರತೀಯ ಸೇನೆ ಯೋಧರ ಪರಿಶ್ರಮ ತಿಳಿಸುವ ಚಿತ್ರ ಸರಣಿ ಇಲ್ಲಿದೆ ನೋಡಿ

ದೇವರೇ ನಿನಗೆ ಸಾವಿರ ಶರಣು

ದೇವರೇ ನಿನಗೆ ಸಾವಿರ ಶರಣು

ಸಾವಿನ ದವಡೆಯಿಂದ ಪಾರಾಗಿ ಬಂದ ಯಾತ್ರಿಯೊಬ್ಬರು

ಹುಡುಕಾಟ ನಿರಂತರ

ಹುಡುಕಾಟ ನಿರಂತರ

ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಉತ್ತರಾಖಂಡ್ ನ ವೈಮಾನಿಕ ದೃಶ್ಯ

ಶಂಕರ ನಿನಗೆ ನಮನ

ಶಂಕರ ನಿನಗೆ ನಮನ

ಪಕ್ಕದಲ್ಲಿ ಪ್ರವಾಹ, ನಿಶ್ಚಿಂತೆಯಿಂದ ಧಾನ್ಯಮಗ್ನನಾಗಿರುವ ಶಂಕರನಿಗೆ ಭಕ್ತಯಿಂದ ಜಲ ನಮನ ಸಲ್ಲಿಸುತ್ತಿರುವ ಭಕ್ತಪಕ್ಕದಲ್ಲಿ ಪ್ರವಾಹ, ನಿಶ್ಚಿಂತೆಯಿಂದ ಧಾನ್ಯಮಗ್ನನಾಗಿರುವ ಶಂಕರನಿಗೆ ಭಕ್ತಯಿಂದ ಜಲ ನಮನ ಸಲ್ಲಿಸುತ್ತಿರುವ ಭಕ್ತ

ಅಂತಿಮ ಸಂಸ್ಕಾರಕ್ಕಾಗಿ

ಅಂತಿಮ ಸಂಸ್ಕಾರಕ್ಕಾಗಿ

ಸಂತ್ರಸ್ತರ ರಕ್ಷಣೆ ಊಟೋಪಚಾರ ಜವಾಬ್ದಾರಿ ಹೊತ್ತಿರುವ ಸೇನೆ ಯೋಧರು, ಸ್ಥಳೀಯರ ನೆರವಿನಿಂದ ಅನಾಥ ಶವಗಳ ಸಂಸ್ಕಾರಕ್ಕೂ ಮುಂದಾಗಿದ್ದಾರೆ. ಸಾಮೂಹಿಕ ಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆ ಸ್ಥಳೀಯ ಆಡಳಿತವೂ ಕೈ ಜೋಡಿಸಿದೆ. ಶವಗಳ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ ನಡೆಸಲಾಗಿದೆ.

ಗುಪ್ತಕಾಶಿಯಲ್ಲಿ ರಾಹುಲ್

ಗುಪ್ತಕಾಶಿಯಲ್ಲಿ ರಾಹುಲ್

ಗುಪ್ತಕಾಶಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದು ಗುಪ್ತವಾಗಿರಲಿಲ್ಲ. ಜಗತ್ತಿನ ಅತಿ ದೊಡ್ಡ ಸುದ್ದಿಯಾಗಿ ಎಲ್ಲೆಡೆ ಪ್ರಸಾರವಾಯಿತು. ಉತ್ತರಾಖಂಡ್ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು.

ಗುಪ್ತಕಾಶಿಯಲ್ಲಿ ರಾಹುಲ್

ಗುಪ್ತಕಾಶಿಯಲ್ಲಿ ರಾಹುಲ್

ಗುಪ್ತಕಾಶಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದು ಗುಪ್ತವಾಗಿರಲಿಲ್ಲ. ಜಗತ್ತಿನ ಅತಿ ದೊಡ್ಡ ಸುದ್ದಿಯಾಗಿ ಎಲ್ಲೆಡೆ ಪ್ರಸಾರವಾಯಿತು. ಉತ್ತರಾಖಂಡ್ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ರಾಹುಲ್ ಗಾಂಧಿ ಭೇಟಿ

ರಕ್ಷಣಾ ಕಾರ್ಯ ನಿರತ ಕಾಪ್ಟರ್

ರಕ್ಷಣಾ ಕಾರ್ಯ ನಿರತ ಕಾಪ್ಟರ್

ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ಗಳು ಪ್ರತಿಕೂಲ ಹವಾಮಾನದ ನಡುವೆಯೂ ಕಳೆದೆರಡು ದಿನಗಳಿಂದ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ತುರ್ತು ವೈದ್ಯಕೀಯ ನೆರವು

ತುರ್ತು ವೈದ್ಯಕೀಯ ನೆರವು

ಸಮುದ್ರಮಟ್ಟದಿಂದ ಸುಮಾರು 11 ಸಾವಿರ ಅಡಿ ಎತ್ತರದಲ್ಲಿರುವ ಕೇದಾರನಾಥ ಪ್ರದೇಶದಲ್ಲಿರುವ ಬೆಟ್ಟಗಳಲ್ಲಿ ಸಿಲುಕಿದ್ದ ಭಕ್ತರಿಗೆ ಪ್ರಮುಖವಾಗಿ ಈ ಪ್ರದೇಶದ ಚಳಿ ವಾತಾವರಣ, ಆಮ್ಲಜನಕ ಕೊರತೆ ಕಾಡುತ್ತಿದೆ. ಸೇನೆ ಯೋಧರು ಆದಷ್ಟು ಜಾಗ್ರತೆಯಿಂದ ಸುರಕ್ಷಿತ ಸ್ಥಳಗಳಿಗೆ ಮುಟ್ಟಿಸುತ್ತಿದ್ದಾರೆ.

ಒಂದು ಕಡೆಯಿಂದ ಮತ್ತೊಂದು ಕಡೆಗೆ

ಒಂದು ಕಡೆಯಿಂದ ಮತ್ತೊಂದು ಕಡೆಗೆ

ಉತ್ತರಾಖಂಡ್ ನಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ರಸ್ತೆಗಳು ಸೇತುವೆಗಳು ಜಲ ಪ್ರಳಯದಿಂದ ಧ್ವಂಸಗೊಂಡಿದೆ. ಬೆಟ್ಟದ ತಪ್ಪಲಿನಲ್ಲಿ ರಕ್ಷಣೆಗಾಗಿ ಕಾದು ನಿಂತಿರುವ ಭಕ್ತಾದಿಗಳನ್ನು ಪ್ರವಾಹದ ನಡುವೆ ಈ ರೀತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲಾಗುತ್ತಿದೆ.

ಕೃತಕ ಸೇತುವೆ ನಿರ್ಮಾಣ

ಕೃತಕ ಸೇತುವೆ ನಿರ್ಮಾಣ

ಸುಮಾರು 300 ಹಳ್ಳಿಗಳು ಮಹಾ ಪ್ರವಾಹಕ್ಕೆ ಕೊಚ್ಚಿ ಹೋಗಿವೆ, ಸೇತುವೆ, ರಸ್ತೆ ಧ್ವಂಸಗೊಂಡಿದ್ದು ಸುಮಾರು ಪುನರ್ ನಿರ್ಮಾಣಕ್ಕೆ ಎರಡು ವರ್ಷವಾದರೂ ಬೇಕು ಎನ್ನಲಾಗಿದೆ.

ಕೃತಕ ವ್ಯವಸ್ಥೆ ಮೂಲಕ ರಕ್ಷಣೆ

ಕೃತಕ ವ್ಯವಸ್ಥೆ ಮೂಲಕ ರಕ್ಷಣೆ

ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನದಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಜನರನ್ನು ಸಾಗಿಸಲು ಕೃತಕ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತಾದಿಗಳು ಸುರಕ್ಷತೆ ಭಾವ

ಭಕ್ತಾದಿಗಳು ಸುರಕ್ಷತೆ ಭಾವ

ಜಲ ಪ್ರಳಯದಿಂದ ತತ್ತರಿಸಿದ್ದ ಹೈದರಾಬಾದ್ ಮೂಲದ ಭಕ್ತಾದಿಗಳು ಸುರಕ್ಷತೆ ಭಾವ ಮೂಡಿದ ಮೇಲೆ ತಮ್ಮ ಆತ್ಮೀಯ ಜೊತೆ

ಮತ್ತೊಂದು ದುರಂತ

ಮತ್ತೊಂದು ದುರಂತ

ಉತ್ತರಾಖಂಡದ ಜಲಪ್ರಳಯದಲ್ಲಿ ಸಿಲುಕಿದ ಸಂತ್ರಸ್ತರನ್ನು ರಕ್ಷಿಸಲು ಹೋದ ವಾಯು ಸೇನೆ ಹೆಲಿಕಾಪ್ಟರ್ ಪತನಗೊಂಡ ಜಾಗದ ನಕ್ಷೆ

ಕೃತಕ ವೈದ್ಯಕೀಯ ವ್ಯವಸ್ಥೆ

ಕೃತಕ ವೈದ್ಯಕೀಯ ವ್ಯವಸ್ಥೆ

ಸಂರಕ್ಷಿಸಲ್ಪಟ್ಟ ಭಕ್ತಾದಿಗಳನ್ನು ಡೆಹ್ರಾಡೂನ್ ಕಡೆಗೆ ಕರೆದೊಯ್ಯುತ್ತಿರುವ ಭಾರತೀಯ ಸೇನೆ ಯೋಧರು

ಚಿಂತಿತರಾದ ಯೋಧರು

ಚಿಂತಿತರಾದ ಯೋಧರು

ಗೌರಿಕುಂಡ್ ಬಳಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅವಶೇಷ ಹುಡುಕುವ ಮುನ್ನ ನಕ್ಷೆಯನ್ನು ವೀಕ್ಷಿಸುತ್ತಿರುವ ವಾಯುಸೇನೆ ಯೋಧರು

ರಕ್ಷಣೆ ಸಿಕ್ಕ ಕ್ಷಣ

ರಕ್ಷಣೆ ಸಿಕ್ಕ ಕ್ಷಣ

ಮುಂದಿನ 48 ಗಂಟೆಯಿಂದ 72 ಗಂಟೆಗಳೊಳಗೆ ಕಾರ್ಯಾಚರಣೆ ಪೂರ್ಣ ಗೊಳಿಸುವ ಭರವಸೆಯನ್ನು ವಾಯುಸೇನೆ ನೀಡಿದೆ. ರಕ್ಷಿಸಲ್ಪಟ್ಟ ಭಕ್ತಾದಿಗಳಿಗೆ ಟೋಕನ್ ನೀಡಲಾಗಿದ್ದು, ತಮ್ಮ ಸರದಿ ಬಂದಾಗ ಹೆಲಿಕಾಪ್ಟರ್ ಏರಬೇಕಾಗುತ್ತದೆ.

ಪ್ರಕೃತಿ ಮಾಡಿದ ಹಾನಿ ಚಿತ್ರ

ಪ್ರಕೃತಿ ಮಾಡಿದ ಹಾನಿ ಚಿತ್ರ

ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಉತ್ತರಾಖಂಡ್ ಜಿಲ್ಲೆಯ ಪಟ್ಟಣವೊಂದರ ವೈಮಾನಿಕ ಚಿತ್ರ

ಅಗಲಿದವರಿಗೆ ನಮನ

ಅಗಲಿದವರಿಗೆ ನಮನ

ಕೇದಾರನಾಥದಲ್ಲಿ ವಾರಸುದಾರರಿಲ್ಲದ ಶವಗಳನ್ನು ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಕಾಪ್ಟರ್ ದುರಂತ ಹಾಗೂ ರಕ್ಷಣಾ ಕಾರ್ಯದಲ್ಲಿ ಸಾವನ್ನಪ್ಪಿದ ಯೋಧರಿಗೆ ಸರ್ಕಾರಿ ಗೌರವದ ಮೂಲಕ ಅಂತಿಮ ನಮನ ಸಲ್ಲಿಸಲಾಗುತ್ತಿದೆ.

 ಸೂಪರ್ ದಂಪತಿಗಳು

ಸೂಪರ್ ದಂಪತಿಗಳು

ಸಂತ್ರಸ್ತರ ಪ್ರಾಣ ರಕ್ಷಣೆ ಮಾಡುತ್ತಿರುವ ಯೋಧರ ಪೈಕಿ ಎರಡು ದಂಪತಿ ಜೋಡಿ ಪೈಲೆಟ್ ಗಳು ಗಮನ ಸೆಳೆಯುತ್ತಿದ್ದಾರೆ. ಇವರ ಬಗ್ಗೆ ವಿವರ ಇಲ್ಲಿದೆ ಓದಿ

ಜೀವ ರಕ್ಷಕ ವಾಹನ

ಜೀವ ರಕ್ಷಕ ವಾಹನ

ಸುರಕ್ಷಿತ ಸ್ಥಳ ತಲುಪಿದ ಮೇಲೆ ಹೆಲಿ ಕಾಪ್ಟರ್ ಆಗಮನದ ನೀರಿಕ್ಷೆಯಲ್ಲಿ ಕುಳಿತ ಭಕ್ತಾದಿಗಳು

ಸಾಧು ಸಂತರ ಸಾಲು

ಸಾಧು ಸಂತರ ಸಾಲು

ಕೇದಾರನಾಥ ಕಣಿವೆ ಬಿಡಲು ಮನಸ್ಸಿಲ್ಲದ ಮನಸ್ಸಿನಿಂದ ಹೊರಟಿರುವ ಸಾಧು ಸಂತರ ಸಮೂಹ.

ಕಾಪ್ಟರ್ ಗಾಗಿ ನಿರೀಕ್ಷೆ

ಕಾಪ್ಟರ್ ಗಾಗಿ ನಿರೀಕ್ಷೆ

ಜೀವ ರಕ್ಷಕ ವಾಹನ ವಾಯುಸೇನೆ ಹೆಲಿಕಾಪ್ಟರ್ ಗಾಗಿ ಕಾದಿರುವ ಯಾತ್ರಾರ್ಥಿಗಳ ಸಮೂಹ

ಸಾಧು ಸಂತರ ಸಾಲು

ಸಾಧು ಸಂತರ ಸಾಲು

ಕೇದಾರನಾಥ ಕಣಿವೆ ಬಿಡಲು ಮನಸ್ಸಿಲ್ಲದ ಮನಸ್ಸಿನಿಂದ ಹೊರಟಿರುವ ಸಾಧು ಸಂತರ ಸಮೂಹ ಸರದಿ ಸಾಲಿನಲ್ಲಿ

ಸಂತ್ರಸ್ತರಿಗಾಗಿ ಪ್ರಾರ್ಥನೆ

ಸಂತ್ರಸ್ತರಿಗಾಗಿ ಪ್ರಾರ್ಥನೆ

ಸಿಖ್ ಪವಿತ್ರ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಾಲಿವುಡ್ ನಟಿ ವಿದ್ಯಾ ಬಾಲನ್

ವಿಶೇಷ ಹೋಮ

ವಿಶೇಷ ಹೋಮ

ಸಂತ್ರಸ್ತರ ರಕ್ಷಣೆ, ಸೇನೆ ಬಲವರ್ಧನೆ, ಜಗತ್ ರಕ್ಷಕನಿಂದ ಕರುಣೆ ಕೋರಿ ಅಹಮದಾಬಾದಿನಲ್ಲಿ ವಿಶೇಷ ಹೋಮ ಹವನ ನಡೆಸಲಾಗಿದೆ.

ಫ್ಲೈಟ್ ಲೆಫ್ಟಿನೆಂಟ್ ಪ್ರವೀಣ್

ಫ್ಲೈಟ್ ಲೆಫ್ಟಿನೆಂಟ್ ಪ್ರವೀಣ್

ಪ್ರವಾಹಪೀಡಿತ ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ್ದ 26ರ ಹರೆಯದ ಫ್ಲೈಟ್ ಲೆಫ್ಟಿನೆಂಟ್, ಮಧುರೈಯ ಪ್ರವೀಣ್ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟರು

ಅಂತಿಮ ನಮನ

ಅಂತಿಮ ನಮನ

ಗೌರಿಕುಂಡ್ ಬಳಿ ಹೆಲಿ ಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸೇನೆಯಿಂದ ಅಂತಿಮ ನಮನ

ಅಂತಿಮ ನಮನ

ಅಂತಿಮ ನಮನ

ಗೌರಿಕುಂಡ್ ಬಳಿ ಹೆಲಿ ಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ವಾಯುಸ್ಸೇನೆಯಿಂದ ಅಂತಿಮ ನಮನ

ಮೌನಾಚರಣೆ

ಮೌನಾಚರಣೆ

ಗೌರಿಕುಂಡ್ ಬಳಿ ಹೆಲಿ ಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ವಾಯುಸೇನೆ ತಂಡದೊಡನೆ ಸಿಎಂ ವಿಜಯ್ ಬಹುಗುಣ ಮೌನಾಚರಣೆ ಮಾಡಿ ಅಂತಿಮ ನಮನ

ಕೃತಕ ಆಹಾರ ವ್ಯವಸ್ಥೆ

ಕೃತಕ ಆಹಾರ ವ್ಯವಸ್ಥೆ

ಬೆಟ್ಟ ಗುಡ್ಡ, ಹೊಳೆ ನಡುವೆ ಸಿಲುಕಿ ಕಂಗಲಾಗಿದ್ದ ಭಕ್ತರು ಬಯಲಿಗೆ ಬಂದ ಮೇಲೆ ಆಹಾರ ನೀಡುತ್ತಿರುವ ಸೇನೆ ಯೋಧರು

ಶಂಕರ ನಿನಗೆ ನಮನ

ಶಂಕರ ನಿನಗೆ ನಮನ

ಬೆಟ್ಟ ಗುಡ್ಡ, ಹೊಳೆ ನಡುವೆ ಸಿಲುಕಿ ಕಂಗಲಾಗಿದ್ದ ಭಕ್ತರನ್ನು ರಕ್ಷಿಸಿ ಕರೆದೊಯ್ಯುತ್ತಿರುವ ಯೋಧರು

English summary
UttaraKhand Deluge and relief in Pictures: The Indian Army on Wednesday launched a web site - suryahopes.in -- to provide updates on the whereabouts of people stranded in disaster-hit Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X