ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ಮೈ ಗಾಡ್, ಪ್ಲೀಸ್ ಕ್ಲೀನ್ ದ ಬೆಂಗಳೂರು!

By Prasad
|
Google Oneindia Kannada News

Oh my God, Please clean up Bangalore
ಬೆಂಗಳೂರಲ್ಲಿ ದೇವರನ್ನು ಸೃಷ್ಟಿಸುವುದು ಮತ್ತು ಅದಕ್ಕೆ ಹೆಸರಿಡುವುದು ಮಕ್ಕಳನ್ನು ಹುಟ್ಟಿಸಿ ಹೆಸರಿಡುವುದಕ್ಕಿಂತ ಸಲೀಸು ಮತ್ತು ಲಾಭದಾಯಕ :)

ಕಲ್ಲಿಗೊಂದು ಕುಂಕುಮ ಇಟ್ಟು ಹೂ ಹಾಕಿದರೆ ಅದು ದೇವರಾಗುತ್ತದೆ!

ಬೆಂಗಳೂರಲ್ಲಿ ದೇವರಿಗೂ ರೌಡಿಗಳಿಗೂ ಸುಲಿಗೆ ವಿಷಯದಲ್ಲಿ ಹಾಗೂ ಹೆಸರಿನ ವಿಷಯದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ..

ಪೇಟೆ ನಾಗ, ಸ್ಲಂ ಬಾಲ, ಕೋಟೆ ಸೀನ ಅಂತ ಹೆಸ್ರುಗಳಿರೋ ಹಾಗೆ... ದೇವ್ರಿಗೂ ಅಷ್ಟೇ...

ಸರ್ಕಲ್ಲಲ್ಲಿದ್ರೆ.... ಸರ್ಕಲ್ ಮಾರಮ್ಮ
ಮೋರಿ ಪಕ್ಕ ಇದ್ರೆ... ಮೋರಿ ಮಾರಮ್ಮ
ನಿಮ್ಹಾನ್ಸ್ ಹತ್ರ ಇದ್ರೆ..... ಮೆಂಟ್ಲು ಮಾರಮ್ಮ
ಮಾರ್ಕೆಟಲ್ಲಿದ್ರೆ ... ಮಾರ್ಕೆಟ್ ಮಾರಮ್ಮ

ಮಿಂಟೋ ಆಸ್ಪತ್ರೆ ಹತ್ರ ಇರೋ ಆಂಜನೇಯ.. ಕ್ರಿಶ್ಚಿಯನ್ ಆಗಿದಾನೆ... ಅವ್ನೀಗ ಮಿಂಟೋ ಆಂಜನೇಯ.. (money minting?)

ಮೆಜೆಸ್ಟಿಕ್ ಅಣ್ಣಮ್ಮ... ಕಾಟನ್ ಪೇಟೆ ಕಾಳಮ್ಮ... ಶಿವಾಜಿನಗರ ಸೀತಮ್ಮ... ಅಲ್ಸೂರ್ ಆಂಜನೇಯ.. ಲೇಔಟ್ ಆಂಜನೇಯ.. ಯಪ್ಪಾ.....

ಕ್ಲೀನ್ ದ ಸಿಟಿ..... ದಿಸ್ ಈಸ್ ಮೈ ಆರ್ಡರ್....

***
ಹೀಗೆ ಸಾಗುತ್ತದೆ ಸಾಗರ ಮೂಲದ ಆದರೆ ಬೆಂಗಳೂರಿನಲ್ಲಿರುವ ಫೇಸ್ ಬುಕ್ ಸ್ನೇಹಿತ ನವೀನ್ ಸಾಗರ್ ಅವರ ಯೋಚನಾ ಲಹರಿ. ಏನೋ ಬರೆಯಲು ಮನಸಲ್ಲೇ ನೋಟ್ಸ್ ಮಾಡಿಕೊಳ್ಳುವಾಗ ಬಂದ ಲೈನ್ಸುಗಳಿವು ಎಂದು ನವೀನ್ ತಮ್ಮ ಹಾಸ್ಯಮಿಶ್ರಿತ ಕಾಳಜಿಯನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ.

ಏನ್ ದೇವ್ರೂ, ಕ್ಯಾಂಟೋನ್ಮೆಂಟ್ ಕಾಳಿ, ಎಂಜಿ ರೋಡ್ ಮಾದೇಶ್ವರ ಬಿಟ್ಟೇಬಿಟ್ರಲ್ಲ ಅಂತ ಒಬ್ಬರು ಹಾಸ್ಯಚಟಾಕಿ ಹಾರಿಸಿದ್ದರೆ, ಹೇಯ್ ನವೀನ್, ಮೈಸೂರ್ ರೋಡಲ್ಲಿರೋ ಪ್ಲೇಗ್ ಮಾರಮ್ಮ ಹೆಸರು ಸೇರಿಸಿಯೇ ಇಲ್ಲ. ಹಿಂಗಾದ್ರೆ, ಪ್ಲೇಗ್ ಮಾರಮ್ಮ ಸಿಟ್ಟಿಗೇಳಬಹುದು ಎಂದು ಸೀರಿಯಸ್ಸಾಗಿ ನವೀನ್ ಕಾಲೆಳೆದಿದ್ದಾರೆ.

***
ಕಸ ವಿಲೇವಾರಿಯಾಗದೆ ಗಬ್ಬೆದ್ದುಹೋಗುತ್ತಿರುವ ಬೆಂಗಳೂರು ಒತ್ತಟ್ಟಿಗಿರಲಿ, ಇಂಥ ಹೊಸ ನಾಮಾವಳಿಗಳಿಂದ ದೇವರನ್ನು ಜನರು ಆಟದ ವಸ್ತು ಮಾಡಿಕೊಂಡಿದ್ದಾರೆ. ಇಂಥ ಏನೇನೋ ಹೆಸರು ಇಡುವುದರ ಬದಲು ಸ್ವಚ್ಛ ಮಾರಮ್ಮ, ಶುದ್ಧ ಕಾಳಮ್ಮ ಅಂತ ಹೆಸರಿಟ್ಟು ದೇವಸ್ಥಾನದ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮತ್ತು ಶುದ್ಧವಾಗಿಟ್ಟುಕೊಳ್ಳಲಿ ನೋಡೋಣ. [ಕೃಪೆ : ನವೀನ್ ಸಾಗರ್ ಫೇಸ್ ಬುಕ್ ಪುಟ]

English summary
Christening deity and temple is easier than giving birth and naming child in Bangalore. Circle Maramma, Minto Anjaneya, Mantlu Maramma etc etc. Do we need this kind of names to the temples to identify? Asks Facebook friend Naveen Sagar, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X