ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿಮೂನ್ ಆಗಿದ್ರೆ ಸಾಕು, ಮದ್ವೆ ಊರ್ಜಿತ!

By Mahesh
|
Google Oneindia Kannada News

Couples who have premarital sex to be considered ‘married,’ says HC
ಚೆನ್ನೈ, ಜೂ.18: ಮದುವೆಯಾಗದ ಯಾವುದೇ ಜೋಡಿಗಳು ಸಹಮತ ಲೈಂಗಿಕ ಕ್ರಿಯೆಯಲ್ಲಿ ತೊಡಿಗಿದ್ದು ದೃಢಪಟ್ಟರೆ ಅಂಥಾ ಜೋಡಿಯನ್ನು ದಂಪತಿಗಳು ಎಂದು ಕರೆಯಬಹುದು ಎಂದು ಮದ್ರಾಸ್ ಹೈಕೋರ್ಟ್ ವಿವಾದಿತ ಆದೇಶ ಹೊರಡಿಸಿದೆ.

ಮದುವೆಗೆ ಮುನ್ನ ಲಿವ್ ಇನ್ ಸಂಬಂಧ, ಸಂಭೋಗ, ಸಹಮತ ಸೆಕ್ಸ್ ಬಗ್ಗೆ ಇರುವ ಕಾನೂನು, ನಡೆದು ಬಂದಿರುವ ಕ್ರಮ ಎಲ್ಲವನ್ನು ಉಲ್ಟಾ ಪಲ್ಟಾ ಮಾಡುವಂಥ ಆದೇಶವನ್ನು ಮದ್ರಾಸ್ ಹೈಕೋರ್ಟ್ ಹೊರಡಿಸಿದೆ.

ಅವಿವಾಹಿತ ಪುರುಷನಿಗೆ 21 ವರ್ಷ ಹಾಗೂ ಅವಿವಾಹಿತ ಮಹಿಳೆಗೆ 18 ವರ್ಷ ವಯಸ್ಸಾಗಿದ್ದಾರೆ. ಸಂವಿಧಾನ ಪ್ರಕಾರ ಇಬ್ಬರು ಜೊತೆಯಾಗಲು ಯಾವುದೇ ಅಡ್ಡಿಯಿಲ್ಲ.

ಹೀಗೆ ಜೊತೆಯಲ್ಲಿರುವಾಗ ಇಬ್ಬರ ನಡುವೆ ಲೈಂಗಿಕ ಕ್ರಿಯೆ ನಡೆದರೆ ಆಗ ಇಬ್ಬರು ಒಂದು ರೀತಿ ಬಂಧನ(ಕೋರ್ಟ್ ಆದೇಶದಂತೆ committment)ಕ್ಕೆ ಒಳಗಾಗುತ್ತಾರೆ. ಮುಂದಿನ ಎಲ್ಲಾ ಜೀವನ ಬದಲಾವಣೆಗೆ ಇಬ್ಬರು ಹೊಣೆಯಾಗುತ್ತಾರೆ. ಇದು ಮದುವೆಯಾಗಿರುವ ಸಂಕೇತವಾಗುತ್ತದೆ ಹಾಗೂ ಇಂಥ ಸಂಬಂಧದಲ್ಲಿರುವವರನ್ನು ದಂಪತಿಗಳು ಎಂದು ಕರೆಯಬಹುದು ಎಂದು ಕೋರ್ಟ್ ಹೇಳಿದೆ.

ಮಂಗಳಸೂತ್ರ ಹಾಕುವುದು, ಸಪ್ತಪದಿ ತುಳಿಯುವುದು, ಹಾರ ಬದಲಾಯಿಸಿಕೊಳ್ಳುವುದು, ಉಂಗುರ ತೊಡಿಸುವುದು ಅಥವಾ ಮದುವೆ ನೋಂದಾಯಿಸುವುದು ಎಲ್ಲವು ಸಾಂಪ್ರದಾಯಿಕ ವಿಧಿವಿಧಾನವಾಗಿದೆ. ಇದು ಸಮಾಜದ ನಂಬುಗೆಯ ಒಂದು ಭಾಗ ಮಾತ್ರ. ಮೇಲ್ಕಂಡ ರೀತಿಯಲ್ಲಿ ಸಂಬಂಧ ಹೊಂದಿರುವ ದಂಪತಿಗಳನ್ನು ಪತಿ, ಪತ್ನಿ ಎಂದು ಪರಿಗಣಿಸಲು ಅಡ್ಡಿಯಿಲ್ಲ ಎಂದು ಕೋರ್ಟ್ ಹೇಳಿದೆ.

ಇಬ್ಬರ ನಡುವೆ ಸಂಭೋಗ, ಲೈಂಗಿಕ ಕ್ರಿಯೆ ನಡೆದಿರುವುದಕ್ಕೆ ಸಾಕ್ಷಿ ಒದಗಿಸಿ ತಮ್ಮ ಸಂಬಂಧವನ್ನು ಮದುವೆ ಎಂದು ಊರ್ಜಿತಗೊಳಿಸಿಕೊಳ್ಳಬಹುದು. ಸೂಕ್ತ ದಾಖಲೆಗಳಿದ್ದರೆ ಅಂಥ ಮಹಿಳೆ ಇದನ್ನು ಸರ್ಕಾರಿ ದಾಖಲೆಗಳ ಪ್ರಕಾರ ಆತನ ಪತ್ನಿ ಎಂದು ಘೋಷಿಸಿಕೊಳ್ಳಬಹುದು.

ಹಾಲಿ ಚಾಲ್ತಿಯಲ್ಲಿರುವ ಎಲ್ಲಾ ನಿಯಮಗಳ ಪ್ರಕಾರ ಲೈಂಗಿಕ ಸಂಪರ್ಕ ಹೊಂದಿದ ಮಹಿಳೆ ಕೂಡಾ ತನ್ನ ಮದುವೆ ಸ್ಥಿತಿ ಗತಿ ಬಗ್ಗೆ ಕಾನೂನಿನ ಪ್ರಕಾರ ಎಲ್ಲಾ ನಿಯಮಗಳಿಗೂ ಅರ್ಹರಾಗುತ್ತಾರೆ. ಇದೇ ನಿಯಮಗಳು ಮುಂದೆ ವಿಚ್ಛೇದನ ಪಡೆಯುವಾಗಲೂ ಅನ್ವಯಿಸುತ್ತದೆ. ಲೈಂಗಿಕ ಸಂಪರ್ಕ ಹೊಂದಿದ ಮಹಿಳೆ(ಕೋರ್ಟ್ ಪ್ರಕಾರ ಪತ್ನಿ) ಅನುಮತಿ ಇಲ್ಲದೆ ಮತ್ತೊಂದು ಮದುವೆಯಾಗಲು ಪತಿಗೆ ಕಾನೂನು ಅಡ್ಡಿಯಾಗುತ್ತದೆ.

ಈ ರೀತಿ ವಿಶಿಷ್ಟ ಅದೇಶ ಹೊರಡಿಸಿದವರು ಜಸ್ಟೀಸ್ ಸಿ.ಎಸ್ ಕರ್ನಾನ್ 2006ರ ಏಪ್ರಿಲ್ ನ ಕೋಯಮತ್ತೂರು ಕೌಟುಂಬಿಕ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಲ್ಲೇಖದಂತೆ ಈ ರೀತಿ ಆದೇಶ ನೀಡಿದೆ. ಸೂಕ್ತ ದಾಖಲೆ ಒದಗಿಸದ ಕಾರಣ ಪತಿ ತನ್ನ ಪತ್ನಿಗೆ ಜೀವನಾಂಶ ನೀಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಹೆಚ್ಚಿನ ಮಾಹಿತಿ, ಪ್ರತಿಕ್ರಿಯೆ

English summary
If any unmarried couple of the right legal age “indulge in sexual gratification,” this will be considered a valid marriage and they could be termed “husband and wife,” the Madras High Court has ruled in a judgment that gives a new twist to the concept of premarital sex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X