ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ನರೇಂದ್ರ ಮೋದಿ

By Srinath
|
Google Oneindia Kannada News

modi-to-visit-ayodhya-to-emerges-strongest-hindu-leader
ಅಯೋಧ್ಯೆ (ಉತ್ತರಪ್ರದೇಶ), ಜೂನ್ 17: ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಉತ್ತರಪ್ರದೇಶದಲ್ಲಿ ಪ್ರಭುತ್ವ ಸ್ಥಾಪಿಸುವಂತಾಗಲು ಅವರ ಖಾಸಾ ಬಂಟ ಅಮಿತ್ ಷಾ ಅವರು ವೇದಿಕೆ ನಿರ್ಮಿಸುತ್ತಿದ್ದಾರೆ.

ಉತ್ತರಪ್ರದೇಶದ ಬಿಜೆಪಿ ಉಸ್ತುವಾರಿ ಹೊತ್ತು ಕಳೆದ ವಾರ ಆ ರಾಜ್ಯದಲ್ಲಿ ಅಡ್ಡಾಡಿರುವ ಅಮಿತ್ ಷಾ, ಲಖ್ನೋ ಅಥವಾ ವಾರಣಾಸಿಯಲ್ಲಿ ಮೋದಿಯನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಡಿಪಾಯ ಹಾಕಿದ್ದಾರೆ. ಇದಕ್ಕೆ ಪೂರಕವಾಗಿ ಈಗ

ಹಿಂದೂಗಳಿಗೆ ಸಂದೇಶ:
ಮೋದಿಯನ್ನು ಮತ್ತಷ್ಟು ಕಟ್ಟರ್ ಹಿಂದುತ್ವವಾದಿಯನ್ನಾಗಿ ರೂಪಿಸುತ್ತಿದ್ದಾರೆ. ಏನಪಾ ಅಂದರೆ ಇದೇ ಜೂನ್ 20ರಂದು ಅಯೋಧ್ಯೆಗೆ ತೆರಳಿ ಶ್ರೀರಾಮಚಂದ್ರನ ಪೂಜೆ ನೆರವೇರಿಸಲಿದ್ದಾರೆ. ಬಾಬರಿ ಮಸೀದಿ ಕೆಡವಿದ ನಂತರ ಮೋದಿ ಮೊದಲ ಬಾರಿಗೆ ರಾಮ ಜನ್ಮಭೂಮಿಗೆ ಭೇಟಿ ನೀಡುತ್ತಿದ್ದಾರೆ. ತನ್ಮೂಲಕ, ಅಡ್ವಾಣಿಯವರ ರಥಯಾತ್ರೆಯ ಚುಕ್ಕಾಣಿ ಹಿಡಿದಿದ್ದ ಮೋದಿ ಈಗ ಸ್ವತಃ ತಾವೇ ಹಿಂದುತ್ವವಾದಿಯ ಪ್ರತಿಪಾದಕರಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ.

ದಿಲ್ಲಿ ಆಡಳಿತ ಕೈಹಿಡಿಯಲು ರಾಜಕೀಯವಾಗಿ ಉತ್ತರಪ್ರದೇಶ ದೆಹಲಿಗೆ ಹತ್ತಿರ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮಿತ್ ಷಾ ಸಾಧ್ಯವಾದಷ್ಟೂ ಉತ್ತರಪ್ರದೇಶದಲ್ಲಿ ಮೋದಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ.

ಇದುವರೆಗೂ ಗುಜರಾತಿನ ಕಾರ್ಪೊರೇಟ್ ಜಗತ್ತಿನ ವಿಶ್ವಾಸ ಗಳಿಸಿ, ಅಲ್ಲಿ ಅಪೂರ್ವ ಯಶಸ್ಸನ್ನು ಸಾಧಿಸಿರುವ ಮೋದಿ ಅವರು ಈಗ ಬಿಜೆಪಿಯ ಹಿಂದುತ್ವ ಅಜೆಂಡಾಗೆ ಮರುಜೀವ ನೀಡುವ ಮೂಲಕ ಹಿಂದೂಗಳ ಓಲೈಕೆಗೆ ಮುಂದಾಗಿದ್ದಾರೆ. ನಿತೀಶ್ ಕುಮಾರ್ ಅವರ ಜೆಡಿಯು ಜತೆಗಿನ ಸಂಬಂಧ ಕಡಿದುಹೋಗಿರುವುದಕ್ಕೆ ಒಂದಿನಿತೂ ದುಃಖಿತರಾಗದ ಮೋದಿ, ತಮ್ಮ ಪ್ರಧಾನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ.

English summary
Gujarat CM Narendra Modi is to visit Ayodhya on June 20. Hindutva poster boy and Gujarat Chief Minister Narendra Modi, who reinvented himself by playing the development card after the 2002 Godhra riots and is considered the front-runner in the race to become the BJP’s prime ministerial candidate, is expected to visit Ayodhya on June 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X