ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ ರಾಜಕುಮಾರನ ಮೂಲಸ್ಥರು ಗುಜರಾತಿನವರು!

By Srinath
|
Google Oneindia Kannada News

ಲಂಡನ್ , ಜೂನ್ 15‌: ಇದು ನಿಜ! ಬ್ರಿಟನ್‌ ರಾಜಪಟ್ಟಕ್ಕೆ ಏರಲಿರುವ ರಾಜಕುಮಾರ ವಿಲಿಯಂ ಮೂಲವಂಶಸ್ಥರು ಭಾರತೀಯರು! ವೈಜ್ಞಾನಿಕವಾಗಿ ಡಿಎನ್‌ಎ ವರದಿಯೇ ಇದನ್ನು ದೃಢಪಡಿಸಿದೆ. ನಮ್ಮನ್ನಾಳಿದ ಬ್ರಿಟೀಷರೂ ನಮ್ಮ ಮೂಲಸ್ಥರೇ ಎಂಬ ಸಮಾಧಾನ ಈಗ ನಮ್ಮದಾಗಬಹುದು.

ರಾಜಕುಮಾರ ವಿಲಿಯಂ ಅವರ ಐದು ತಲೆಮಾರುಗಳ ಹಿಂದಿನವರು ಭಾರತದ ಗುಜರಾತಿನ ಸೂರತ್‌ ನಲ್ಲಿ ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು!

britain-prince-william-has-got-gujarat-indian-genes

ಅಂದರೆ ಬ್ರಿಟನ್‌ ರಾಜಮನೆತನದ ಇತಿಹಾಸದಲ್ಲಿ ಭಾರತೀಯ ವಂಶಸ್ಥನೊಬ್ಬ ಮೊದಲ ಬಾರಿಗೆ ಆ ದೇಶದ ರಾಜ ಪದವಿ ಅಲಂಕರಿಸುತ್ತಿದ್ದಾನೆ. ಇದು ಭಾರತೀಯರಿಗೆ ನಿಜಕ್ಕೂ ಹೆಮ್ಮೆಯ ವಿಚಾರ. ಅಂದಹಾಗೆ paparazziಗಳ ಕಾಟ ತಾಳಲಾರದೆ ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಭೀಕರ ಕಾರು ಅಪಘಾತದಲ್ಲಿ ದುರಂತ ಮರಣಕ್ಕೀಡಾದ ಡಯಾನ ರಾಜಕುಮಾರ ವಿಲಿಯಂ ಅವರ ತಾಯಿ.

ರಾಜಮನೆತನದ ಸಂಬಂಧಿಕರಿಂದ ಪಡೆದುಕೊಳ್ಳಲಾದ ಲಾಲಾರಸ (ಜೊಲ್ಲು), 30ರ ಹರೆಯದ ರಾಜಕುಮಾರ ವಿಲಿಯಂ ಹಾಗೂ ಆತನ ತಾಯಿ ಡಯಾನಾ ಅವರ ಪೂರ್ವಜರ ಮನೆ ಕೆಲಸದಾಕೆಯ ಡಿಎನ್‌ಎಗೆ ತಾಳೆಯಾಗಿದೆ.

ಅಂದರೆ ಒಬ್ಬ ಭಾರತೀಯ ಮನೆಗೆಲಸದಾಕೆ ಮತ್ತು ಯುವರಾಜನ ತಾಯಿ ರಾಜಕುಮಾರಿ ಡಯಾನಾ ನಡುವೆ ನೇರ ವಂಶವಾಹಿ (mitochondrial DNA) ಸಂಬಂಧವಿರುವುದು ಡ್ನೂಕ್‌ ಆಫ್ ಕೇಂಬ್ರಿಡ್ಜ್ ನಡೆಸಿದ ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾಗಿದೆ.

ಗಮನಾರ್ಹವೆಂದರೆ ಮುಂದೆ ರಾಜಕುಮಾರ ವಿಲಿಯಂಗೆ ಹುಟ್ಟುವ ಮಕ್ಕಳೂ ಭಾರತೀಯ ಮೂಲದವರಾಗಲು ಸಾಧ್ಯವಿಲ್ಲ. ಏಕೆಂದರೆ ತಾಯಿಯ ಡಿಎನ್‌ಎ ಮಾತ್ರ ಮಕ್ಕಳಿಗೆ ಹರಿಯಲು ಸಾಧ್ಯವೆಂದು ಸುದ್ದಿಯನ್ನು ಬಹಿರಂಗಪಡಿಸಿರುವ ಬ್ರಿಟನ್‌ ಡಿಎನ್‌ಎ ಸ್ಪಷ್ಟಪಡಿಸಿದೆ.

ಮತ್ತೊಂದು ಕುತೂಹಲದ ಸಂಗತಿಯೆಂದರೆ ಈ ಸಂಬಂಧದ ಕೊಂಡಿಯಲ್ಲಿ ಕಾಣಿಸಿಕೊಳ್ಳುವ ವಿಲಿಯಂ ಮುತ್ತಮುತ್ತಜ್ಜಿ ಎಲಿಜಾ (great-great-great-great-great grandmother) ಮೂಲತಃ ಭಾರತೀಯರಲ್ಲ; ಬದಲಿಗೆ ಅರ್ಮೇನಿಯಾದವರು.

ಕುತೂಹಲದ ಸಂಗತಿಯೆಂದರೆ ಬ್ರಿಟೀಶ್‌ ರಾಜಮನೆತನದಲ್ಲಿ ವಿಲಿಯಂ ಮಾತ್ರ ಯುರೋಪಿಯನೇತರ ಡಿಎನ್‌ಎ ಹೊಂದಿದ್ದಾರೆ. ಆದರೆ ವಿಲಿಯಂ ಅವರ ಅಜ್ಜಿಯ 5ನೇ ತಲೆಮಾರು ಭಾರತದೊಂದಿಗೆ ಹೊಂದಿದ್ದ ಸಂಬಂಧದ ಬಗೆಗೆ ವರದಿಯಲ್ಲಿ ಯಾವುದೇ ಸ್ಪಷ್ಟ ವಿವರಣೆಯನ್ನು ನೀಡಲಾಗಿಲ್ಲ.

ಎಲಿಜಾ ಕಿವಾರ್ಕ್‌ ಅವರು ರಾಜಕುಮಾರ ವಿಲಿಯಮ್‌ ಅವರ ಮುತ್ತಮುತ್ತಾತನಾಗಿದ್ದ ಸ್ಕಾಟ್‌ ಲ್ಯಾಂಡ್‌ ವ್ಯಾಪಾರಿ ಥಿಯೋಡೋರ್‌ ಫೋರ್ಬ್ಸ್ (1788-1820) ಅವರ ಮನೆಗೆಲಸದ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಫೋರ್ಬ್ಸ್ ಅವರು ಭಾರತದ ಗುಜರಾತಿನ ಸೂರತ್‌ ನಲ್ಲಿ ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅಂದು ತಿಯೋಡರ್ ಪೋರ್ಬ್ಸ್ ಅನಿರೀಕ್ಷಿತವಾಗಿ ಎಲಿಜಾರನ್ನು ತೊರೆದರು ಹಾಗೂ ತಮಗೆ ಹುಟ್ಟಿದ ಮಗಳು ಕ್ಯಾತರೀನ್‌ರನ್ನು ಆರು ವರ್ಷ ಪ್ರಾಯದಲ್ಲಿ ಬ್ರಿಟನಿಗೆ ಕಳುಹಿಸಿದರು.

ಎಲಿಜಾರ ಡಿಎನ್‌ಎ ಆಕೆಯ ಪುತ್ರಿಯರು ಮತ್ತು ಮೊಮ್ಮಕ್ಕಳಿಗೆ ಹರಿದು, ಬಳಿಕ ರಾಜಕುಮಾರಿ ಡಯಾನ, ಅವರ ಮೂಲಕ ರಾಜಕುಮಾರರಾದ ವಿಲಿಯಂ ಮತ್ತು ಹ್ಯಾರಿ ಅವರಿಗೆ ಹರಿದುಬಂದಿದೆ.

English summary
Britain’s future king Prince William has got gujarat Indian genes says The DNA analysis of saliva samples taken from the Duke of Cambridge’s relatives have established a direct lineage between the 30-year-old prince and an Indian housekeeper on his mother Princess Diana’s side.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X