ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಮತ್ತೆ ಬರಲಿದೆ ಪೇ ಅಂಡ್ ಪಾರ್ಕ್ ವ್ಯವಸ್ಥೆ

|
Google Oneindia Kannada News

parking fee
ಬೆಂಗಳೂರು, ಜೂ.20 : ಮಹಾನಗರದ ಜನರು ಸಾರ್ವಜನಿಕ ಸ್ಥಳಗಳಲ್ಲ ವಾಹನಗಳನ್ನು ನಿಲ್ಲಿಸಲು ಮತ್ತೊಮ್ಮೆ ಹಣ ಪಾವತಿಸಬೇಕಾಗುತ್ತದೆ. ಬಿಬಿಎಂಪಿ ಮತ್ತೊಮ್ಮೆ ಪೇ ಅಂಡ್ ಪಾರ್ಕ್ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಶೀಘ್ರವೇ ಯೋಜನೆ ಶಿವಾಜಿನಗರದಲ್ಲಿ ಜಾರಿಯಾಗಲಿದೆ.

2005ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕ ಸ್ಥಳಗಳಲ್ಲಿ ಪೇ ಅಂಡ್ ಪಾರ್ಕ್ ಯೋಜನೆ ಜಾರಿಗೆ ತಂದಿತ್ತು. ನಂತರ ಅದು ರದ್ದಾಗಿತ್ತು. ಸದ್ಯ ಇದೇ ಯೋಜನೆಯನ್ನು ಪರಿಷ್ಕರಣೆ ಮಾಡಿ ಜಾರಿಗೊಳಿಸಲು ಮುಂದಾಗಿದೆ.

ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವ ಕುರಿತು ನಿರ್ಣಯ ಮಂಡಿಸಿ, ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರ ಪಾರ್ಕಿಂಗ್ ಶುಲ್ಕ ವಿಧಿಸಲು ಒಪ್ಪಿಗೆ ನೀಡಿದ್ದು, ಯೋಜನೆಯನ್ನು ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಶುಲ್ಕ ಹೇಗೆ : ನೂತನ ಯೋಜನೆ ಅನ್ವಯ ಬಿಬಿಎಂಪಿ ಸ್ಥಳ, ದಿನ ಮತ್ತು ಗಂಟೆಗಳ ಲೆಕ್ಕದಲ್ಲಿ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸಲು ಚಿಂತನೆ ನಡೆಸಿದೆ. ಸದಾ ಜನರಿಂದ ತುಂಬಿ ತುಳುಕುವ ಸ್ಥಳಗಳಾದರೆ, ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

ಪಾರ್ಕಿಂಗ್ ಶುಲ್ಕ ಮತ್ತು ಇದಕ್ಕೆ ಸಂಬಂಧಿಸಿದ ವಿವರಗಳ ಬೈಲಾವನ್ನು ನಗರ ಯೋಜನೆ, ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್ ಟಿ) ಸಿದ್ಧಪಡಿಸುತ್ತಿದೆ. ಯಾವ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಬೇಕು ಎಂದು ನಿರ್ದೇಶನಾಲಯ ಮಾರ್ಗಸೂಚಿ ತಯಾರಿಸಿ ಬಿಬಿಎಂಪಿಗೆ ನೀಡಲಿದೆ.

ಪ್ರತಿ ಬಡಾವಣೆಗೂ ಪ್ರತ್ಯೇಕ ಪಾರ್ಕಿಂಗ್ ಶುಲ್ಕ ವಿಧಿಸಲು ಚಿಂತನೆ ನಡೆದಿದೆ. ಅದರಂತೆ ಪ್ರತಿ ಬಡಾವಣೆಯಿಂದ ವರದಿ ಸಂಗ್ರಹಿಸಲಾಗುತ್ತಿದೆ. ಶಿವಾಜಿನಗರ ಬಡಾವಣೆಯ ರೂಪುರೇಷೆ ಸಿದ್ಧವಾಗಿದ್ದು, ನಗರದಲ್ಲಿ ಪೇ ಅಂಡ್ ಪಾರ್ಕ್ ಯೋಜನೆ ಇಲ್ಲಿಂದಲೇ ಜಾರಿಯಾಗಲಿದೆ.

ಜಯನಗರ, ಸದಾಶಿವನಗರ, ಬಿಬಿಎಂಪಿ ಕಚೇರಿ ಸುತ್ತಮುತ್ತಿಲಿನ ಸ್ಥಳಗಳ ಯೋಜನೆ ಸಿದ್ಧಗೊಳ್ಳುತ್ತಿದ್ದು, ಜುಲೈ ತಿಂಗಳಿನಿಂದ ಪೇ ಅಂಡ್ ಪಾರ್ಕ್ ಯೋಜನೆ ಜಾರಿಯಾಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲ್ಲಿಸುವ ಮೊದಲು ಜೇಬಿನಲ್ಲಿ ದುಡ್ಡಿದೆಯೇ ಎಂದು ನೋಡಿಕೊಳ್ಳಿ.

English summary
Bruhat Bangalore Mahanagara Palike (BBMP) will reintroduce the pay and park system soon across the city. The BBMP council had approved the new parking policy in March 2012 and sent it to the government. the government gave its green signal to the policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X