ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟೆಲ್ ಹೆಸರಿನಲ್ಲಿ ವಂಚನೆ ಜಾಲ ಪತ್ತೆ

|
Google Oneindia Kannada News

intel
ಬೆಂಗಳೂರು, ಜೂ.20 : ಪ್ರತಿಷ್ಠಿತ ಇಂಟೆಲ್ ಕಂಪನಿ ಹೆಸರಿನಲ್ಲಿ ನಿರುದ್ಯೋಗಿ ಯುವಕರಿಂದ ಹಣ ಸುಲಿಗೆ ಮಾಡಿ ವಂಚಿಸುವ ಜಾಲವೊಂದು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ವಾಕ್ ಇನ್ ಇಂಟರ್ ವ್ಯೂ ಹೆಸರಿನಲ್ಲಿ ಈ ವಂಚನೆ ನಡೆಯುತ್ತಿದೆ ಎಂದು ದೂರು ದಾಖಲಾಗಿದೆ.

ಬಹುರಾಷ್ಟ್ರೀಯ ಕಂಪನಿ ಮತ್ತು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಅಂತರ್ಜಾಲದ ಮೂಲಕ ನಿರುದ್ಯೋಗಿ ಯುವಕರಿಗೆ ಆಮಿಷವೊಡ್ಡುವ ವಂಚಕರು, ಭದ್ರತಾ ಹೆಸರಿನಲ್ಲಿ ಸಾವಿರಾರು ರೂಪಾಯಿ ಹಣ ಪಡೆದುಕೊಂಡು ವಂಚಿಸುತ್ತಿದ್ದಾರೆ.

ಇ-ಮೇಲ್ ವಂಚನೆ : ಇಂಟೆಲ್ ಕಂಪನಿ ಹೆಸರಿನಲ್ಲಿ ಅಂತರ್ಜಾಲದಲ್ಲಿ ವಾಕ್ ಇನ್ ಇಂಟರ್ ವ್ಯೂ ಜಾಹೀರಾತು ನೀಡಲಾಗುತ್ತಿದೆ. ಇದನ್ನು ನೋಡಿ, ಕಾಲೇಜು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಕರೆ ಮಾಡುತ್ತಾರೆ.

ಅವರ ವಿವಿರ ಪಡೆದುಕೊಂಡು ನಂತರ ಇ ಮೇಲ್ ಗೆ ಆರಂಭಿಕ ಸಂಬಳ 22 ಸಾವಿರ, 4 ಲಕ್ಷದವರೆಗೆ ವೇತನ ಏರಿಕೆಯಾಗಲಿವೆ. ಅನುಭವದ ಅಗತ್ಯವಿಲ್ಲ ಎಂದು ವಂಚಕರು ಮಾಹಿತಿ ನೀಡುತ್ತಾರೆ.

ನಿಮ್ಮ ಸಂದರ್ಶನ ಇಂತಹ ದಿನಾಂಕ ನಡೆಯಲಿದೆ ಎಂದು ಸಮಯ, ಸ್ಥಳದ ಮಾಹಿತಿ ನೀಡಿ, ನೀವು ಭದ್ರತಾ ಠೇವಣಿಯಾಗಿ 7,850 ರೂ. ನೀಡುವಂತೆ ನಕಲಿ ಇಂಟವ್ಯೂ ಲೆಟರ್ ಕಳಿಸಲಾಗುತ್ತದೆ. ನಂತರ ಜಾಹೀರಾತು ಅಂತರ್ಜಾಲದಿಂದ ಮರೆಯಾಗುತ್ತದೆ.

ಇಂಟೆಲ್ ಕಂಪನಿ ಹೆಸರಿನಲ್ಲಿ ನಗರದದಲ್ಲಿ ಈ ರೀತಿ ವಂಚನೆ ಮಾಡುತ್ತಿರುವ ಕುರಿತು, ಓಲ್ಡ್ ಏರ್ ಪೋರ್ಟ್ ಠಾಣೆ ಮತ್ತು ಸೈಬರ್ ಕ್ರೈಂ ಪೊಲೀಸರಿಗೆ ದೂರು ದಾಖಲಾಗಿದೆ. ಡಿಡಿ ರೂಪದಲ್ಲಿ ಹಣ ನೀಡಿದ್ದೇವೆ, ಆದರೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಸಂದರ್ಶನಕ್ಕೂ ಕರೆದಿಲ್ಲ ಎಂದು ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇಂಟೆಲ್ ಸ್ಪಷ್ಟನೆ : ನಾವು ಯಾವುದೇ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಕಂಪನಿ ಹೆಸರಿನಲ್ಲಿ ನಕಲಿ ಜಾಹೀರಾತು ನೀಡಿ ಜನರನ್ನು ವಂಚಿಸಲಾಗುತ್ತಿದೆ. ಇದನ್ನು ನಂಬಬೇಡಿ ಎಂದು ಇಂಟೆಲ್ ಕಂಪನಿ ಈಗಾಗಲೇ ಸ್ಪಷ್ಟನೆ ನೀಡಿದೆ. ನೀವು ಇಂತಹ ಜಾಹೀರಾತುಗಳ ಬಗ್ಗೆ ಎಚ್ಚರವಾಗಿರಿ.

English summary
Taking advantage of the most prestigious Intel company some people cheating to unemployed persons in Bangalore. By giving walk in interview advertising people, cheating students and unemployed persons. The case registered in city cyber crime police and other stations. intel clears that its fake advertising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X