ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃದ್ಧರಿಗೆ ನೆಮ್ಮದಿ ಕಲ್ಪಿಸಿರುವ ಒಮಾಶ್ರಮ

By Prasad
|
Google Oneindia Kannada News

ಇನ್ನು ಅತ್ತೆ ಸೊಸೆ ವಿಷಯಕ್ಕೆ ಬಂದರೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಇವತ್ತು ಅತ್ತೆಯ ಆರೋಗ್ಯ ಸ್ಥಿತಿ ಬಿಗಾಡಾಯಿಸಿದರೆ, ಸೊಸೆ ಅತ್ತೆಯನ್ನು ವೃದ್ಧಾಶ್ರಮ ಸೇರಿಸುತ್ತಾಳೆ. ಅತ್ತೆಯನ್ನು ಸಾಕುವ ಮನಸ್ಸು ಕೂಡ ಸೊಸೆಗೆ ಇರುವುದಿಲ್ಲ. ಇಂತಹ ಹಲವು ಕೇಸ್‌ಗಳನ್ನು ನೋಡಿದ ಬಳಿಕ ಗೀತಾ ಶಂಕರ್ ಹಾಗೂ ಮೊಹನ್ ಪೈ ಅನಾಥ ವೃದ್ಧರ ಕಣ್ಣಿರು ಒರೆಸಲು ನಿರ್ಧಾರ ಮಾಡಿದರು. ಇವರಿಗೆ ಈಸ್ಟ್ ಅಂಡ್ ಸೌತ್ - ಐ ವಾಲಂಟೀರ್ ಸಂಸ್ಥೆಯ ಸ್ಥಳೀಯ ಮುಖ್ಯಸ್ಥರಾಗಿರುವ ಪ್ರಥನಾ ಉಣಕಲ್‌ಕರ್ ಹೆಗಲು ನೀಡಿದ್ದರು. 2001ರಲ್ಲಿ ಬಿಳೆಕಹಳ್ಳಿಯ ವಿಜಯಾಬ್ಯಾಂಕ್ ಕಾಲೋನಿಯಲ್ಲಿ ಒಮಾಶ್ರಮ ಸ್ಥಾಪಿಸಿದರು. ಆರಂಭದಲ್ಲಿ ಓಮಾಶ್ರಮಕ್ಕೆ ಸಾಕಷ್ಟು ತೊಂದರೆ ಕಷ್ಟಗಳು ಎದುರಾಗಿದ್ದವು. ಇವತ್ತು ಒಮಾಶ್ರಮ 50ಕ್ಕೂ ಅಧಿಕ ಅನಾಥ ಹಿರಿಯ ನಾಗರೀಕರಿಗೆ ನೆಮ್ಮದಿ ನೀಡುವ ಮನೆಯಾಗಿ ಬೆಳೆದಿದೆ.

ಒಮಾಶ್ರಮದ ಹೊಣೆ ಹೊತ್ತಿರುವ ಗೀತಾ ಶಂಕರ್ ತಮ್ಮ ಅನುಭವಗಳ ಮೂಟೆಯನ್ನು ಒಂದೊಂದಾಗೇ ಬಿಚ್ಚಿಡುತ್ತಾರೆ. ತಮ್ಮ ಬದುಕಿನ ಇಳಿಸಂಜೆಯಲ್ಲಿರುವವರಿಗೆ ಒಮಾಶ್ರಮ ನೆಮ್ಮದಿಯ ಬದುಕನ್ನು ನೀಡುತ್ತಿದೆ. ಇಲ್ಲಿರುವ ಎಲ್ಲರೂ ಬದುಕಿನ ಅನೇಕ ತಿರುವುಗಳನ್ನು ಕಷ್ಟಗಳನ್ನು ಮತ್ತು ಸುಖಗಳನ್ನು ದಾಟಿಕೊಂಡು ಮುಂದೆ ಬಂದಿದ್ದಾರೆ. ಇಂತಹವರಿಗೆ ಯಾವುದೇ ಮಾನಸಿಕ ಚಿಕಿತ್ಸೆ ಅಗತ್ಯವಿರುವುದಿಲ್ಲ. ಒಂದಿಷ್ಟು ಪ್ರೀತಿಯನ್ನು ಹಂಚಿಕೊಂಡರೆ ಇವರೆಲ್ಲಾ ನೆಮ್ಮದಿಯಾಗಿರುತ್ತಾರೆ ಅನ್ನೋದು ಗೀತಾ ಅನುಭವದ ಮಾತು.

Omashram old age home in Bangalore

ವೃದ್ಧರ ಪಾಲಿಗೆ ನೆಮ್ಮದಿ ಕಲ್ಪಿಸಿರುವ ಒಮಾಶ್ರಮಕ್ಕೆ ಒಂದು ಸ್ವಂತ ಕಟ್ಟಡವಿಲ್ಲ. ಸದ್ಯಕ್ಕೆ 3 ಬೇರೆ ಬೇರೆ ಜಾಗಗಳಲ್ಲಿ ಒಮಾಶ್ರಮ ನಡೆಯುತ್ತಿದೆ. ಹೀಗಾಗಿ ಒಂದು ಸ್ವಂತ ಕಟ್ಟಡಕ್ಕಾಗಿ ಒಮಾಶ್ರಮದ ಮುಖ್ಯಸ್ಥೆ ಗೀತಾ ಶಂಕರ್ ಸರ್ಕಾರದ ನೆರವು ಕೇಳುತ್ತಿದ್ದಾರೆ. ದೊಡ್ಡ ಮನಸ್ಸಿರುವರಿಂದ ಕೂಡ ಸಹಾಯದ ನಿರೀಕ್ಷೆ ಮಾಡ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಒಮಾಶ್ರಮದ ಕಟ್ಟಡವನ್ನು 3 ಬಾರಿ ಬದಲಿಸಲಾಗಿದೆ. ಪದೇ ಪದೇ ಇಂತಹ ಬದಲಾವಣೆಯನ್ನು ಮಾಡುವುದು ಕಷ್ಟ ಅಂತ ಗೀತಾ ನೋವಿನಿಂದ ಹೇಳುತ್ತಾರೆ.

ವೃದ್ಧರ ಆರೈಕೆಯ ಜೊತೆಗೆ ಒಮಾಶ್ರಮ 18 ವರ್ಷಕ್ಕಿಂತ ಮೇಲ್ಪಟ್ಟ, ಆರ್ಥಿಕವಾಗಿ ದುರ್ಬಲರಾಗಿರುವ ಹೆಣ್ಣುಮಕ್ಕಳಿಗೆ ನರ್ಸಿಂಗ್ ಟ್ರೈನಿಂಗ್ ಕೂಡ ನೀಡುತ್ತಿದೆ. ಅಷ್ಟೇ ಅಲ್ಲ ಇವರಿಗೆ ವೃದ್ಧಾಶ್ರಮದಲ್ಲೇ ಕೆಲಸ ಕೊಡಿಸುವ ಭರವಸೆಯನ್ನು ಕೂಡ ನೀಡುತ್ತಿದೆ. ಒಮಾಶ್ರಮಕ್ಕೆ ಡಾಕ್ಟರ್‌ಗಳು, ಯೋಗ ಟ್ರೈನರ್‌ಗಳು ಸೇರಿದಂತೆ ಎಲ್ಲರು ಭೇಟಿ ನೀಡಿ ವಯೋವೃದ್ಧರ ಆರೋಗ್ಯವನ್ನು ಪರೀಕ್ಷೆ ನಡೆಸುತ್ತಾರೆ. ಇದೆಲ್ಲದರ ಜೊತೆಗೆ ಒಮಾಶ್ರಮದಲ್ಲಿ ಅತ್ಯುತ್ತಮ ಸೌಲಭ್ಯ ಹೊಂದಿರುವ ಅಡುಗೆ ಮನೆಯ ಜೊತೆಗೆ ತರಬೇತಿ ಪಡೆದ ಅಡುಗೆಯವರಿದ್ದಾರೆ. ಸದ್ಯಕ್ಕೆ ಒಮಾಶ್ರಮ ಟ್ರಸ್ಟ್ ಸ್ಥಳೀಯ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದು, ಇದರಲ್ಲಿ ನೀಲಗಿರಿಯ ಬುಡಕಟ್ಟು ಮಕ್ಕಳು ಕೂಡ ಸೇರಿಕೊಂಡಿದ್ದಾರೆ.

ಒಮಾಶ್ರಮದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಊಟ, ವಸತಿ ಜೊತೆಗೆ ಮೆಡಿಕಲ್ ಫೆಸಿಲಿಟಿಯನ್ನು ಕೂಡ ಒದಗಿಸಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರು, ಮಧ್ಯಮ ವರ್ಗದವರು ಹೆಚ್ಚಾಗಿ ಒಮಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಸ್ವಂತ ಮನೆಯಲ್ಲಿರುವಷ್ಟೇ ಖುಷಿ ಕೊಡುತ್ತಿರುವಮ ಒಮಾಶ್ರಮ ಎಲ್ಲಾ ವ್ಯವಸ್ಥೆಗಳಿವೆ. ಲಾಂಡ್ರಿ, ಲೈಬ್ರರಿ, ಟಿವಿ, ಇನ್‌ಡೋರ್ ಗೇಮ್ಸ್ ಸೇರಿದಂತೆ ವಯೋವೃದ್ಧರ ನೆಮ್ಮದಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದೆಲ್ಲದರ ಜೊತೆಗೆ ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲಿರುವವರಿಗೆ ವಿಶೇಷ ವ್ಯವಸ್ಥೆಗಳು ಕೂಡ ಇವೆ.

English summary
This is not a fictitious story, but true story of people who were abandoned by their own selfish children. Omashram in Bangalore has given shelter to such old people and mothering them. If any one wishes can donate to this old age home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X