ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕಿನಲ್ಲಿ ಭಾರತದ 'ಗಂಟು' ಇಳಿಮುಖ

By Mahesh
|
Google Oneindia Kannada News

ನವದೆಹಲಿ, ಜೂ.21: ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಗಂಟು ಇಳಿಮುಖವಾಗಿದೆಯಂತೆ. ಸದ್ಯಕ್ಕೆ ವಿವಿಧ ಬ್ಯಾಂಕುಗಳಲ್ಲಿ 9 ಸಾವಿರ ಕೋಟಿ(1.42 ಬಿಲಿಯನ್ ಸ್ವಿಸ್ ಫ್ರಾಂಕ್) ಮಾತ್ರ ಇದೆಯಂತೆ. ಇದೊಂದು ದಾಖಲೆಯ ಇಳಿಕೆಯಾಗಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕಿನ ಅಧಿಕೃತ ವರದಿ ಹೇಳಿದೆ.

ವಿಶ್ವಾದ್ಯಂತ ಕಪ್ಪುಹಣದ ವಿರುದ್ದ ಹೆಚ್ಚುತ್ತಿರುವ ಜಾಗೃತಿ ಹಾಗೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕಪ್ಪುಹಣದ ವಿರುದ್ಧ ಕೈಗೊಳ್ಳುತ್ತಿರುವ ಕಠಿಣ ಕ್ರಮದಿಂದ ಕಪ್ಪುಹಣದ ಠೇವಣಿಯಲ್ಲಿ ಇಳಿಕೆಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Indian money in Swiss bank dips to record low at Rs 9,000cr

2012ರ ಅಂತ್ಯದಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಮತ್ತು ಸಂಸ್ಥೆಗಳು 1.34 ಬಿಲಿಯನ್ ಸ್ವಿಸ್ ಫ್ರಾಂಕ್ ಮೊತ್ತವನ್ನು ನೇರವಾಗಿ ಹಾಗೂ 77 ದಶಲಕ್ಷ ಸ್ವಿಸ್ ಫ್ರಾಂಕ್ ಮೊತ್ತವನ್ನು ಭಾರತೀಯರು ಬೇನಾಮಿ ಹೆಸರಿನಲ್ಲಿ ಠೇವಣಿ ಇರಿಸಿದ್ದರು. ಆದರೆ ಅಧಿಕೃತ ವರದಿಯ ಪ್ರಕಾರ ಭಾರತೀಯರ ಠೇವಣಿ ಮೊತ್ತದಲ್ಲಿ ಶೇ.35ರಷ್ಟು ಅಥವಾ 4900 ಕೋಟಿ ರು ಇಳಿಕೆಯಾಗಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್(SNB)ಜ್ಯೂರಿಚ್ ನಲ್ಲಿ ಪ್ರಕಟಿಸಿದೆ.

2012ರ ಆರಂಭದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಒಟ್ಟು 14 ಸಾವಿರ ಕೋಟಿ(2.18 ಬಿಲಿಯನ್ ಸ್ವಿಸ್ ಫ್ರಾಂಕ್) ಠೇವಣಿ ಇರಿಸಿದ್ದರು. ವಿಶ್ವದ ಇತರ ರಾಷ್ಟ್ರಗಳ ನಾಗರಿಕರು ರಹಸ್ಯವಾಗಿ ಇರಿಸಿರುವ ಠೇವಣಿ ಮೊತ್ತ 2.6 ಶತಕೋಟಿ (2007ರ ಮಾಹಿತಿ). ಆದರೆ, ಅದರಲ್ಲೂ ಗಣನೀಯ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.

ಮತ್ತೊಂದು ಪ್ರಮುಖವಾದ ವಿಚಾರವೆಂದರೆ ಸ್ವಿಸ್ ಬ್ಯಾಂಕ್ ಪ್ರಕಟಿಸಿರುವ ಮಾಹಿತಿಯಲ್ಲಿ ಭಾರತೀಯರು ಮತ್ತೊಬ್ಬರ ಹೆಸರಿನಲ್ಲಿ ಇರಿಸಲಾಗಿರುವ ಠೇವಣಿಯ ಮೊತ್ತವನ್ನು ನೀಡಿಲ್ಲ. ಅಮೆರಿಕ ಮತ್ತು ಇತರ ರಾಷ್ಟ್ರಗಳು ಸ್ವಿಸ್ ಬ್ಯಾಂಕ್ ನಲ್ಲಿ ಇರಿಸಲಾಗಿರುವ ರಹಸ್ಯ ಠೇವಣಿಗಳ ಬಗ್ಗೆ ಮಾಹಿತಿ ನೀಡುವಂತೆ ಸ್ವಿಜರ್ಲೆಂಡ್ ಮೇಲೆ ಒತ್ತಡ ಹೇರುತ್ತಿವೆ.

English summary
Indians' money in Swiss banks has fallen to a record low level of about Rs 9,000 crore (1.42 billion Swiss francs), as a global clampdown against the famed secrecy wall of Switzerland banking system made it unattractive for their global clients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X