ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ನ್ಯಾನೋ ಕಾರು ಉಗ್ರರದ್ದಲ್ಲ

|
Google Oneindia Kannada News

Nano car
ಬೆಂಗಳೂರು, ಜೂ.18 : ಶನಿವಾರ ನಗರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಪ್ಪು ನ್ಯಾನೋ ಕಾರಿನ ರಹಸ್ಯ ಬಯಲಾಗಿದೆ. ಸೂರತ್ ಮೂಲದ ಪ್ರಜೆಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಬಯಲಾಗಿದೆ. ಇದರಿಂದ ಉಗ್ರರಿರಬಹುದು ಎಂಬ ಸುದ್ದಿ ಸುಳ್ಳಾಗಿದೆ.

ಮಂಗಳವಾರ ಬೆಳಗ್ಗೆ, ನಾಯಂಡನಹಳ್ಳಿಯ ಬಳಿ ಸಿಆರ್ ಎಫ್ ಯೋಧರು ಕಾರನ್ನು ಪತ್ತೆ ಹಚ್ಚಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸೂರತ್ ಮೂಲದ ಯುವಕರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರಿನಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಪ್ರಯಾಣ ಮಾಡುತ್ತಿರಲಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಇದರಿಂದ ಉಗ್ರರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬ ಸುದ್ದಿಗಳಿಗೆ ತೆರೆ ಬಿದ್ದಿದೆ. (ಬೆಂಗಳೂರಿಗೆ ಬಂದಿದ್ದಾರಂತೆ ಇಬ್ಬರು ಉಗ್ರರು)

ಕಾರಿನ ಹಿನ್ನೆಲೆ : ಸೂರತ್ ಮೂಲದ ಯುವಕರಿಬ್ಬರು ಶನಿವಾರ, ನಗರಕ್ಕೆ ರಾತ್ರಿ 9 ಗಂಟೆ ಸುಮಾರಿಗೆ ಗುಜರಾತ್ ನೋಂದಣಿ ಸಂಖ್ಯೆ ಹೊಂದಿದ್ದ ಜೆಜೆ - 05, ಸಿಆರ್ 53 ನ್ಯಾನೋ ಕಾರಿನಲ್ಲಿ ಆಗಮಿಸಿದ್ದಾರೆ. ವಾಸ್ತವ್ಯ ಹೂಡಲು ನಗರದ ಪ್ರತಿಷ್ಠಿತ ಹೋಟೆಲ್ ಗಳಿಗೆ ಭೇಟಿ ನೀಡಿದ್ದಾರೆ.

ಎಲ್ಲಿಯೂ ರೂಂಗಳು ದೊರೆಯದ ಕಾರಣ ನಗರ ಹೊರವಲಯದ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಗರದ ಹೋಟೆಲ್ ಗಳಿಗೆ ಇವರು ಭೇಟಿ ನೀಡಿದ್ದರಿಂದ, ಪ್ರತಿ ಹೋಟೆಲ್ ಸಿಸಿಟಿವಿಗಳಲ್ಲಿ ಕಾರಿನ ನಂಬರ್ ದಾಖಲಾಗಿತ್ತು. ಇದರಿಂದ ಉಗ್ರರಿರಬಹುದು ಎಂಬ ಅನುಮಾನ ಹುಟ್ಟಿಕೊಂಡಿತ್ತು.

ನಗರ ಪೊಲೀಸರು ನಾಕಾ ಬಂಧಿ ಹಾಕಿ ಕಾರಿನ ಹುಡುಕಾಟ ನಡೆಸಿದ್ದರು. ಎರಡು ದಿನಗಳ ನಂತರ ಕಾರು ನಾಯಂಡನಹಳ್ಳಿ ಸಮೀಪ ಪತ್ತೆಯಾಗಿದೆ. ಇದರಿಂದಾಗಿ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.

English summary
Bangalore black Nano car mystery solved. a Gujarat Registration number nano car found in city on Saturday, June 15 night. create the fear of Two terrorist enter into city. On Tuesday, June, 18 car found in city and Two persons arrested. they are common man not terrorist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X