ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಕಾ ಮಮ್ಮಿಗಳು ಹೇಳುವ ರೋಚಕ ಕಥೆಗಳು

By Prasad
|
Google Oneindia Kannada News

ಹದಿನೈದು ವರ್ಷದ ಆ ಬಾಲಕಿಯ ನೀಳ ಕೇಶರಾಶಿಯಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಹೇನೂ ಇನ್ನೂ ಹಾಗೇ ಇದೆ. ಆಕೆಯ ಮೇಲಿನ ತ್ವಚೆ ಇನ್ನೂ ಜೀವಂತವಿರುವ ಮನುಷ್ಯನ ತ್ವಚೆಯಂತಿದೆ. ಆಕೆಯ ಹೃದಯ ಮತ್ತು ಪುಪ್ಪುಸದಲ್ಲಿ ರಕ್ತ ಇನ್ನೂ ಹಾಗೆಯೇ ಇದೆ. ಕುಳಿತ ಸ್ಥಳದಲ್ಲಿಯೇ ನಿದ್ದೆಗೆ ಜಾರಿದಂತೆ ಆ ಬಾಲಕಿ ಕಂಡುಬರುತ್ತಾಳೆ.

ಇದು ಕೆಲವರ್ಷಗಳ ಹಿಂದೆ ಅರ್ಜೆಂಟಿನಾದಲ್ಲಿರುವ ಅಗ್ನಿಪರ್ವತದಲ್ಲಿ 22 ಸಾವಿರ ಅಡಿ ಎತ್ತರದಲ್ಲಿ ಸಿಕ್ಕಿರುವ ಮೂರು ದೇಹಗಳಲ್ಲಿ ಒಬ್ಬಳಾಗಿರುವ ಈ ಬಾಲೆ ಸತ್ತಿದ್ದು ಇಂದುನಿನ್ನೆಯಲ್ಲ. ಬರೋಬ್ಬರು 500 ವರ್ಷಗಳ ಹಿಂದೆ. ಹೌದಾ, ಓ ಮೈ ಗಾಡ್ ಎಂದು ಉದ್ಗರಿಸುತ್ತಲೇ ಈ ಮಮ್ಮಿಗಳ ಹಿನ್ನೆಲೆ ತಿಳಿದರೆ, ಬೆನ್ನುಹುರಿಯ ಆಳದಲ್ಲಿ ಐಸ್ ಕೋಲ್ಡ್ ಸಿಡಿಲು ಹೊಡೆದಂತಾಗುತ್ತದೆ.

ಇವುಗಳನ್ನು ಇಂಕಾ ಮಮ್ಮಿ ಎಂದು ಕರೆಯಲಾಗುತ್ತಿದ್ದು, ಆ ಬಾಲೆಗೆ 'ದಿ ಮೇಡನ್' ಎಂದು ಹೆಸರಿಡಲಾಗಿದೆ. ಈ ಮಮ್ಮಿಗಳು ದೊರೆತಿದ್ದು ಚಿಲಿ ಗಡಿಯಿಂದ 300 ಮೈಲಿ ದೂರದಲ್ಲಿರುವ ಮೌಂಟ್ ಲುಲೈಲಕೋ ಎಂಬ ಅಗ್ನಿಪರ್ವತದ ತುತ್ತತುದಿಯಲ್ಲಿ. ಇವುಗಳು ದೊರೆತಿದ್ದು 1999ರಲ್ಲಿಯಾದರೂ ಈಗ ಅರ್ಜೆಂಟಿನಾದ ಸಾಲ್ಟಾ ಎಂಬಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅವು ಸಿಕ್ಕ ಸ್ಥಿತಿಯಲ್ಲಿಯೇ ರಕ್ಷಿಸಿಡಲಾಗಿರುವ ಅವುಗಳ ಇತಿಹಾಸವೂ ರೋಚಕವಾಗಿದೆ.

ಮಲಗಿದ ಸ್ಥಿತಿಯಲ್ಲಿಯೇ ಹುಗಿಯಲಾಯಿತು

ಮಲಗಿದ ಸ್ಥಿತಿಯಲ್ಲಿಯೇ ಹುಗಿಯಲಾಯಿತು

500 ವರ್ಷಗಳ ಹಿಂದೆ ಇಂಕಾ ನಾಗರಿಕತೆ ಇದ್ದಾಗ ಸೋಂಕಿನಿಂದ ಬಳಲುತ್ತಿದ್ದ ಮಕ್ಕಳನ್ನು ಜೀವಂತವಾಗಿಯೇ ಹುಗಿಯಲಾಗುತ್ತಿತ್ತು, ಅದೂ ಕೈಚಾಚಿದರೆ ಬಾನು ಸಿಗುವುದೇನೋ ಎಂಬಷ್ಟು ಎತ್ತರದಲ್ಲಿ, ಪರ್ವತದ ತುತ್ತತುದಿಯ ಮೇಲೆ ಹಿಮದಲ್ಲಿ ಅವರನ್ನು ಹುಗಿಯಲಾಗುತ್ತಿತ್ತು. ಅಷ್ಟು ಎತ್ತರದಲ್ಲಿ ಹೂಳಿದರೆ ಮಕ್ಕಳು ಅತ್ಯಂತ ಶುದ್ಧ ಸ್ಥಿತಿಯಲ್ಲಿ ದೇವರನ್ನು ಬೇಗನೆ ಕೂಡಿಕೊಳ್ಳುತ್ತಾರೆ ಎಂಬ ನಂಬಿಕೆ ಅಂದಿನ ಜನರಲ್ಲಿ ಬಲವಾಗಿತ್ತು.

ಎಂಥ ಸೋಂಕಿನಿಂದ ಬಳಲುತ್ತಿದ್ದಳು?

ಎಂಥ ಸೋಂಕಿನಿಂದ ಬಳಲುತ್ತಿದ್ದಳು?

ಆ ಬಾಲೆಯನ್ನು ಹೂಳಿದ ಸಂದರ್ಭದಲ್ಲಿ ಆಕೆ ಕ್ಷಯ ರೋಗದಿಂದ ಬಳಲುತ್ತಿದ್ದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಬಾಲೆಯ ತುಟಿಯ ಮೇಲಿನ ಭಾಗ ಮತ್ತು ಇಂದಿನ ಕ್ಷಯ ರೋಗಿಗಳ ರೋಗಲಕ್ಷಣವನ್ನು ಅಧ್ಯಯನ ಮಾಡಿ ಕ್ಷಯ ರೋಗ ಅಥವಾ ಪುಪ್ಪುಸ ಸೋಂಕಿನಿಂದ ಬಳಲುತ್ತಿದ್ದಿರಬಹುದು ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಮೊದಲ ಬಾರಿಗೆ ಮಮ್ಮಿಯಲ್ಲಿದ್ದ ಸೋಂಕನ್ನು ಪತ್ತೆಹಚ್ಚಲಾಗಿದೆ.

ಯಥಾಸ್ಥಿತಿಯಲ್ಲಿ ಮಮ್ಮಿಗಳ ಸಂರಕ್ಷಣೆ

ಯಥಾಸ್ಥಿತಿಯಲ್ಲಿ ಮಮ್ಮಿಗಳ ಸಂರಕ್ಷಣೆ

ದೊರೆತಿರುವ ಮೂರು ದೇಹಗಳನ್ನು ಪ್ರಯೋಗಾಲಯದಲ್ಲಿ ಜೀರೋ ಡಿಗ್ರಿ ಫ್ಯಾರನ್‌ಹೀಟ್ ತಾಪಮಾನದಲ್ಲಿ ಸಂರಕ್ಷಿಸಿ ಇಡಲಾಗಿದೆ. ಅವು ದೊರೆತಾಗ ಯಾವ ಸ್ಥಿತಿಯಲ್ಲಿದ್ದವೋ ಈಗಲೂ ಅದೇ ಸ್ಥಿತಿಯಲ್ಲಿ ಇವೆ.

ನಂಬಲು ಸಾಧ್ಯವೇ ಎನ್ನುತ್ತಿರುವ ವೈದ್ಯರು

ನಂಬಲು ಸಾಧ್ಯವೇ ಎನ್ನುತ್ತಿರುವ ವೈದ್ಯರು

ಮಕ್ಕಳ ದೇಹಗಳು 500 ವರ್ಷಗಳ ನಂತರ ಸಿಕ್ಕರೂ ಯಥಾಸ್ಥಿತಿಯಲ್ಲಿ ಇರುವುದನ್ನು ನೋಡಿ ವೈದ್ಯರು ದಂಗುಬಡಿದಿದ್ದಾರೆ, ಹೀಗೂ ಉಂಟೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಜೀವಂತವಿರುವ ಅಥವಾ ಕೆಲವೇ ವಾರಗಳ ಹಿಂದೆ ಸತ್ತಂತೆ ಮಮ್ಮಿಗಳ ಚರ್ಮ ಇನ್ನೂ ಇದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.

ಕ್ಯಾಪಕೋಚಾ ಸಂಪ್ರದಾಯ

ಕ್ಯಾಪಕೋಚಾ ಸಂಪ್ರದಾಯ

ಮಕ್ಕಳನ್ನು ಬಲಿಕೊಡುವುದು ಅಂದು ಅತಿ ವಿಶಿಷ್ಟ ಸಂಪ್ರದಾಯವಾಗಿತ್ತು. ಇದು ಯಾವುದೇ ಧಾರ್ಮಿಕ ಸಂಪ್ರದಾಯದ ಭಾಗವಗಿರದೆ, ಮಕ್ಕಳು ಅತಿ ಪರಿಶುದ್ಧರಾಗಿರುತ್ತಾರೆ ಎಂಬ ಭಾವನೆಯಿಂದ, ಆ ಮಕ್ಕಳ ಸೌಂದರ್ಯವನ್ನು ಪರಿಗಣಿಸಿ ಬಲಿ ಕೊಡಲಾಗುತ್ತಿತ್ತು.

ದೇವಮಾನವರ ಜೊತೆ ಸಂಪರ್ಕ

ದೇವಮಾನವರ ಜೊತೆ ಸಂಪರ್ಕ

ದೇವರನ್ನು ಸಂಪ್ರೀತಗೊಳಲು ಬಲಿಕೊಡಲಾಗುತ್ತಿರಲಿಲ್ಲ. ಆದರೆ, ಮಕ್ಕಳು ಸ್ವರ್ಗ ಸುಖ ಕಾಣಲಿ ಎಂಬುದು ಅವರ ಆಶಯವಾಗಿರುತ್ತಿತ್ತು. ಅದನ್ನು ಭಾರೀ ದೊಡ್ಡ ಗೌರವವೆಂದೂ ಜನರು ಪರಿಗಣಿಸುತ್ತಿದ್ದರು. ದೇವ ಮಾನವರ ಜೊತೆ ಸಂಪರ್ಕದಲ್ಲಿರಲಿ ಎಂಬ ಭಾವನೆಯಿಂದ ಈ ಆಚರಣೆ ಜಾರಿಯಲ್ಲಿರುತ್ತಿತ್ತು.

ಮತ್ತೊಂದು ಮಮ್ಮಿಯಲ್ಲಿ ಯಾವುದೇ ಸೋಂಕಿಲ್ಲ

ಮತ್ತೊಂದು ಮಮ್ಮಿಯಲ್ಲಿ ಯಾವುದೇ ಸೋಂಕಿಲ್ಲ

ಅಂದಿನ ಕಾಲದಲ್ಲಿ ರೋಗ ಲಕ್ಷಣವನ್ನು ಕಂಡುಕೊಳ್ಳುವುದು ಬಲುಕಷ್ಟದ ಕೆಲಸವಾಗಿತ್ತು. ಹಾಗಾಗಿ, ರೋಗಿಷ್ಟ ಮಕ್ಕಳನ್ನು ಅವರು ಹೂಳುತ್ತಿರಲಿಲ್ಲ. ಇದಕ್ಕೆ ಪುರಾವೆಯಾಗಿ, ದಿ ಮೇಡನ್ ಜೊತೆ ಸಿಕ್ಕ ಮತ್ತೊಬ್ಬ ಹುಡುಗನಿಗೆ ಯಾವುದೇ ಸೋಂಕಿಲ್ಲದಿರುವುದು ಪ್ರಯೋಗದಿಂದ ಕಂಡುಬಂದಿದೆ.

ಪ್ರಯೋಗಕ್ಕೆ ದಿ ಮೇಡನ್ ಬಳಕೆ

ಪ್ರಯೋಗಕ್ಕೆ ದಿ ಮೇಡನ್ ಬಳಕೆ

ದಿ ಮೇಡನ್ ಬಾಲಕಿಗೆ ತಗುಲಿದ್ದ ಪುಪ್ಪುಸ ಸೋಂಕಿನ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು, 1918ರಲ್ಲಿ ಪ್ಲೇಗ್ ಬಂದು ಅಷ್ಟೊಂದು ಜನರನ್ನು ಹೇಗೆ ಬಲಿತೆಗೆದುಕೊಂಡಿತು ಎಂದು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ.

13ನೇ ಶತಮಾನದ ಇಂಕಾ ಸಾಮ್ರಾಜ್ಯ

13ನೇ ಶತಮಾನದ ಇಂಕಾ ಸಾಮ್ರಾಜ್ಯ

ದಕ್ಷಿಣ ಅಮೆರಿಕಾದ ಪೆರು ಪ್ರದೇಶದಲ್ಲಿ 13ನೇ ಶತಮಾನದಲ್ಲಿ ಇಂಕಾ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತು. ಅವರ ಭಾಷೆ, ಜೀವನಶೈಲಿ ಎಲ್ಲವೂ ವಿಶಿಷ್ಟವಾಗಿದ್ದವು. ಪುನರುತ್ಥಾನದಲ್ಲಿ ಅವರಿಗೆ ಅಪಾರವಾದ ನಂಬಿಕೆಯಿತ್ತು. ಸಾವಿನ ನಂತರ ಮತ್ತೊಂದು ಲೋಕವಿದೆ ಎಂದು ನಂಬಿದ್ದರು. ಸ್ವರ್ಗ ಹಿಮಾಲಯದಂತೆಯೇ ಬಿಳಿ ಮತ್ತು ಪರಿಶುದ್ಧವಾಗಿದೆ ಎಂಬ ನಂಬಿಕೆಯೂ ಅವರಲ್ಲಿತ್ತು. ಹಾಗಾಗಿಯೆ ಮಕ್ಕಳನ್ನು ಬಲಿಕೊಡುವ ಪದ್ಧತಿ ಜಾರಿಯಲ್ಲಿತ್ತು.

English summary
Inca girl known as 'The Maiden', who was buried and frozen for 500 years in volcanic mountain Llullaillaco, has been unearthed and put on display in Salta, Argentina. If you read the story behind human sacrifice and their ritual one will get chill down the spinal line. The mummies are best preserved mummies so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X