ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ನಲ್ಲಿ ನಗೆಪಾಟಲಾದ ಮದ್ರಾಸ್ ಹೈಕೋರ್ಟ್

By Mahesh
|
Google Oneindia Kannada News

ಬೆಂಗಳೂರು, ಜೂ.18: ಮದುವೆ, ಸಂಬಂಧ, ಸಹಮತ ಸೆಕ್ಸ್ ಬಗ್ಗೆ ಜನ ಸಾಮಾನ್ಯರಿಗೆ ಇರುವ ಕಲ್ಪನೆ, ಕಾನೂನಿನ ಅರಿವಿಗೆ ತದ್ವಿರುದ್ಧವಾಗಿ ಮದ್ರಾಸ್ ಹೈಕೋರ್ಟ್ ನೀಡಿದೆ. ಈ ತೀರ್ಪು ಹೊರ ಬಿದ್ದ ಮೇಲೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮದ್ರಾಸ್ ಹೈಕೋರ್ಟ್ ಅಕ್ಷರಶಃ ಬೆತ್ತಲಾಗಿದೆ. ಕೋರ್ಟ್ ಆದೇಶ ಪ್ರಶ್ನಿಸಿದೆ ನ್ಯಾಯಾಂಗ ನಿಂದನೆಯಾಗುವುದಿಲ್ಲವೇ ಎಂಬ ಎಚ್ಚರಿಕೆ ಸಂದೇಶದ ಜೊತೆಗೆ ಹತ್ತು ಹಲವು ಹಾಸ್ಯ ಮಿಶ್ರಿತ ಟ್ವೀಟ್ ಗಳನ್ನು 'ಪನ್' ಡಿತರು ಹರಿಬಿಟ್ಟಿದ್ದಾರೆ.

ಮದ್ರಾಸ್ ಹೈಕೋರ್ಟ್ ಕೊಟ್ಟಿದ್ದ ತೀರ್ಪಿನ ಸಾರಾಂಶ ಈ ಹಿಂದಿನ ಲೇಖನದಲ್ಲಿ ಓದಿದ್ದೀರಿ. ಕೋರ್ಟ್ ಈ ರೀತಿ ಆದೇಶ ನೀಡಲು ಏನು ಕಾರಣ? ಏನದು ಕೇಸ್ ಎಂಬುದರ ಬಗ್ಗೆ ಸ್ವಲ್ಪ ಕಣ್ಣಾಡಿಸಿ ನಂತರ ರಸಭರಿತ ಟ್ವೀಟ್ ಗಳತ್ತ ಗಮನ ಹರಿಸೋಣ..

ಆಕೆ ಮುಸ್ಲಿಂ ಸಂಪ್ರದಾಯದ ಪ್ರಕಾರ ಆತನನ್ನು 1994ರಲ್ಲಿ ಮದುವೆಯಾಗಿದ್ದಳು. 1999ರ ತನಕ ಆಕೆಯನ್ನು ಪತ್ನಿಯನ್ನು ಒಪ್ಪಿಕೊಂಡು ಸಂಸಾರ ನಡೆಸಿ ಎರಡು ಮಕ್ಕಳನ್ನು ಕರುಣಿಸಿದ್ದ. ಆದರೆ, ನಂತರ ಆಕೆ ಆತನಿಂದ ದೂರಾಗಿ ಜೀವನಾಂಶ ಕೋರಿದಳು. ಅವಳು ನನ್ನ ಪತ್ನಿಯೇ ಅಲ್ಲ ಎಂದು ಇವನು ವಾದಿಸಿದ. ಕೋರ್ಟಿನಲ್ಲಿ ಈ ಬಗ್ಗೆ ವರ್ಷಗಳ ಕಾಲ ವಿಚಾರಣೆ ನಡೆಯಿತು.

ಈ ವಿವಾದಿತ ದಂಪತಿಯ ಎರಡನೇ ಮಗು ಜನನದ ಸಂದರ್ಭದಲ್ಲಿ ಆಕೆಗೆ ಸಿಸೇರಿಯನ್ ಹೆರಿಗೆಯಾಗಿದೆ. ಇದಕ್ಕೆ ಆತನೇ ಸಹಿ ಹಾಕಿದ್ದಾನೆ. ಅಲ್ಲಿಗೆ ಇದು ಆತನದೇ ಮಗು ಹಾಗೂ ಈಕೆ ಆತನ ಪತ್ನಿ. ಅಲ್ಲದೆ ಇಬ್ಬರ ನಡುವೆ ಲೈಂಗಿಕ ಸಂಪರ್ಕ ಹೊಂದಿರುವುದಕ್ಕೆ ಯಾವುದಾದರೂ ಬಲವಾದ ಸಾಕ್ಷಿ ಇದ್ದರೆ ಸಾಕು ಅದರ ಮೂಲಕ ಇಬ್ಬರು ಪತಿ, ಪತ್ನಿ ಎಂದು ಪರಿಗಣಿಸಬಹುದು.

ಇಬ್ಬರ ನಡುವೆ ಸಾಂಪ್ರದಾಯಿಕವಾಗಿ ತಾಳಿ, ಮಂಗಳವಾದ್ಯ, ಕಬೂಲ್ ಹೇ ಎಂದು ಹೇಳದಿದ್ದರೂ ಪರ್ವಾಗಿಲ್ಲ. ಇದು ಎಲ್ಲಾ ಮತಸ್ಥರಿಗೂ ಹಾಗೂ ವಯಸ್ಕರ ಯುವಕ, ಯುವತಿಯರಿಗೂ ಅನ್ವಯ ಎಂದು ಜಸ್ಟೀಸ್ ಸಿ.ಎಸ್ ಕರ್ಣನ್ ಆದೇಶ ನೀಡಿದ್ದರು. ಮುಂದೇನಾಯ್ತು.. ಟ್ವೀಟ್ ಸರಣಿಯಲ್ಲಿ ನೋಡಿ ಆನಂದಿಸಿ...

ನಿವೃತ್ತಿ ಅವರ ಟ್ವೀಟ್

ಮದುವೆ ಯಾವಾಗ ಆದೆ ಅನ್ನೋದು ಮುಖ್ಯನಾ? ಕನ್ಯತ್ಯ ಯಾವಾಗ ಕಳೆದುಕೊಂಡೆ ಎನ್ನೋದಾ?

ಡಾ. ಶ್ವೇತಾ ಪುರಿ ಸಂದೇಶ

ಮದ್ರಾಸ್ ಹೈಕೋರ್ಟ್ ಆದೇಶವನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಇದು ಸಂಪೂರ್ಣ ಮಹಿಳಾ ಪರ ಇದೆ.

ಮುಷ್ತಾಕ್ ಪ್ರಶ್ನೆ

ಕಾಮಸೂತ್ರ ನಾಡಲ್ಲಿ ಮಂಗಳ ಸೂತ್ರಕ್ಕೆ ಬೆಲೆ ಏಲ್ಲಿ?

ಆರ್ ಜೆ ಟ್ವೀಟ್

ಈಗ ಸಲ್ಲೂ ಮದ್ವೆ ಬಗ್ಗೆ ಯಾರು ಪ್ರಶ್ನಿಸಲ್ಲ

ಸಪ್ತರ್ಷಿ ಸಂದೇಶ

ಮದ್ರಾಸ್ ಹೈಕೋರ್ತ್ ಮದುವೆ ಆದೇಶಕ್ಕೆ ಟ್ವೀಟ್ ಬಾಣ

ವಿಶಾಲ್ ಪ್ರಶ್ನೆ

ಆಧಾರ, ದಾಖಲೆ ಹೇಗೆ ಒದಗಿಸಲಿ ಎಂದು ಜಸ್ಟೀಸ್ ಗೆ ಪ್ರಶ್ನೆ

ಬಹುಪತ್ನಿತ್ವದ ಬಗ್ಗೆ ಪ್ರಶ್ನೆ

ಆದೇಶವನ್ನೇ ಪಾಲಿಸಿದರೆ ಬಹುಪತ್ನಿತ್ವದ ಬಗ್ಗೆ ಪ್ರಶ್ನೆಗಳು ಗೊಂದಲಗಳು ಹೆಚ್ಚಾಗಲಿದೆ.

ಜೋಕ್ ಒಳ್ಳೇದೆ ಆದ್ರೆ

ಕಾಮಿಡಿ ಒಳ್ಳೆಯದೇ ಆದರೆ, ಹೈಕೋರ್ಟ್ ಆದೇಶವನ್ನು ತಪ್ಪಾಗಿ ಎಲ್ಲೆಡೆ ಅರ್ಥೈಸಲಾಗಿದೆ.

ಕ್ವೀನ್ ಆಫ್ ಸೀ

ಆದೇಶದ ನಿಜಾರ್ಥ ಪಾಶ್ಚಿಮಾತ್ಯ ದೇಶಕ್ಕೆ ಹೋಲಿಸಿದರೆ ಹೀಗೆ ಇದೆ

ಟಾಪ್ ಟ್ವೀಟ್ ಕಣ್ರಿ

ಮದುವೆ ಸಂಬಂಧ ಬಗ್ಗೆ ಸನ್ನಿ ಲಿಯೋನ್ ಹಾಗೂ ಕರುಣಾನಿಧಿ ತುಲನೆ

ಅವಿನಾಶ್ ಪ್ರಶ್ನೆ

ಈ ಆದೇಶ ರೇಪಿಸ್ಟ್ ಗಳಿಗೆ ವರದಾನವಾಗುವುದಿಲ್ಲವೇ?

ಫೇಸ್ ಬುಕ್ ಸ್ಟೇಟಸ್

ಮಜುಂದಾರ್ ಟ್ವೀಟ್

ಲಿವ್ ಇನ್ ಸಂಬಂಧದ ಬಗ್ಗೆ ಇನ್ನೂ ಗೊಂದಲ ಪರಿಹಾರವಾಗಿಲ್ಲ., ಇದು ಬೇರೆ

ಮೇಘನಾ ಟ್ವೀಟ್

ಅರ್ಥ ಇಂಗ್ಲೀಷ್ ನಾಗೇ ಓದಿಕೊಳ್ಳಿ

ವಿವೇಕ್ ವಾಣಿ

ವ್ಯಾಲೆಂಟೈನ್ಸ್ ಡೇ ಇನ್ನಿಲ್ಲ. ಇನ್ನೇನಿದ್ದರೂ

English summary
It is unusual for a court judgement to go viral on social media. The Madras High Court judgement on marriage and sexual relationship was yesterday and by mid-afternoon today it was trending on top on Twitter. Why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X