• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರರ ದಾಳಿಗೆ ನಂಗಾ ಪರ್ವತ ಟ್ರೆಕ್ಕರ್ಸ್ ಬಲಿ

By Mahesh
|

ಪಾಕಿಸ್ತಾನ, ಜೂ.23: ಉತ್ತರ ಪಾಕಿಸ್ತಾನದ ಸುಂದರ ನಂಗಾ ಪರ್ವತರೋಹಣಕ್ಕಾಗಿ ವಿವಿಧ ದೇಶಗಳಿಂದ ಬಂದಿದ್ದ ಚಾರಣ ಪ್ರಿಯರನ್ನು ಸಶಸ್ತ್ರಧಾರಿಗಳು ಅಮಾನುಷವಾಗಿ ಕೊಂದಿರುವ ಘಟನೆ ನಡೆದಿದೆ.

ಚೀನಾ, ಉಕ್ರೇನ್ ಹಾಗೂ ರಷ್ಯಾ ಮೂಲದ ಸುಮಾರು 10 ಜನರ ಟ್ರೆಕ್ಕಿಂಗ್ ತಂಡದ ಸದಸ್ಯರು ಉತ್ತರ ಪಾಕಿಸ್ತಾನದ ಹೋಟೆಲ್ ವೊಂದರಲ್ಲಿ ತಂಗಿದ್ದರು. ಉಗ್ರರು ಹಠಾತ್ ದಾಳಿ ನಡೆಸಿ ಎಲ್ಲರನ್ನೂ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಶ್ವದ 9ನೇ ಅತಿ ಎತ್ತರದ ಪರ್ವತವಾದ ನಂಗಾ ಪರ್ವತದ ಬೇಸ್ ಕ್ಯಾಂಪ್ ಬಳಿ ಇರುವ ಗಿಲ್ ಜಿತ್ ಬಾಲ್ತಿಸ್ತಾನದ ಹೋಟೆಲ್ ನಲ್ಲಿ ಪರ್ವತಾರೋಹಣಕ್ಕೆ ಹೊರಟ್ಟಿದ್ದ ಉತ್ಸಾಹಿಗಳು ಬೀಡುಬಿಟ್ಟಿದ್ದರು. ಕಳೆದ ರಾತ್ರಿ ಅನಾಮಿಕ ಸಶಸ್ತ್ರಧಾರಿಗಳ ಗುಂಪೊಂದು ದಾಳಿ ನಡೆಸಿ ಹಠಾತ್ ಆಗಿ ಗುಂಡಿನ ಸುರಿಮಳೆಗೈದಿದ್ದಾರೆ.

ಉತ್ತರ ಪಾಕಿಸ್ತಾನದ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಲಿ ಶೇರ್ ಅವರು ಸುದ್ದಿಗಾರರಿಗೆ ವಿವರ ನೀಡುತ್ತಾ, ಹೋಟೆಲ್ ನಲ್ಲಿದ್ದ 10 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ. ಎಲ್ಲರೂ ನಂಗಾ ಪರ್ವತ್ ಹತ್ತಲು ಬಂದಿದ್ದರು. ಗುಂಡು ಹಾರಿಸಿದ ತಂಡದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇದು ಉಗ್ರರ ಕೃತ್ಯ ಇರಬಹುದು ಎಂದಿದ್ದಾರೆ.

5 ಜನ ಉಕ್ರೇನ್ ದೇಶದವರು, 3 ಚೀನಿಯವರು, ಒಬ್ಬ ರಷ್ಯನ್ ಹಾಗೂ ಪಾಕಿಸ್ತಾನಿ ಗೈಡ್ ಎಲ್ಲರೂ ದುರಂತ ಸಾವನ್ನಪ್ಪಿದ್ದಾರೆ. ಗಿಲ್ ಗಿತ್ ಬಾಲ್ತಿಸ್ತಾನ್ಪ್ರದೇಶದಲ್ಲಿ ಈ ಹಿಂದೆ ಕೂಡಾ ಪರ್ವತಾರೋಹಣಕ್ಕೆ ಅನೇಕ ತಂಡಗಳು ಬಂದು ಹೋಗಿವೆ. ಆದರೆ, ಯಾವುದೇ ತೊಂದರೆಯಾಗಿರಲಿಲ್ಲ. ವಿದೇಶಿ ಪ್ರವಾಸಿಗರ ಸುರಕ್ಷತೆ ಹಾಗೂ ಪಾಕಿಸ್ತಾನದಲ್ಲಿ ಟ್ರೆಕ್ಕಿಂಗ್ ಮಾಡಬಯಸುವ ಸಾಹಸಿಗಳಿಗೆ ಈ ಘಟನೆ ಎಚ್ಚರಿಕೆ ಗಂಟೆಯಾಗಿದೆ.

ನಂಗಾ ಪರ್ಬತ್ : ಬೆತ್ತಲೆ ಪರ್ವತ(naked mountain) ವಿಶ್ವದ ಅತಿ ಎತ್ತರದ 9ನೇ ಪರ್ವತವಾಗಿದೆ. ಹಿಮಾಲಯ ಪರ್ವತಶ್ರೇಣಿಯ ಪಶ್ಚಿಮ ತುದಿಯಲ್ಲಿ ನಂಗಾ ಪರ್ವತವನ್ನು ಕಾಣಬಹುದು. ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಬಾಲ್ತಿಸ್ತಾನ್, ಗಿಲ್ಜಿತ್ ಬಾಲ್ತಿಸ್ಥಾನ್ ಪ್ರದೇಶದಲ್ಲಿ ಈ ಪರ್ವತವಿದೆ.

ಬೇಸ್ ಕ್ಯಾಂಪ್ ಸಮುದ್ರ ಮಟ್ಟದಿಂದ 4000 ಮೀ(ಸುಮಾರು 13 ಸಾವಿರ ಅಡಿ) ಎತ್ತರದಲ್ಲಿದೆ. ನಂಗಾ ಪರ್ವತ ಸಮ್ಮಿಟ್ ಎತ್ತರ ಸಮುದ್ರ ಮಟ್ಟದಿಂದ 8,126 ಮೀ(26,660 ಅಡಿ) ಇದೆ. 'ಕಿಲ್ಲರ್ ಮೌಂಟನ್' ಎಂದೇ ಕರೆಯಲ್ಪಡುವ ಕಾರಕೊರಮ್ ವ್ಯಾಲಿಯ ನಂಗಾ ಪರ್ವತ ಹತ್ತುವುದು ಟ್ರೆಕರ್ಸ್ ಗಳಿಗೆ ಹಬ್ಬ ಹಾಗೂ ದೊಡ್ಡ ಸವಾಲಾಗಿದೆ. ಸಿಂಧು ನದಿ ಕಣಿವೆಯ ದಕ್ಷಿಣ ಭಾಗದ ಸುಂದರ ಪಾರ್ಶ್ವನೋಟ ಕಾಣಬೇಕಾದರೆ ನಂಗಾ ಪರ್ವತ ಹತ್ತಿ ಇಣುಕಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gunmen stormed a hotel in northern Pakistan and shot dead 10 tourists, including Chinese, Ukrainian and Russian nationals, police officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more