• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1200 ವರ್ಷದ ಹಿಂದೆ ಕೇದಾರನಾಥ ಸೃಷ್ಟಿ ಹೇಗಾಯ್ತು?

By Srinath
|

1200 ವರ್ಷದ ಹಿಂದಿನ ಕೇದಾರನಾಥ ಹೇಗೆ ನಾಶವಾಯ್ತು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ವೀಕ್ಷಿಸಿದ್ದೀರಿ. ನಿರ್ಮಲ ವಾತಾವರಣದಲ್ಲಿ ಸೌಮ್ಯವಾಗಿ ವಿರಾಜಮಾನನಾಗಿದ್ದ ಶಿವ ಅದ್ಯಾಕೋ ತಾಂಡವ ನೃತ್ಯ ಮಾಡಿ ತನ್ನ ಸುತ್ತಮುತ್ತಲ ಪರಿಸವನ್ನು ತಾನೇ ನಾಶ ಮಾಡಿರುವುದಕ್ಕೆ ಸಾಕ್ಷಿಯಂತೆ ಭಾಸವಾಗುತ್ತಿದೆ ಈಗಿನ ಕೇದರನಾಥ ದೇವಾಲಯ.

ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಕಷ್ಟಪಟ್ಟು ಇಲ್ಲಿಗೆ ಬಂದರೆ ಶಿವಪರಮಾತ್ಮ ಯಾಕೆ ಹೀಗೆ ದುರ್ದಾನ ಪಡೆದವನಂತೆ ಜಲಪ್ರಳಯ ಸೃಷ್ಟಿಸಿದ್ದಾನೆ ಎಂದು ಜನ ಆಶ್ಚರ್ಯಚಕಿತರಾಗಿದ್ದಾರೆ. ಕೇದಾರನಾಥ ಜಾಗದ ಪರಿಸ್ಥಿತಿ ಎಷ್ಟೊಂದು ರುದ್ರರೂಪಿಯಾಗಿದೆಯೆಂದರೆ ಸದ್ಯಕ್ಕೆ ಇನ್ನು ಮೂರು ವರ್ಷ ಕಾಲ ಇತ್ತ ಹೆಜ್ಜೆ ಹಾಕಬೇಡಿ ಎಂದು ಸ್ಥಳೀಯ ಆಡಳಿತ ಶಿವನ ಭಕ್ತರಲ್ಲಿ ಮೊರೆಯಿಟ್ಟಿದೆ. 8ನೇ ಶತಮಾನದ ಕೇದಾರನಾಥ ದೇವಾಲಯ ಸೃಷ್ಟಿಯ ಕಥೆ ಹೀಗಿದೆ

ಕೇದಾರನಾಥ ದೇವಾಲಯ ಜಾಗದಲ್ಲಿ ಈಗೇನಿದೆ?

ಕೇದಾರನಾಥ ದೇವಾಲಯ ಜಾಗದಲ್ಲಿ ಈಗೇನಿದೆ?

ಪ್ರಸಿದ್ಧ ನಾಲ್ಕು ಚಾರ್ ಧಾಮಗಳಲ್ಲಿ ಒಂದಾದ ಕೇದಾರನಾಥ ದೇವಾಲಯ ಜಾಗದಲ್ಲಿ ಈಗೇನಿದೆ? ಬರೀ ಕಲ್ಲಿನ ಗುಡ್ಡಗಳು, ಬುರುದೆ ಇದರ ಮಧ್ಯೆ ಪವಡಿಸಿರುವ ಹೆಣಗಳು. ಇದರ ಹೊರತಾಗಿಯೂ ಇನ್ನೂ ಸಾವಿರಾರು ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾಣ ಭಿಕ್ಷೆಗೆ ಎಡತಾಕುತ್ತಿದ್ದಾರೆ. ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಉತ್ತರಕಾಂಡದ ನಾಲ್ಕು ಪ್ರಸಿದ್ಧ ಭಕ್ತಿಧಾಮಗಳು.

ಕೇದಾರನಾಥ ಮಹತ್ವ ಏನು?

ಕೇದಾರನಾಥ ಮಹತ್ವ ಏನು?

ಅಸಲಿಗೆ ಈ ಕೇದಾರನಾಥ ದೇವಾಲಯಕ್ಕೆ ಇಷ್ಟು ಮಹತ್ವ ಬಂದಿದ್ದಾರೂ ಹೇಗೆ? ಜನ ಯಾಕೆ ಕೇದಾರನಾಥನಿಗೆ ಕೈಮುಗಿಯುವುದರಲ್ಲೇ ಜೀವನ ಧನ್ಯತೆ ಕಾಣಲು ಹಂಬಲಿಸುತ್ತಾರೆ. ದುರ್ಗಮ ಬೆಟ್ಟಗಳ ಮಧ್ಯೆ ಬೀಡುಬಿಟ್ಟಿರುವ ಈ ಭಕ್ತಿಧಾಮಕ್ಕೆ ಏಕಿಷ್ಟು ಮಹತ್ವ? ಏನಿದರ ವೈಶಿಷ್ಟ? ಬನ್ನಿ ಕೇದಾರನಾಥ ದೇವಾಲಯದ ಇತಿಹಾಸ ಗರ್ಭದಲ್ಲಿ ಏನಿದೆ ನೋಡಿಕೊಂಡು ಬರೋಣ.

ಕೇದಾರನಾಥ ಸ್ವಾಮಿಯ ಕಥೆ ಕೇಳಿ:

ಕೇದಾರನಾಥ ಸ್ವಾಮಿಯ ಕಥೆ ಕೇಳಿ:

ಮಹಾಭಾರತದ ಮಹಾಯುದ್ಧದಲ್ಲಿ (Kurukshetra) ಕೌರವರನ್ನು (ಬ್ರಾಹ್ಮಣರನ್ನು) ಸದೆಬಡಿದ ಪಾಂಡವರು ಆ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಾದರು. ಅದಕ್ಕೆ ಶಿವನನ್ನು ಸಂಪ್ರೀತಗೊಳಿಸಿ, ಆತನ ಆಶಿರ್ವಾದಕ್ಕೆ ಮೊರೆಯಿಡಲು ನಿಶ್ಚಯಿಸಿದರು. ಆದರೆ ಪಾಂಡವರ ಘನಘೋರ ಪಾತಕ ಕೃತ್ಯದ ವಿರುದ್ಧ ಶಿವ ಸೆಟೆದು ನಿಂತಿದ್ದ. ಕೋಪೋದ್ರಿಕ್ತ ಶಿವ ಪಾಂಡವರತ್ತ ಮುಖಮಾಡಲಿಲ್ಲ.

ಶಿವನ ಸಾಮ್ರಾಜ್ಯ ಹಿಮಾಲಯ

ಶಿವನ ಸಾಮ್ರಾಜ್ಯ ಹಿಮಾಲಯ

ಶಿವನನ್ನು ಒಲಿಸಿಕೊಳ್ಳಳು ಆತನ ಸಾಮ್ರಾಜ್ಯವಾದ ಹಿಮಾಲಯಕ್ಕೇ ತೆರಳುತ್ತಾರೆ. ಆದರೆ ಪಾಂಡವರಿಂದ ವಿಮುಖಗೊಂಡಿದ್ದ ಶಿವ ಸೀದಾ ಕೇದಾರ ಎಂಬ ಸ್ಥಳದಲ್ಲಿ ಕಣ್ಮರೆಯಾಗುತ್ತಾನೆ. ಆದರೆ ಶಿವನ ಆಶೀರ್ವಾದ ಪಡೆಯಲೇಬೇಕು ಎಂದು ನಿಶ್ಚಯಿಸಿದ್ದ ಪಾಂಡವರು ಶಿವನ ಸುಳಿವರಿತು ಕೇದಾರ ಜಾಗಕ್ಕೆ ಬರುತ್ತಾರೆ.

ಕೇದಾರ ಜಾಗ ಜಾನುವಾರುಗಳ ನೆಲೆವೀಡು

ಕೇದಾರ ಜಾಗ ಜಾನುವಾರುಗಳ ನೆಲೆವೀಡು

ಕೇದಾರ ಜಾಗವೋ ಜಾನುವಾರುಗಳ ನೆಲೆವೀಡಾಗಿರುತ್ತದೆ. ಶಿವ ಇಲ್ಲೊಂದು ಉಪಾಯ ಕಂಡುಕೊಳ್ಳುತ್ತಾನೆ. ಪಾಂಡವರ ಕಣ್ಣಿಗೆ ಬೀಳಬಾರದೆಂದು ನಂದಿ ರೂಪಧಾರಣೆಯಾಗಿ ಜಾನುವಾರುಗಳ ಮಧ್ಯೆ ನುಸುಳುತ್ತಾನೆ. ಪಾಂಡವರಿಗೆ ಏನೋ ಚಮತ್ಕಾರ ನಡೆದಿದೆ ಎಂಬುದು ಅರಿವಿಗೆ ಬರುತ್ತದೆ. ತಕ್ಷಣ ದೈತ್ಯದೇಹಿ ಭೀಮ ಮತ್ತಷ್ಟು ಬೃಹದಾಕಾರ ತಾಳಿ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ.

ಶಿವ ಇದಕ್ಕೆ ತಲೆಬಾಗುವನೇ!?

ಶಿವ ಇದಕ್ಕೆ ತಲೆಬಾಗುವನೇ!?

ಆಗ ಸಾಮಾನ್ಯ ಜಾನುವಾರುಗಳು ಸೈಲೆಂಟಾಗಿ ಬೆಟ್ಟಗಳ ನಡುವೆ ಅಂದರೆ ಭೀಮ ಕಾಲುಗಳ ನಡುವೆ ತಮ್ಮ ಅರಿವಿಗೆ ಬಾರದೆ ಸುಳಿದಾಡುತ್ತವೆ. ಆದರೆ ಪರಮಾತ್ಮ ಶಿವ ಇದಕ್ಕೆ ತಲೆಬಾಗುವನೇ!? ಶಿವನ ರೂಪದಲ್ಲಿದ್ದ ನಂದಿ ಭೀಮನಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತದೆ. ಆಗ ಭೀಮ ನಂದಿಯ ಮೇಲೆ ಮುಗಿಬೀಳುತ್ತಾನೆ. ಆ ಸಂದರ್ಭದಲ್ಲಿ ಭೀಮ ನಂದಿಯ ಹಿಂಭಾಗದ ತ್ರಿಭುಜಾಕೃತಿಯನ್ನು ಕೈಯಲ್ಲಿ ಹಿಡಿದುಬಿಡುತ್ತಾನೆ.

ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ

ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ

ಆಗ ಕೊನೆಗೋ ತನ್ನನ್ನು ಹಿಡಿದು, ತಮ್ಮ ಗುರಿಯನ್ನು ಸಾಧಿಸಿದ ಪಾಂಡವರ ವಿರುದ್ಧ ಕೋಪ ಶಮನ ಮಾಡಿಕೊಂಡು, ಅವರ ಪಾಪಗಳಿಗೆ ಮುಕ್ತಿ ಕರುಣಿಸಲು ನಿಜ ದರುಶನ ಕೊಡುತ್ತಾನೆ. ಅದುವೇ ಕೇದಾರನಾಥ ಜಾಗ. ಮುಂದೆ ಲೋಕಕಲ್ಯಾಣಾರ್ಥ ಭೀಮನ ಕೈಗೆ ನಂದಿ ಸಿಕ್ಕಿದ ಜಾಗದಲ್ಲಿ ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದ ಶಿವನನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಂದ ಮುಂದಕ್ಕೆ ಪಾಂಡವರು ಹಿಮಾಲಯದ ಮೂಲಕ ಸ್ವರ್ಗದ ಹಾದಿ ಹಿಡಿಯುತ್ತಾರೆ ಎಂಬಲ್ಲಿಗೆ ಅಂದಿನ ಕಥೆ ಮುಗಿಯುತ್ತದೆ.

ಕೇದಾರನಾಥ ಜನರಿಗೆ ಮುಕ್ತಿಧಾಮ

ಕೇದಾರನಾಥ ಜನರಿಗೆ ಮುಕ್ತಿಧಾಮ

ಆದರೆ ಮುಂದಕ್ಕೆ ಜನ ಆ ಕಥೆಯನ್ನು ಕೇಳಿ ಈ ಪ್ರಪಂಚದಲ್ಲಿ ತಾವು ದಿನನಿತ್ಯವೂ ನಡೆಸುವ ಕುಟಿಲೋಪಾಯ, ಕುರುಕ್ಷೇತ್ರ ಸಣ್ಣಯುದ್ಧಗಳಿಂದ ಮುಕ್ತಿ ಪಡೆಯಲು ಶಿವನ ದರುಶನ ಕೋರಿ ಕೇದಾರನಾಥ ಸ್ಥಳಕ್ಕೆ ಬರುತ್ತಾರೆ.

ಹಿಮದ ನಡುವೆ ಶುಭ್ರ ಕೇದಾರನಾಥ

ಹಿಮದ ನಡುವೆ ಶುಭ್ರ ಕೇದಾರನಾಥ

ಕೇದಾರನಾಥ ಬೆಟ್ಟ ಪ್ರದೇಶ ಶುಭ್ರ ದಿನದಂದು ನಯನಮನೋಹರವಾಗಿ ಕಾಣುತ್ತದೆ. ಕೇದಾರನಾಥ ಕಣಿವೆಯಲ್ಲಿ ಹರಿಯುವ ಗಂಗಾ ಉಪನದಿಯಾದ ಮಂದಾಕಿನಿ ಇಲ್ಲಿನ ಜೀವನದಿ. ಕೆಳಗೆ ಹರಿಯುತ್ತಾ ಅದು ರುದ್ರಪಯಾಗದಲ್ಲಿ ಅಲಕನಂದ ನದಿಯನ್ನು ಸೇರಿಕೊಳ್ಳುತ್ತದೆ.

 ಶಂಕರಾಚಾರ್ಯರ ಸಮಾಧಿಯೇ ಕೊಚ್ಚಿಹೋಗಿದೆ

ಶಂಕರಾಚಾರ್ಯರ ಸಮಾಧಿಯೇ ಕೊಚ್ಚಿಹೋಗಿದೆ

ಆದಿ ಶಂಕರಾಚಾರ್ಯರು ಜಾರಿಗೆ ತಂದ ಹಲವಾರು ಸುಧಾರಣೆಗಳಂತೆ ಕೇದಾರನಾಥ ದೇವಸ್ಥಾನದಲ್ಲಿ ಉಡುಪಿ ಅಥವಾ ಕೇರಳ ಮೂಲದವರನ್ನು ಅರ್ಚಕರಾಗಿ ನೇಮಿಸುವ ಸಂಪ್ರದಾಯ ಪಾಲಿಸಲಾಗುತ್ತದೆ. ಇದೀಗ 1,200 ವರ್ಷಗಳ ಹಿಂದಿನ ಕೇದಾರನಾಥ ಧಾಮದಲ್ಲಿದ್ದ ಆದಿ ಶಂಕರಾಚಾರ್ಯರ ಸಮಾಧಿಯೇ ಕೊಚ್ಚಿಹೋಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
North India- Worst rains- 1200-year old Uttarakhand Kedarnath temple story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more