ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಅಧ್ಯಕ್ಷರು ವಜ್ರದ ಉಂಗುರ ಕದ್ದಿದ್ದಾರಂತೆ!

|
Google Oneindia Kannada News

russia
ಲಂಡನ್, ಜೂ.18 : ಇದು ಕೇಳುವುದಕ್ಕೆ ಅಚ್ಚರಿಯಾದರೂ ಸತ್ಯ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ವಿರುದ್ದ ಉಂಗುರ ಕದ್ದ ಆರೋಪ ಕೇಳಿಬಂದಿದೆ. ನ್ಯೂ ಇಂಗ್ಲೆಂಡ್‌ ಪ್ಯಾಟ್ರಿಯಾಟ್ಸ್‌ ಫ‌ುಟ್‌ಬಾಲ್‌ ತಂಡದ ಮಾಲೀಕ ರಾಬರ್ಟ್‌ ಕ್ರಾಫ್ಟ್ ಅವರ ಉಂಗುರವನ್ನು ಪುಟಿನ್ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಆರೋಪವನ್ನು ತಳ್ಳಿ ಹಾಕಿರುವ ವ್ಲಾಡಿಮಿರ್ ಪುಟಿನ್‌ ಕಚೇರಿಯ ವಕ್ತಾರರು, ರಾಬರ್ಟ್‌ ಕ್ರಾಫ್ಟ್ ಅವರಿಗೆ ಶೀಘ್ರವೇ ಪುಟಿನ್ ಬೇರೊಂದು ಉಂಗುರ ಕಳುಹಿಸಿ ಕೊಡಲಿದ್ದಾರೆ ಎಂದು ಸ್ಪಷ್ಟನೆ ನೀಡಿ ವಿವಾದ ಬಗೆಹರಿಸಿದ್ದಾರೆ.

ಆರೋಪವೇನು : ರಾಬರ್ಟ್‌ ಕ್ರಾಫ್ಟ್ ಅವರು ಪುಟಿನ್ ಅವರ ಮೇಲೆ ಆರೋಪ ಮಾಡುತ್ತಾ, 2005ರಲ್ಲಿ ಅಮೆರಿಕದಲ್ಲಿ ನಡೆದ ಉದ್ಯಮಿಗಳ ಔತಣ ಕೂಟದಲ್ಲಿ ವ್ಲಾದಿಮಿರ್ ಪುಟಿನ್‌ ಭಾಗವಹಿಸಿದ್ದರು.

ಈ ವೇಳೆ ನಾನು ನ್ಯಾಷನಲ್‌ ಫ‌ುಟ್‌ಬಾಲ್‌ ಚಾಂಪಿಯನ್‌ ಶಿಪ್‌ ಗೆದ್ದಾಗ ನೀಡಿದ್ದ ವಜ್ರದ ಸೂಪರ್ ಬೌಲ್‌ ರಿಂಗ್‌ ಉಂಗುರವನ್ನು ಪುಟಿನ್‌ ಅವರಿಗೆ ತೋರಿಸಿದ್ದೆ. ಉಂಗುರವನ್ನು ನೋಡಿದ ಪುಟಿನ್ ತಕ್ಷಣ ಅದನ್ನು ಜೇಬಿಗಿಳಿಸಿಕೊಂಡು, ಅಲ್ಲಿಂದ ತೆರಳಿದರು ಎಂದು ಹೇಳಿದ್ದಾರೆ.

ಶ್ವೇತಭವನದ ಅಧಿಕಾರಿಗಳಿಗೆ ನಾನು ಈ ಕುರಿತು ಮಾಹಿತಿ ನೀಡಿದೆ. ಆದರೆ, ಅವರು ಇದು ರಾಜತಾಂತ್ರಿಕ ವಿಷಯ. ಉಂಗುರವನ್ನು ಉಡುಗೊರೆಯಾಗಿ ಕೊಟ್ಟೆ ಎಂದು ತಿಳಿದುಬಿಡು ಎಂದು ಸೂಚಿಸಿದ್ದರು ಎಂದು ಆರೋಪದಲ್ಲಿ ಹೇಳಿದ್ದಾರೆ.

ವರ್ಷಗಳ ಹಿಂದಿನ ಪ್ರಕರಣವನ್ನು ಕ್ರಾಫ್ಟ್ ಸಮಾರಂಭದವೊಂದರಲ್ಲಿ ಭಾನುವಾರ ರಾತ್ರಿ ಬಹಿರಂಗವಾಗಿ ಹೇಳಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಪುಟಿನ್ ಅವರ ಕಾರ್ಯಾಲಯದ ಅಧಿಕಾರಿಗಳು, ಶೀಘ್ರವೇ ಪುಟಿನ್ ಬೇರೊಂದು ಉಂಗುರವನ್ನು ಕಳುಹಿಸಿ ಕೊಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

English summary
The Russian president, Vladimir Putin, has denied insinuations that he stole a Super Bowl ring belonging to the New England Patriots owner, Robert Kraft, which is now on display in the Kremlin. Putin said he would buy Kraft another ring as a gift.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X