ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಾಟ್ ಫಿಕ್ಸಿಂಗ್ : ಫ್ಲಾಟ್ ಪಡೆದ 3 ಆಟಗಾರರು ಯಾರು?

By Mahesh
|
Google Oneindia Kannada News

ಬೆಂಗಳೂರು, ಜೂ.21: ಇಂಡಿಯನ್ ಪ್ರಿಮಿಯರ್ ಲೀಗ್ ನ ಮಾಜಿ ಆಯುಕ್ತ ಲಲಿತ್ ಮೋದಿ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಮೇಲೆ ಭಾರಿ ಆರೋಪ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಕಮ್ ಬುಕ್ಕಿಯೊಬ್ಬನಿಂದ ಸಿಎಸ್ ಕೆ ತಂಡದ ಮೂವರು ಪ್ರಮುಖ ಆಟಗಾರರು ಭರ್ಜರಿ ಫ್ಲಾಟ್/ ಅಪಾರ್ಟ್ಮೆಂಟ್ ಪಡೆದಿದ್ದಾರೆ ಎಂದು ಲಲಿತ್ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಅದರೆ, ಬುಕ್ಕಿಯಾಗಲಿ, ಮೂವರು ಆಟಗಾರರ ಬಗ್ಗೆಯಾಗಲಿ ಮೋದಿ ಯಾವುದೇ ಸುಳಿವು ನೀಡಿಲ್ಲ ಹಾಗೂ ಈ ಬಗ್ಗೆ ಹೆಚ್ಚು ಹೇಳಲಾರೆ. ಅದರೆ, ನಾನು ಹೇಳುತ್ತಿರುವುದು ನಿಜ ಎಂದಿದ್ದಾರೆ.

ತ್ರಿವೇದಿ ಗತಿ ಏನಾಗಿದೆ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಪ್ರಾಸಿಕ್ಯೂಶನ್ ಸಾಕ್ಷಿಯಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲರ್ ಸಿದ್ಧಾರ್ಥ ತ್ರಿವೇದಿ ಕೂಡಾ ಬುಕ್ಕಿಗಳಿಂದ ಹಣ ಪಡೆದಿದ್ದನಂತೆ. ಆದರೆ, ಬಂಧನಕ್ಕೊಳಗಾಗುವ ಭೀತಿಯಿಂದ ಮತ್ತೆ ಬುಕ್ಕಿಗಳಿಗೆ ಮರಳಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. 2012ರಲ್ಲಿ ತ್ರಿವೇದಿ ಇಬ್ಬರು ಬುಕ್ಕಿಗಳಾದ ದೀಪಕ್ ಶರ್ಮ ಮತ್ತು ಸುನೀಲ್ ಭಾಟಿಯಾರಿಂದ 3 ಲಕ್ಷ ರೂ.ಗಳನ್ನು ಪಡೆದಿದ್ದರು.

ಇದೇ ಸಂದರ್ಭದಲ್ಲಿ ಖಾಸಗಿ ಚಾನಲೊಂದು ನಡೆಸಿದ ಕುಟುಕು ಕಾರ್ಯಾಚರಣೆಯ ಪರಿಣಾಮವಾಗಿ ದೇಶಿಯ ಕ್ರಿಕೆಟ್ ನಲ್ಲಿ ಫಿಕ್ಸಿಂಗ್ ನಡೆಸಿದ ಏಳು ಮಂದಿ ಕ್ರಿಕೆಟಿಗರು ಸಿಕ್ಕಿ ಬಿದ್ದಿದ್ದರು. ಈ ಹಂತದಲ್ಲಿ ಭೀತಿಗೊಳಗಾದ ತ್ರಿವೇದಿ ತಾನು ಬುಕ್ಕಿಗಳಿಂದ ಪಡೆದಿದ್ದ ಹಣವನ್ನು ಮರಳಿ ಬುಕ್ಕಿಗಳಿಗೆ ಹಿಂದಿರುಗಿಸಿ ಅಪಾಯದಿಂದ ಪಾರಾಗಿದ್ದರು ಎಂಬ ವಿಚಾರ ದಿಲ್ಲಿ ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ. ಅಮಿತ್ ಸಿಂಗ್ ಅವರು ತ್ರಿವೇದಿಗೆ 2010ರಲ್ಲಿ ದೇಶಿಯ ಟೂರ್ನಿಯೊಂದರಲ್ಲಿ ಬುಕ್ಕಿಗಳ ಪರಿಚಯ ಮಾಡಿಕೊಟ್ಟಿದ್ದರು.

ಅಸದ್ ರೌಫ್ ಗಿಫ್ಟ್

ಅಸದ್ ರೌಫ್ ಗಿಫ್ಟ್

ಐಪಿಎಲ್ ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಪಾಕಿಸ್ತಾನದ ಅಸದ್ ರೌಫ್ ಬುಕ್ಕಿಗಳಿಂದ ಹುಟ್ಟು ಹಬ್ಬದ ಉಡುಗೊರೆಯಾಗಿ ಸುಮಾರು ಆರು ಲಕ್ಷ ರೂ.ಬೆಲೆ ಬಾಳುವ ಕೈ ಗಡಿಯಾರ ಮತ್ತು ಚಿನ್ನದ ಸರ ಪಡೆದಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಕಳಂಕಿತ ಅಂಪೈರ್ ರೌಫ್ ತನ್ನ ಹುಟ್ಟು ಹಬ್ಬದ ದಿನದ ಮೊದಲು ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಅವರನ್ನು ಸಂಪರ್ಕಿಸಿ ತಮ್ಮ ಬರ್ಥ ಡೇ ದಿನಾಂಕದ ಬಗ್ಗೆ ಹೇಳಿದ್ದಾರೆ. ನಂತರ ...
ರೌಫ್ ಗಿಫ್ಟ್

ರೌಫ್ ಗಿಫ್ಟ್

ಅಸದ್ ಬಾಯ್ ನೀವು ತಲೆ ಕೆಡಿಸಿಕೊಳ್ಳಬೇಡಿ... ನಮಗೆ ಈ ವಿಚಾರ ಗೊತ್ತಿದೆ. ಪವನ್ ಬಾಯ್(ಬುಕ್ಕಿ)ಗೆ ಈ ವಿಚಾರ ತಿಳಿಸುವೆನು ಎಂದು ವಿಂದೂ ದಾರಾಸಿಂಗ್ ಭರವಸೆ ನೀಡುತ್ತಾರೆ. ರೌಫ್ ಕರೆಯ ಬಳಿಕ ಬುಕ್ಕಿ ಪವನ್ ಜೈಪುರ್ ಗೆ ದಾರಾ ಸಿಂಗ್ ಕರೆ ಮಾಡಿ ವಿಷಯ ತಿಳಿಸುತ್ತಾರೆ.

ನಾನು 6 ಲಕ್ಷ ರೂ. ವೌಲ್ಯದ ಕೈಗಡಿಯಾರ ಮತ್ತು ಚಿನ್ನದ ಸರವನ್ನು ಪ್ರೇಮ್ ತನೇಜಾ(ಇನ್ನೊಬ್ಬ ಬುಕ್ಕಿ) ಮೂಲಕ ಕಳುಹಿಸಿಕೊಡುವೆನು. ಅದನ್ನು ಅಸದ್ ಗೆ ನೀಡಲು ಹೇಳಿ ಎನ್ನುತ್ತಾರೆ. ಅದರೆ, ಉಡುಗೊರೆ ಕೊನೆಗೆ ಕಸ್ಟಮ್ಸ್ ಅಧಿಕಾರಿಗಳ ಕೈ ಸೇರುತ್ತದೆ.

ಚಂಡೀಲಾಗೆ ಬೇಲಿಲ್ಲ

ಚಂಡೀಲಾಗೆ ಬೇಲಿಲ್ಲ

ಕಳಂಕಿತ ಕ್ರಿಕೆಟಿಗ ಅಜಿತ್ ಚಾಂಡಿಲಾರ ಪೊಲೀಸ್ ಕಸ್ಟಡಿ ವಿಚಾರಣೆ ಕೊನೆಗೊಂಡಿದ್ದು, ದಿಲ್ಲಿ ನ್ಯಾಯಾಲಯವು ಜು.2ರ ತನಕ ಚಾಂಡಿಲಾ ನ್ಯಾಯಾಂಗ ಬಂಧನ ವಿಧಿಸಿದೆ. ಚಾಂಡಿಲಾ ಮತ್ತೆ ತಿಹಾರ್ ಜೈಲು ಸೇರಿದ್ದಾರೆ.

ರಜಾದಿನದ ನ್ಯಾಯಾಧೀಶರಾದ ರಾಜೇಂದರ್ ಕುಮಾರ್ ಶಾಸ್ತ್ರಿ ಎದುರು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಚಾಂಡಿಲಾಗೆ 12 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.

ಚಾಂಡಿಲಾ ವಿರುದ್ಧ ವಿಚಾರಣೆ ಪೂರ್ಣಗೊಂಡಿದ್ದು, ಆತ ನಮಗೆ ಅಗತ್ಯವಿಲ್ಲ. ಆತನ ವಿರುದ್ಧದ ತನಿಖೆ ಮುಂದುವರಿಯಲಿದೆ ಎಂದು ದಿಲ್ಲಿ ಪೊಲೀಸ್ ವಿಶೇಷ ದಳ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಚಾಂಡಿಲಾರನ್ನು ಜೈಲಿಗೆ ಕಳುಹಿಸಲಾಗಿದೆ.

ಕಳಂಕಿತ ಕ್ರಿಕೆಟಿಗರು

ಕಳಂಕಿತ ಕ್ರಿಕೆಟಿಗರು

ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೇ 16 ರಂದು ರಾಜಸ್ಥಾನ ರಾಯಲ್ಸ್ ನ ಮೂವರು ಕ್ರಿಕೆಟಿಗರಾದ ಎಸ್.ಶ್ರೀಶಾಂತ್, ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚವಾಣ್ ರನ್ನು ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು.

ಮೇ 28ರ ತನಕ ಪೊಲೀಸ್ ಕಸ್ಟಡಿಯಲ್ಲಿದ್ದ ಈ ಮೂವರು ಆರೋಪಿಗಳನ್ನು ಜು.18ರ ತನಕ ನ್ಯಾಯಾಂಗ ಕಸ್ಡಡಿಯಲ್ಲಿರಿಸಲಾಗಿತ್ತು. ಶ್ರೀಶಾಂತ್ ಹಾಗೂ ಅಂಕಿತ್ ಗೆ ಜಾಮೀನು ಸಿಕ್ಕಿದೆ
ದಾವೂದ್ ಜತೆ ಫಿಕ್ಸ್

ದಾವೂದ್ ಜತೆ ಫಿಕ್ಸ್

ಎಸ್.ಶ್ರೀಶಾಂತ್, ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚವಾಣ್ ರನ್ನು ಮೂವರು ಕಳಂಕಿತ ಕ್ರಿಕೆಟಿಗರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಚೋಟಾ ಶಕೀಲ್ ಆದೇಶದಂತೆ ನಡೆದುಕೊಳ್ಳುತ್ತಿದ್ದರೆಂದು ಆರೋಪಿಸಿದ್ದ ದೆಹಲಿ ಪೊಲೀಸರು ಜೂ.3 ರಂದು ಈ ಮೂವರ ವಿರುದ್ಧ ಮೋಕಾ ಕಾಯ್ದೆಯನ್ನು ಹೇರಿದ್ದರು. ಆದರೆ, ಸೂಕ್ತ ಸಾಕ್ಷಿ ಆಧಾರ ಇಲ್ಲದೆ ಪ್ರಕರಣ ಬಿದ್ದು ಹೋಗಿದೆ. ಶ್ರೀಶಾಂತ್ ಜಾಮೀನು ಪಡೆದು ಹೊರ ಬಂದಿದ್ದಾರೆ.

English summary
Former IPL commissioner Lalit Modi has alleged that three Chennai Super Kings players were given flats by a "real estate king" who is also a bookie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X