ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆ ಹೆಲಿಕಾಪ್ಟರ್ ಪತನ, ಯಾತ್ರಿಗಳ ಸಾವು

By Mahesh
|
Google Oneindia Kannada News

ಡೆಹ್ರಾಡೂನ್, ಜೂ.25: ಜಲಪ್ರಳಯದ ನಂತರ ಉತ್ತರಾಖಂಡ್ ಜಿಲ್ಲೆಯಲ್ಲಿ ಮಂಗಳವಾರ ಮತ್ತೊಂದು ದುರಂತ ಸಂಭವಿಸಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ವಾಯುಸೇನೆ ಹೆಲಿಕಾಪ್ಟರ್ ಪತನಗೊಂಡಿದ್ದು, ಸುಮಾರು 8 ಜನ ಸಾವನ್ನಪ್ಪಿರುವ ಪ್ರಾಥಮಿಕ ವರದಿಗಳು ಬಂದಿತ್ತು. ಅದರೆ, ನಂತರ ಕಾಪ್ಟರ್ ನಲ್ಲಿದ್ದ ಎಲ್ಲಾ 20 ಜನ ಪ್ರಯಾಣಿಕರು, ಸಿಬ್ಬಂದಿಗಳ ಶವ ಬುಧವಾರ ಪತ್ತೆಯಾಗಿದೆ.

ಭಾರತೀಯ ವಾಯುಸೇನೆಗೆ ಸೇರಿದ ಸುಸಜ್ಜಿತ ಹೆಲಿಕಾಪ್ಟರ್ ನಲ್ಲಿ ಮೂವರು ಸಂತ್ರಸ್ತರು ಹಾಗೂ ಐವರು ಯೋಧರು ಇದ್ದರು ಎನ್ನಲಾಗಿದೆ. ಗೌರಿಕುಂಡದ ಬಳಿ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಮೋಡದ ಮರೆಯಲ್ಲಿ ಸಿಲುಕಿ ದಾರಿ ಕಾಣದೆ ಕುಸಿದಿದೆ ಎಂದು ತಿಳಿದು ಬಂದಿದೆ.

ಸೋಮವಾರ(ಜೂ.24) ಹವಾಮಾನ ಇಲಾಖೆ ಪ್ರತಿಕೂಲ ಹವಾಮಾನ ಎದುರಾಗುವ ಎಚ್ಚರಿಕೆ ನೀಡಿತ್ತು. ಮುಂದಿನ 72 ಗಂಟೆಗಳ ಕಾಲ ಮಳೆ, ಮೋಡ ಕೇದಾರನಾಥ ಕಣಿವೆಯನ್ನು ಆವರಿಸಲಿದೆ ಎಂದಿತ್ತು. ಆದರೆ, ಏರ್ ಛೀಫ್ ಮಾರ್ಷಲ್ ಬ್ರೌನ್ ಅವರು ಸಂತ್ರಸ್ತರಿಗೆ ಅಭಯ ನೀಡಿ, ಪರಿಹಾರ ಕಾರ್ಯ ಜಾರಿಯಲ್ಲಿಡಲಾಗುತ್ತದೆ ಎಂದಿದ್ದರು.

Another tragedy in U'khand: Rescue chopper crashes, 8 dead

ಬಲಿಷ್ಠ ಹೆಲಿಕಾಪ್ಟರ್: ಗೌರಿಕುಂಡದ ಬೆಟ್ಟಕ್ಕೆ ಬಡಿದು ಹಲವಾರ ಸಾವಿಗೆ ಕಾರಣವಾದ ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ಎಂಐ-17 ವಿ5 ಸಂತ್ರಸ್ತರ ರಕ್ಷಣೆಗಾಗಿ ಕೇದಾರನಾಥಕ್ಕೆ ಬಂದಿತ್ತು. ಅಲ್ಲಿಂದ ಗೌರಿಕುಂಡದ ಹಾದಿಯ ಹಿಡಿದಿತ್ತು. ಆದರೆ, ಮಾರ್ಗಮಧ್ಯದಲ್ಲಿ ದುರಂತ ಅಪಘಾತಕ್ಕೀಡಾಗಿದೆ.

ರಷ್ಯಾ ನಿರ್ಮಿತ ಸುಸಜ್ಜಿತ ವಿಮಾನ 2004ರಲ್ಲಿ ಸುನಾಮಿ ಸಂತ್ರಸ್ತರ ನೆರವಿಗೆ ಬಳಕೆಯಾಗಿತ್ತು. ನಂತರ 2005ರಲ್ಲಿ ಕಾಶ್ಮೀರದಲ್ಲಿ ಹಿಮಪಾತದಲ್ಲಿ ಸಿಲುಕಿದ ಸಂತ್ರಸ್ತರ ರಕ್ಷಣೆಗೂ ಇದೇ ಮಾದರಿ ಹೆಲಿಕಾಪ್ಟರ್ ಬಳಕೆಯಾಗಿತ್ತು. ಹೆಲಿಕಾಪ್ಟರ್ ಸಾಮರ್ಥ್ಯ ಗಮನಿಸಿದ ವಾಯುಸೇನೆ 2008ರಲ್ಲಿ ಹೆಚ್ಚಿನ ಹೆಲಿಕಾಪ್ಟರ್ ಗಾಗಿ ಬೇಡಿಕೆ ಒಡ್ಡಿತ್ತು.

ಮಧ್ಯಮ ಗಾತ್ರದ ಹೆಲಿಕಾಪ್ಟರ್ ಎಂಐ-17 ವಿ5 ಗೆ 5 ಟನ್ ಲೋಡ್ ಹೊರುವ ಸಾಮರ್ಥ್ಯವಿದೆ. ಆನ್ ಬೋರ್ಡ್ ಹವಾಮಾನ ರಾಡರ್, ಆಟೋ ಪೈಲಟ್, ಅತ್ಯಾಧುನಿಕ ಏವಿಯಾನಿಕ್, ನೈಟ್ ವಿಷನ್ ಹಾಗೂ ಗಾಜಿನ ಕಾಕ್ ಪಿಟ್ ಹೊಂದಿದೆ.

ಕಾರ್ಗೋ ಕಾಪ್ಟರ್ ಗಳು 4,500 ಕೆಜಿ ಹಾಗೂ ಟೇಕ್ ಆಫ್ ತೂಕ 13,000 ಕೆಜಿ ಇದೆ. ಸಾಮಾನ್ಯವಾಗಿ 36ಕ್ಕೂ ಸಶಸ್ತ್ರ ಯೋಧರ ಪಡೆಯನ್ನು ಇದು ಹೊತ್ತೊಯ್ಯುತ್ತದೆ.

ಸುಮಾರು 80ಕ್ಕೂ ಅಧಿಕ ಎಂಐ-178 ಹೆಚ್ಚಿನ ಕಾಪ್ಟರ್ ಒದಗಿಸುವಂತೆ ರಷ್ಯಾ ದೇಶದ ಜೊತೆ ಭಾರತ 2008ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಭಾರತೀಯ ವಾಯುಸೇನೆ, ಗೃಹ ಸಚಿವಾಲಯ, ಕೇಂದ್ರ ಪ್ಯಾರಾ ಮಿಲಿಟರಿ ಸೇವೆ ಸೌಲಭ್ಯಕ್ಕೆ ಈ ಹೆಲಿಕಾಪ್ಟರ್ ಗಳು ಬಳಕೆಯಲ್ಲಿವೆ.

English summary
Another tragedy struck Uttarakhand on Tuesday, June 25. A rescue chopper crashed in the flood-ravaged state. At least eight people were feared to be dead.According to sources, five army officials and three civilians died when the Indian Air Force (IAF) chopper crashed near Gaurikund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X