ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪಾಲ್ ರೇಪ್: ಇಬ್ಬರು ವಶಕ್ಕೆ, ಒಬ್ಬ ಪರಾರಿ

By Srinath
|
Google Oneindia Kannada News

manipal-medical-student-rape-bajrang-dal-sets-deadline
ಉಡುಪಿ, ಜೂನ್ 27:ಮಣಿಪಾಲ ವಿಶ್ವವಿದ್ಯಾಲಯದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಗುರುವಾರ ಬೆಳಗ್ಗೆ ವಶಕ್ಕೆ ತೆಗೆದುಕೊಂಡಿದ್ದಾರೆ. ಒಬ್ಬ ಪರಾರಿಯಾಗಿದ್ದಾನೆ.

ಬೆಳಗಿನ ವರದಿ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ ಎಂದು ಉಡುಪಿಯ ಕೆಎಂಸಿ ಆಸ್ಪತ್ರೆ ವರದಿ ಸಲ್ಲಿಸಿದೆ. ಇದೀಗ ಮಾಹೆ ಕಾಲೇಜು ಆಡಳಿತ ಮಂಡಳಿಯೂ ಎಚ್ಚೆತ್ತಿದ್ದು ಪ್ರಕರಣದ ಗಂಭೀರತೆಯನ್ನು ಅರಿತು ಆರೋಪಿಗಳ ಪತ್ತೆ ಕೋರಿ ತನ್ನ ವತಿಯಿಂದಲೂ 3 ಲಕ್ಷ ರೂ ಬಹುಮಾನ ಪ್ರಕಟಿಸಿದೆ.

ಪೊಲೀಸ್ ಇಲಾಖೆಯೂ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 2 ಲಕ್ಷ ರೂ ಬಹುಮಾನ ನೀಡುವುದಾಗಿ ಈಗಾಗಲೇ ಘೋಷಿಸಿದೆ. ಆದರೆ ಆರೋಪಿಗಳ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ.

ಈ ಮಧ್ಯೆ ಪ್ರಕರಣ ನಡೆದು ಒಂದು ವಾರ ಆಗುತ್ತಿದ್ದರೂ (ಜೂನ್ 20) ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿಬೇಕು. ಇದಕ್ಕೆ 24 ಗಂಟೆಗಳ ಗುಡವು ಅಂದರೆ ಗುರುವಾರದ ಒಳಗಾಗಿ ಕಾಮುಕರನ್ನು ಬಂಧಿಸಬೇಕು ಎಂದು ಭಜರಂಗ ದಳ ಮತ್ತು ವಿಎಚ್ ಪಿ ಸಂಘಟನೆಗಳು ಆಗ್ರಹಿಸಿವೆ.

ಮಾದಕದ್ರವ್ಯಗಳ ಬಳಕೆ, ಪಬ್ ಬಾರ್ ಸಂಸ್ಕೃತಿ ದೇವನಗರಿಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ನಗರದ ವಾತಾವರಣ ಹಾಳಾಗಿದೆ ಎಂದು ಕಿಡಿಕಾರಿರುವ ಈ ಸಂಘಟನೆಗಳು ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ನಾವೇ ಆರೋಪಿಗಳ ಪತ್ತೆಗೆ ಮುಂದಾಗಿ ನೈತಿಕ ಪೊಲೀಸ್ ಕಾರ್ಯದಲ್ಲಿ ತೊಡಗುತ್ತೇವೆ ಎಂದೂ ಎಚ್ಚರಿಸಿವೆ.

ಮಂಗಳೂರು ಪಬ್ ದಾಳಿ ನಡೆದಾಗ 'ಘಟರ್ಜಿಸಿದ್ದ' so-called ಬುದ್ಧಿಜೀವಿಗಳು ಈಗೆಲ್ಲಿ ಹೋದರು? ರಾಷ್ಟ್ರೀಯ ಟಿವಿ ಚಾನೆಲುಗಳಲ್ಲಿ ಮಣಿಪಾಲ್ ಘಟನೆ ಬಗ್ಗೆ ಚಿಕ್ಕ ಸುದ್ದಿಯೂ ಇಲ್ಲ. ಅವರೆಲ್ಲಾ ಈಗೇಕೆ ಮೌನವಾಗಿದ್ದಾರೆ ಎಂದು ಭಜರಂಗ ದಳ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಅತ್ಯಾವಾರ ನಡೆದ ಸ್ಥಳದ ಬಗ್ಗೆ ಖಚಿತ ಮಾಹಿತಿಯಿದೆ. ಆದರೆ ಇದನ್ನು ಬಾಧಿತ ವಿದ್ಯಾರ್ಥಿನಿ ದೃಢಪಡಿಸಬೇಕು. ವಿದ್ಯಾರ್ಥಿನಿ ಮತ್ತು ಆಕೆಯ ಮನೆಯವರು ತನಿಖೆಗೆ ಹೆಚ್ಚಿನ ಸಹಕಾರ ನೀಡುತ್ತಿಲ್ಲ. ಕುಂದಾಪುರದ ಡಿವೈ ಎಸ್ಪಿ ಯಶೋದಾ ಅವರೊಬ್ಬರೇ ಈಗ ನಮ್ಮ ಮತ್ತು ಬಾಧಿತ ವಿದ್ಯಾರ್ಥಿನಿಯ ನಡುವೆ ಕೊಂಡಿಯಾಗಿದ್ದಾರೆ. ವಿದ್ಯಾರ್ಥಿನಿ ಕುಟುಂಬಸ್ಥರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಆದರೂ ಅವರು ಹೆಚ್ಚಿನ ಮಾಹಿತಿ ನೀಡಲು ಮುಂದಾಗಬೇಕು ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

ತನಿಖೆಯಲ್ಲಿ ಯುವತಿಯ ಸಹಕಾರ, ಹೇಳಿಕೆ ಮುಖ್ಯವಾದದ್ದು. ಒತ್ತಾಯಪೂರ್ವಕವಾಗಿ ಹೇಳಿಕೆ ಪಡೆಯೋದಿಲ್ಲ. ಸಂತ್ರಸ್ತ ಯುವತಿಯ ಹೇಳಿಕೆ ಇಲ್ಲದೆ ತನಿಖೆಗೆ ಹಿನ್ನಡೆಯಾಗುತ್ತಿದೆ. ಇದೇ ರೀತಿಯಾದರೆ ಆರೋಪಿಗಳ ಪತ್ತೆ ಕಾರ್ಯ ವಿಳಂಬವಾಗಬಹುದು. ಆದರೆ ಆರೋಪಿಗಳ ಬಂಧನ ಮಾಡುವುದಂತೂ ಖಚಿತ. ಇದಕ್ಕಾಗಿ ಏನೆಲ್ಲ ಸಾಕ್ಷ್ಯಾಧಾರಗಳು ಬೇಕೋ ಅದನ್ನೆಲ್ಲ ವಿವಿಧ ಆಯಾಮಗಳ ಮೂಲಕ ಸಂಗ್ರಹ ಮಾಡಲಾಗುತ್ತಿದೆ ಎಂದು ಐಜಿಪಿ ವಿವರಿಸಿದರು.

ನೋವು ತೋಡಿಕೊಂಡ ಲೇಖಕಿ ವೈದೇಹಿ:
ಅತ್ಯಾಚಾರ ಆರೋಪಿಯನ್ನು ಪತ್ತೆ ಮಾಡದಿರುವುದು ನೋವು ತಂದಿದೆ. ಬಾಧಿತ ಯುವತಿಯನ್ನು ನಿಮ್ಮ ಮನೆಯ ಮಗಳೆಂದು ಪರಿಗಣಿಸಿ ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠರನ್ನು ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಲೇಖಕಿ ವೈದೇಹಿ ಬುಧವಾರ ಕೋರಿದ್ದರು.

ಮಣಿಪಾಲ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಸಿ ಆರೋಪಿಗಳನ್ನು ಪತ್ತೆ ಹಚ್ಚದಿರುವ ಬಗ್ಗೆ ಉಡುಪಿ ಜಿಲ್ಲಾ ಲೇಖಕಿಯರ ಬಳಗದ ವತಿಯಿಂದ ಬುಧವಾರ ಎಸ್‌ಪಿಗೆ ಮನವಿ ಅರ್ಪಿಸಿದ ಸಂದರ್ಭ ಅವರು ಮಾತನಾಡಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಶಾರದಾ ಭಟ್, ಕಾತ್ಯಾಯಿನಿ ಕುಂಜಿಬೆಟ್ಟು, ಸುಶೀಲಾ ಆರ್. ರಾವ್, ತಾರಾ ಭಟ್, ಇಂದಿರಾ ಹಾಲಂಬಿ, ಪ್ರಫುಲ್ಲಾ ಜಿ. ಉಪಸ್ಥಿತರಿದ್ದರು.

English summary
Manipal University medical student gang-rape Bajrang Dal sets deadline. The Bajrang Dal and VHP on Wednesday June 26 came out in strong protest over the alleged gang-rape of a medical student in Manipal and threatened to call for Udupi bandh if the accused were not arrested in the next 24 hours. In the meanwhile the medical report of the Manipal University student who was allegedly gang-raped on Thursday June 20 night has confirmed sexual assualt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X