ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ

|
Google Oneindia Kannada News

krs
ಬೆಂಗಳೂರು, ಜೂ.25 : ಜೂನ್ ತಿಂಗಳು ಅಂತ್ಯಗೊಳ್ಳಲು ದಿನಗಣನೆ ಆರಂಭವಾಗಿದೆ. ರಾಜ್ಯಕ್ಕೆ ಆಗಮಿಸಿದ ಮುಂಗಾರು ಮಾರುತಗಳು ರೈತರಿಗೆ ನಿರಾಸೆ ಉಂಟು ಮಾಡದೆ, ಉತ್ತಮವಾಗಿ ಮಳೆ ಸುರಿಸುತ್ತಿವೆ. ನೀರಿಲ್ಲದೆ ಖಾಲಿಯಾಗಿದ್ದ ರಾಜ್ಯದ ಜಲಾಶಯಗಳು ನಿಧಾನವಾಗಿ ಭರ್ತಿ ಆಗುತ್ತಿವೆ.

ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್ಎಸ್, ಲಿಂಗನಮಕ್ಕಿ, ಆಲಮಟ್ಟಿ, ತುಂಗಭದ್ರಾ, ಹಾರಂಗಿ, ಕಬಿನಿ ಮುಂತಾದವುಗಳು ನಿಧಾನವಾಗಿ ಭರ್ತಿಯಾಗುತ್ತಿವೆ. ವರುಣದೇವ ಜುಲೈತಿಂಗಳಿನಲ್ಲಿಯೂ ಹೀಗೆ ಮಳೆ ಸುರಿಸಿದರೆ, ರಾಜ್ಯ ನೀರಿನ ಕೊರತೆ ಎದುರಿಸಬೇಕಾಗಿಲ್ಲ.

ಲಿಂಗನಮಕ್ಕಿ ಜಲಾಶಯ ತುಂಬಿದರೆ ರಾಜ್ಯದ ವಿದ್ಯುತ್ ಕೊರತೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ. ಕೆಆರ್ಎಸ್, ಕಬಿನಿ, ಹಾರಂಗಿ ಭರ್ತಿಯಾದರೆ, ಬೆಂಗಳೂರು ಮತ್ತು ಮೈಸೂರು ನಗರಗಳಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ.

ಹೆಚ್ಚು ಮಳೆ : ಹವಾಮಾನ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂ.21ರವರೆಗೆ ರಾಜ್ಯದಲ್ಲಿ 125.1 ಮಿ.ಮೀ ಮಳೆ ಬೀಳಬೇಕಿತ್ತು. ಆದರೆ ಈ ಬಾರಿ,160.3 ಮಿ.ಮೀ ನಷ್ಟು ಮಳೆ ಬಿದ್ದಿದೆ.

ಆದ್ದರಿಂದ ರಾಜ್ಯದ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಕಬಿನಿ ಜಲಾಶಯ ಭರ್ತಿಯಾಗಲು ಕೇವಲ 7 ಅಡಿ ನೀರು ಬೇಕಾಗಿದೆ. ಸೋಮವಾರ ಸಂಜೆ ಜಲಾಶಯದ ನೀರಿನ ಮಟ್ಟ 2277 ಅಡಿ ಇತ್ತು. ಕಬಿನಿ ಜಲಾಶಯದಲ್ಲಿ 2284 ಅಡಿ ನೀರು ಸಂಗ್ರಹಿಸಬಹುದಾಗಿದೆ.

ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಕೆಆರ್ಎಎಸ್ ನಲ್ಲಿ 79.90 ಅಡಿ ನೀರು ಭರ್ತಿಯಾಗಿದೆ. ಕೆಆರ್ಎಸ್ ಭರ್ತಿಆಗಲು 124.80 ಅಡಿ ನೀರಿನ ಅವಶ್ಯಕತೆ ಇದೆ.

ರಾಜ್ಯಕ್ಕೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯದಲ್ಲಿ 1760 ಅಡಿ ನೀರು ಸೋಮವಾರ ದಾಖಲಾಗಿತ್ತು. ಜಲಾಶಯದ ಒಟ್ಟು ಗಾತ್ರ 1819 ಅಡಿಗಳಾಗಿದೆ. ರಾಜ್ಯದ ಇತರ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಸೋಮವಾರ ಸಂಜೆ ದಾಖಲಾದಂತೆ ಹೀಗಿದೆ.

ಜಲಾಶಯ ಇಂದಿನ ಮಟ್ಟ ಗರಿಷ್ಟ ಮಟ್ಟ
ಆಲಮಟ್ಟಿ 510.5 519.60 ಮೀ
ಭದ್ರಾ 125.30 186 ಅಡಿ
ತುಂಗಭದ್ರಾ 1590.27 1633 ಅಡಿ
ಹಾರಂಗಿ 2831.45 2,859 ಅಡಿ
ಕೆಆರ್ಎಸ್ 79.90 124.80 ಅಡಿ

English summary
Heavy rains claimed at Karnataka on June month. So Water levels in all major dams in state continue to rise. Kabini, KRS, Linganamakki and other dams water levels increasing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X