ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ರಾತ್ರಿಯಿಂದ 108 ಆಂಬುಲನ್ಸ್ ಸೇವೆ ಸ್ಥಗಿತ

By Prasad
|
Google Oneindia Kannada News

Karnataka 108 ambulance service stopped
ಬೆಂಗಳೂರು, ಜೂ. 18 : ರೋಗಿಗಳ ತ್ವರಿತ ಸೇವೆಗಾಗಿ ಇರುವ 108 ಆಂಬುಲನ್ಸ್ ವಾಹನಗಳು ಕಳೆದ ರಾತ್ರಿಯಿಂದ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿವೆ. ಇದಕ್ಕೆ ಕಾರಣ, 108 ಸಂಖ್ಯೆಯ ಆಂಬುಲನ್ಸ್ ವಾಹನಗಳನ್ನು ನೀಡಿರುವ ಜಿವಿಕೆ ಸಂಸ್ಥೆ ಏರ್ ಟೆಲ್ ಬಿಲ್ ಪಾವತಿಸದಿರುವುದು.

ಇದರಿಂದಾಗಿ ರಾಜ್ಯಾದ್ಯಂತ 517 ಸಂಖ್ಯೆಯ ವಾಹನಗಳು ಮತ್ತು ಬೆಂಗಳೂರಿನಲ್ಲಿ ಇರುವ 69 ಆಂಬುಲನ್ಸ್ ವಾಹನಗಳು ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿವೆ. ಅವರಿಗೆ ನೀಡಲಾಗಿರುವ ಮೊಬೈಲುಗಳ ಒಳಬರುವ ಮತ್ತು ಹೊರಹೋಗುವ ಸೇವೆಯನ್ನು ಏರ್ ಟೆಲ್ ಸ್ಥಗಿತಗೊಳಿಸಿದ್ದರಿಂದ ಈ ಅಡಚಣೆ ಉಂಟಾಗಿದೆ.

ಇದರಿಂದ ಉಚಿತ 108 ಆಂಬುಲನ್ಸ್ ಸೇವೆಯಾಗಿ ಕಾದು ಕುಳಿತ ಸಹಸ್ರಾರು ಬಡ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ತ್ವರಿತ ಸೇವೆ ಸಿಗದೆ ಪರದಾಡುವಂತಾಗಿದೆ. ಉಚಿತ ಆಂಬುಲನ್ಸ್ ಸೇವೆ ದೊರೆಯದಿದ್ದರಿಂದ ಹಲವಾರು ಜನರು ದುಡ್ಡು ಕೊಟ್ಟು ಖಾಸಗಿ ಆಂಬುಲನ್ಸ್ ಮುಖಾಂತರ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.

ಆದರೆ, ಜಿವಿಕೆ ಸಂಸ್ಥೆಯ ನಾಗರಾಜ್ ಎಂಬುವವರು ಹೇಳುವುದೇನೆಂದರೆ, ಇದು ಬಿಲ್ ಪಾವತಿಸದಿದ್ದರಿಂದ ಆದ ಅಡಚಣೆಯಲ್ಲ, ಜಿವಿಕೆ ಸಂಸ್ಥೆ ಮೊಬೈಲ್ ಕರೆ ಸೇವೆಯನ್ನು ಏರ್ ಟೆಲ್ ನಿಂದ ಟಾಟಾ ಡೊಕೊಮೊಗೆ ವರ್ಗಾಯಿಸುತ್ತಿದ್ದರಿಂದ ಕರೆಗಳು ಬರುತ್ತಿಲ್ಲ. ಇದು ತಾತ್ಕಾಲಿಕ ಮಾತ್ರ, ಟಾಟಾ ಡೊಕೊಮೊ ಸೇವೆ ದೊರೆಯುತ್ತಿದ್ದಂತೆ ಆಂಬುಲನ್ಸ್ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

English summary
All over Karnataka 108 ambulance has stopped working since 17th June night, as GVK organization, which is providing ambulance service has not paid Airtel bill. GVK says it is moving from Airtel to Tata Docomo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X