ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರು 'ರಾಜ್'ಕೀಯಕ್ಕೆ ಯತ್ನಿಸಿದ್ದರಂತೆ!

By Srinath
|
Google Oneindia Kannada News

Tried to bring Dr Rajkumar into politics JDS Chief HD Deve Gowda
ಬೆಂಗಳೂರು, ಜೂನ್ 20- 'ಜಪ್ಪಯ್ಯ ಅಂದ್ರೂ ನಾನು ರಾಜಕೀಯಕ್ಕೆ ಬರೋಲ್ಲ. ಅದು ನನ್ನಂಥವನಿಗಲ್ಲ' ಎಂದು ಜೀವನುದ್ದದ್ದಕ್ಕೂ ತಮ್ಮ ಮಾತಿಗೆ ಅಂಟಿಕೊಂಡಿದ್ದ ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ಜೆಡಿಎಸ್‌ ಅಧ್ಯಕ್ಷ ಎಚ್‌ಡಿ ದೇವೇಗೌಡರು ಅನೇಕ ಸಲ ಯತ್ನಿಸಿದ್ದರಂತೆ.

ಆದರೆ ರಾಜಕೀಯದ ಬಗ್ಗೆ ಅದಾಗಲೇ ಚಿಕ್ಕಮನಸು ಮಾಡಿದ್ದ ವರನಟ, ದೊಡ್ಡಗೌಡರ ಒತ್ತಾಯಕ್ಕೆ ಮಣಿಯಲಿಲ್ಲ ಎಂಬುದು ಈಗ ಇತಿಹಾಸ. ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಡಾ. ಲೀಲಾವತಿ, ಬಿವಿ ರಾಧಾ ಸೇರಿದಂತೆ 13 ಹಿರಿಯ ಕಲಾವಿದರಿಗೆ ಡಿಎಸ್-ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ದೇವೇಗೌಡರು ಈ ವಿಷಯ ಹೊರಹಾಕಿದರು.

ನಟರಾಗಿ ಡಾ. ರಾಜ್ ಕುಮಾರ್ ಅವರು ತುಂಬಾ ಎತ್ತರಕ್ಕೆ ಬೆಳೆದವರು. ಅಂಥ ವ್ಯಕ್ತಿಯನ್ನು ರಾಜಕೀಯಕ್ಕೆ ಕರೆತರುವುದು ಸಮಂಯಸವಲ್ಲ' ಎಂದು ಆಗ ತಮಿಳಿನ ಖ್ಯಾತ ನಟರಾಗಿದ್ದ ಎಂಜಿ ರಾಮಚಂದ್ರನ್ ನನಗೆ ಕಿವಿಮಾತು ಹೇಳಿದರು. ಆದ್ದರಿಂದ ನಾನೂ ಆ ಪ್ರಯತ್ನವನ್ನು ಅಲ್ಲಿಗೇ ಬಿಟ್ಟೆ ಎಂದು ಗೌಡರು ಹೇಳಿದರು.

ಕಲಾವಿದರನ್ನು ಗೌರವಿಸುವುದು ಜತೆಗೆ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಸರಕಾರದ ಕರ್ತವ್ಯ. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಪಂಡರೀಭಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಷಯ ತಿಳಿದು ಸಹಾಯ ಮಾಡಿದ್ದನ್ನು ಗೌಡರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.

ಗಿರಿಜಾ ಲೋಕೇಶರ ಔದಾರ್ಯ:
ಹಿರಿಯ ಕಲಾವಿದೆ ಬಿವಿ ರಾಧಾ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಗಿರಿಜಾ ಲೋಕೇಶ್ ಅವರು ಪ್ರಶಸ್ತಿಯ ಭಾಗವಾಗಿ ತಮಗೆ ದೊರೆತ 10 ಸಾವಿರ ರೂ ನಗದನ್ನು ರಾಧಾ ಅವರಿಗೆ ನೀಡುವ ಮೂಲಕ ಮಾನವೀಯತೆ ತೋರಿದರು.

English summary
I tried maximum to bring Dr Rajkumar into politics but was not succeful said JDS Chief HD Deve Gowda. Deve Gowda was speaking at Cine awards distribution function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X