ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್ ಗಳಲ್ಲಿ ಪರಿಚಾರಕಿಯರು ಬೇಡ : ಹೈಕೋರ್ಟ್

|
Google Oneindia Kannada News

high court
ಬೆಂಗಳೂರು, ಜೂ.25 : ಬಾರ್ ಗಳಲ್ಲಿ ಮಹಿಳಾ ಪರಿಚಾರಕಿಯರನ್ನು ನೇಮಕ ಮಾಡಿಕೊಳ್ಳಬಾರದು ಎಂದು ಷರತ್ತು ವಿಧಿಸಿರುವ ಹೈ ಕೋರ್ಟ್, ಬಾರ್ ಅಂಡ್‌ ರೆಸ್ಟೋರೆಂಟ್‌ಗಳ ಕಾರ್ಯ ಚಟುವಟಿಕೆಗಳ ಕುರಿತು ಮಾರ್ಗಸೂಚಿ ರಚಿಸುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.

ಬೆಂಗಳೂರು ಲೇಡಿಸ್‌ ವರ್ಕಿಂಗ್‌ ಬಾರ್ ಅಂಡ್‌ ರೆಸ್ಟೋರೆಂಟ್‌ ಓನರ್ಸ್‌ ಅಸೋಸಿಯೇಷನ್‌ ಸೇರಿದಂತೆ ಇನ್ನಿತರ ಬಾರ್ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಮೋಹನ ಶಾಂತನ ಗೌಡರ್ ಅವರ ಏಕಸದಸ್ಯ ಪೀಠ, ಮಾರ್ಗಸೂಚಿ ರಚಿಸುವಂತೆ ಸೂಚಿಸಿತು.

ಬಾರ್ ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ, ಸರ್ಕಾರ ಇತ್ತೀಚೆಗೆ ನಗರದಲ್ಲಿ ಹದಿನೇಳಕ್ಕೂ ಹೆಚ್ಚು ಬಾರ್ ಗಳನ್ನು ಮುಚ್ಚಿತ್ತು. ಇವುಗಳನ್ನು ತೆರೆಯಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಬಾರ್ ಮಾಲೀಕರಿಗೆ ಪರಿಚಾರಕಿಯರನ್ನು ನೇಮಿಸಿಕೊಳ್ಳಬಾರದು ಎಂಬ ಷರತ್ತು ವಿಧಿಸಿದೆ.

ಬಾರ್ ಮಾಲೀಕರು, ಬೀಗ ಹಾಕಿರುವ ಬಾರ್ ಅಂಡ್‌ ರೆಸ್ಟೋರೆಂಟ್‌ಗಳನ್ನು ಪುನಃ ಆರಂಭಿಸಲು ಅನುಮತಿ ನೀಡಬೇಕು. ಮದ್ಯ ಪೂರೈಸಲು ಮಹಿಳಾ ಪರಿಚಾರಕಿಯರನ್ನು ನೇಮಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದರು. ಹೇಳಿಕೆಯನ್ನು ಪುರಸ್ಕರಿಸಿದ ನ್ಯಾಯಾಲಯ, ಅನುಮತಿ ನೀಡಿದೆ.

ಮಾರ್ಗಸೂಚಿ ಶೀಘ್ರ : ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರು, ಬಾರ್, ರೆಸ್ಟೋರೆಂಟ್, ಡಿಸ್ಕೋಥೆಕ್‌ ಮತ್ತು ಲೈವ್‌ಬ್ಯಾಂಡ್‌ಗಳ ಕಾರ್ಯ ಚಟುವಟಿಕೆಗಳ ಕುರಿತು ಮಾರ್ಗಸೂಚಿ ರಚಿಸಲು ಜೂನ್‌ 21ರಂದು ಅಧಿಕಾರಿಗಳು ಹಾಗೂ ಬಾರ್ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ.

ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸಿದ್ದು, ಒಂದು ವಾರದಲ್ಲಿ ಮಾರ್ಗಸೂಚಿ ರಚಿಸಲಾಗುವುದು ಎಂದು ನ್ಯಾಯಾಯಲಕ್ಕೆ ತಿಳಿಸಿದರು. ಸರ್ಕಾರದ ಮಾರ್ಗಸೂಚಿ ಪ್ರಕಟವಾಗುವ ತನಕ ಕೇವಲ ಪುರುಷರು ಮದ್ಯ ಪೂರೈಕೆ ಮಾಡಬೇಕು ಎಂದು, ಆದೇಶಿಸಿತು.

English summary
The High Court of Karnataka on Monday, June 24 allowed owners of bars and restaurants to carry on their business with a rider that they will not employ women for at least a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X