ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಂಸಾಹಾರಿಗಳ ದೇಣಿಗೆ ಬೇಡವೇ ಪೇಜಾವರರೇ?

|
Google Oneindia Kannada News

 CITU secretary Prasanna Kumar challenge to Udupi Pejawar Seer
ಕಾರವಾರ, ಜೂ 17: ಜಾತಿಪದ್ದತಿ, ಸಹಪಂಕ್ತಿ ಭೋಜನವನ್ನು ವಿರೋಧಿಸುವ ಉಡುಪಿ ಪೇಜಾವರ ಶ್ರೀಗಳು ಬಸವಣ್ಣನವರ ವ್ಯಾಖ್ಯಾನವನ್ನು ತಪ್ಪಾಗಿ ಉಲ್ಲೇಖಿಸುತ್ತಾರೆ.

ಆಹಾರ ಪದ್ದತಿ ಬಗ್ಗೆ ಮಾತನಾಡುವ ನೀವು ಮಾಂಸಹಾರಿಗಳು ನೀಡುವ ದೇಣಿಗೆಯನ್ನು ವಿರೋಧಿಸಿ ನೋಡೋಣ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ಪೇಜಾವರ ಶ್ರೀಗಳಿಗೆ ಸವಾಲಿಸೆದಿದ್ದಾರೆ.

ಉಡುಪಿ ಕೃಷ್ಣಮಠದಲ್ಲಿ ಆಹಾರ ಪದ್ದತಿಗೆ ಅನುಗುಣವಾಗಿ ಪಂಕ್ತಿ ಭೋಜನ ಸಮರ್ಥಿಸಿಕೊಳ್ಳುವ ನೀವು, ದಲಿತರ ಕೇರಿಗೆ ಹೋಗಿ ಪಾದಪೂಜೆ ಮಾಡಿಸಿಕೊಳ್ಳುತ್ತೀರಾ. ಉಡುಪಿ ಕೃಷ್ಣನಿಗೆ ಸಸ್ಯಾಹಾರಿಗಳು ಮಾತ್ರ ಭಕ್ತರೇ?

ಮಾಂಸಾಹಾರಿಗಳು ದೇವಾಲಯಕ್ಕೆ, ಮಠಕ್ಕೆ, ಮಠದ ಇತರ ಸಮಾಜಮುಖಿ ಕೆಲಸಕ್ಕೆ ಕಾಣಿಕೆ, ದೇಣಿಗೆ ನೀಡುತ್ತಿಲ್ಲವೇ? ಅದನ್ನು ನೀವು ತಿರಸ್ಕರಿಸುತ್ತೀರಾ ಎಂದು ಪ್ರಸನ್ನ ಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪ್ರಸನ್ನ ಕುಮಾರ್, ನಿಮ್ಮ ದ್ವಂದ್ವ ನಡೆ RSS ಪರ ನಿಲುವನ್ನು ತೋರುತ್ತದೆ. ಇದುವರೆಗೂ ನೀವು ಮಡೆಸ್ನಾನದ ಬಗ್ಗೆ ಖಡಕ್ ನಿರ್ಧಾರಕ್ಕೆ ಬಂದಂತಿಲ್ಲ. ಜಾತಿಪದ್ದತಿ ಎನ್ನುವ ಸಾಮಾಜಿಕ ಪಿಡುಗನ್ನು ಬುಡ ಸಮೇತ ನಿರ್ಮೂಲನ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

English summary
CITU National Secretary Prasanna Kumar challenges to Udupi Pejawar Seer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X