ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಅಪ್ಪ-ಅಮ್ಮನ ಮಡಿಲು ಸೇರಿದ ಹೇಮಾವತಿ

By Srinath
|
Google Oneindia Kannada News

Bangalore House Arrest - Parents assist Hemavathi to recoups health,
ಬೆಂಗಳೂರು, ಜೂನ್ 18: ಏನಪ್ಪಾ 4 ವರ್ಷ ಕಾಲ ಗೃಹಬಂಧನದಲ್ಲಿದ್ದ ಹೇಮಾವತಿ ಎಂಬ ಅಮಾಯಕ ಯುವತಿ ಮತ್ತೆ ಅಪ್ಪ-ಅಮ್ಮನ ಮಡಿಲಿಗೇ ಸೇರಿದಳಾ? ಮತ್ತೆ ಆಕೆಗೆ ಏನು ಗ್ರಹಚಾರ ಕಾದಿದೆಯೋ ಎಂದು ಆತಂಕ ಪಡುತ್ತಿದ್ದೀರಾ? ಹಾಗೇನೂ ಇಲ್ಲ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಪುರಾತನ ಗಾದೇ ಮಾತೇ ಇದೆಯಲ್ಲಾ.

34 ವರ್ಷದ ಹೇಮಾವತಿಯ ಪೋಷಕರು ಅಹಿರ್ನಿಷಿ ಮಗಳ ಸೇವೆಗೆ ಬದ್ಧವಾಗಿರುವುದನ್ನು ಮನಗಂಡಿರುವ ವೈದ್ಯರು ಮತ್ತು ಅಧಿಕಾರಿಗಳು ಪೋಷಕರನ್ನು ಮನ್ನಿಸಿ, ಸಂಪೂರ್ಣವಾಗಿ ಗುಣಮುಖರಾದ ಮೇಲೆ ಹೇಮಾವತಿಯನ್ನು ಮನೆಗೆ ಕಳುಹಿಸಲು ಸಮ್ಮತಿಸಿದ್ದಾರೆ.

ಪ್ರಸ್ತುತ ಹೇಮಾವತಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಬಹುತೇಕ ಚೇತರಿಕೆ ಕಂಡುಬಂದಿದೆ. ದಿನೇ ದಿನೆ ಆಕೆ ಮಾನಸಿಕವಾಗಿಯೂ ಸದೃಢರಾಗುತ್ತಿದ್ದಾರೆ. ಆಕೆಯಲ್ಲಿ ಸಹಜ ಪ್ರವೃತ್ತಿ ಕಂಡುಬಂದಿದ್ದು, ಆಕೆಯ ಆಹಾರ/ ನಿದ್ರೆ ಸಹಜವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮಧ್ಯೆ, ಹೇಮಾವತಿಯವರ ಅಪ್ಪ ರೇಣುಕಪ್ಪ ಮತ್ತು ತಾಯಿ ಪುಟ್ಟಗೌರಮ್ಮ ಇಬ್ಬರೂ ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದು ಯಾವುದೇ ಲೋಪವಿಲ್ಲದೆ ತಮ್ಮ ಜವಾಬ್ದಾರಿಯನ್ನು ಪೂರೈಸುತ್ತಿದ್ದಾರೆ. ಹೇಮಾವತಿಯೂ ಅಪ್ಪ-ಅಮ್ಮನ ಜತೆ ಸಂತೋಷವಾಗಿ ಕಾಲಕಳೆಯುತ್ತಿದ್ದು, ಆಸ್ಪತ್ರೆಯಲ್ಲಿ ತನ್ನನ್ನು ಭೇಟಿ ಮಾಡುತ್ತಿರುವ ಸಂಬಂಧಿಕರನ್ನು ಗುರುತು ಹಿಡಿದು, ಸಹಜವಾಗಿ ಮಾತನಾಡಿಸುತ್ತಿದ್ದಾರೆ.

ಆದರೆ ಹೇಮಾವತಿಗೆ ಸ್ನಾಯುಗಳು ಇನ್ನೂ ಬಲಗೊಂಡಿಲ್ಲ. ಫಿಸಿಯೋಥೆರಪಿ ಮುಂದುವರಿದಿದೆ. ಇನ್ನೂ ಕೆಲವು ವಾರಗಳು ಆಕೆ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ನಿಮ್ಹಾನ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ವಿ ಎಲ್ ಸತೀಶ್ ತಿಳಿಸಿದ್ದಾರೆ.

English summary
Bangalore House Arrest - Parents assist Hemavathi to recoup her health. Presently Hemavathi who was confines to house arrest for 4 years by her parents is recovering in NIMHANS hospital. She may be discharged and sent to home after she recovers completely says Doctors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X