ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿನ್ನಾ ಮನೆಗೆ ಬಾಂಬಿಟ್ಟು, ಧ್ವಂಸಗೊಳಿಸಿದ ಉಗ್ರರು

|
Google Oneindia Kannada News

Muhammad Ali Jinnah
ಇಸ್ಲಾಮಾಬಾದ್, ಜೂ.16 : ಪಾಕಿಸ್ತಾನದಲ್ಲಿ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಪಾಕಿಸ್ತಾನದ ಸಂಸ್ಥಾಪಕ ಮಹಮದ್ ಅಲಿ ಜಿನ್ನಾ ಅವರ ಮನೆಯನ್ನೇ ಉಗ್ರರು ಬಾಂಬ್ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಬಾಂಬ್ ಸ್ಪೋಟದಿಂದಾಗಿ 121 ವರ್ಷಗಳಷ್ಟು ಹಳೆಯದಾಗಿದ್ದ ಐತಿಹಾಸಿಕ ಕಟ್ಟಡ ಧ್ವಂಸಗೊಂಡಿದೆ.

ನೈಋತ್ಯ ಬಲೂಚಿಸ್ತಾನದ ಜೈರತ್ ನಗರದಲ್ಲಿರುವ ಮನೆಯಲ್ಲಿ ಜಿನ್ನಾ ತಮ್ಮ ಕೊನೆ ದಿನಗಳನ್ನು ಕಳೆದಿದ್ದರು. ಶನಿವಾರ ನಡೆದ ಬಾಂಬ್ ದಾಳಿಯಿಂದಾಗಿ ಮನೆಯ ಸುತ್ತಲೂ, ಮರದಿಂದ ನಿರ್ಮಿಸಿದ್ದ ಅಲಂಕಾರಿಕ ಗೋಡೆಯು ಸುಟ್ಟು ಭಸ್ಮವಾಗಿದೆ.

ಕ್ವಾಯಿದ್ ಎ ಅಜಾಂ ಎಂದು ಖ್ಯಾವಾಗಿರುವ ಈ ಕಟ್ಟಡದ ಸಮೀಪ ಉಗ್ರರು, ನಾಲ್ಕು ಬಾಂಬುಗಳನ್ನು ಹುದುಸಿಟ್ಟಿದ್ದರು. ಶನಿವಾರ ಅವುಗಳು ಸ್ಪೋಟಗೊಂಡಿವೆ. ಬಾಂಬ್ ಸ್ಪೋಟದ ನಂತರ ಕಟ್ಟಡದ ರಕ್ಷಣೆಗೆ ನಿಂತಿದ್ದ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ, ಇಬ್ಬರು ಮೃತಪಟ್ಟಿದ್ದಾರೆ.

ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗೊಂಡಿರದ ಆರು ಬಾಂಬುಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಪ್ರತಿಯೊಂದರಲ್ಲೂ ಮೂರು ಕೆ.ಜಿ ಸ್ಫೋಟಕಗಳನ್ನು ತುಂಬಿಸಿದ್ದ ಉಗ್ರರು, ಭಾರೀ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಾಂಬ್ ಸ್ಪೋಟಗೊಂಡ ನಂತರ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸುವುದು ವಿಫಲವಾದ್ದರಿಂದ, ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಯಿತು. ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಹೊತ್ತಿ ಉರಿದ ಬೆಂಕಿಗೆ, ಜಿನ್ನಾ ಅವರ ನಿವಾಸ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

1892ರಲ್ಲಿ ಈ ಬೇಸಿಗೆ ಕಟ್ಟಡವನ್ನು ಕಟ್ಟಲಾಗಿತ್ತು. ಜಿನ್ನಾ ಅವರು ತಮ್ಮ ಅಂತಿಮ ದಿನಗಳನ್ನು ಈ ಮನೆಯಲ್ಲಿ ಕಳೆದಿದ್ದರು. ನಂತರ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿತ್ತು.

English summary
Militants attacked a historic 121-year-old building in Pakistan's southwestern Balochistan province that was used by the country's founder Muhammad Ali Jinnah, killing a policeman and causing extensive damage to the structure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X