ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ದಲಿತರ ಮನೆಯಲ್ಲಿ ಪೇಜಾವರಶ್ರೀ ಪಾದಪೂಜೆ

By Srinath
|
Google Oneindia Kannada News

pejavara-seer-visits-dalit-house-jp-nagar-bangalore
ಬೆಂಗಳೂರು, ಜೂನ್ 15: ಉಡುಪಿ ಪೇಜಾವರ ಮಠದ ಹಿರಿಯ ಸ್ವಾಮೀಜಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ರಾಜಧಾನಿಯ ದಕ್ಷಿಣದ ಭಾಗದ ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿಯಲ್ಲಿ ಇಂದು ಬೆಳಗ್ಗೆ ದಲಿತ ನಾಯಕರೊಬ್ಬರ ಮನೆಗೆ ಭೇಟಿ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಅವರ ಮನೆಗೆ ವಿಶ್ವೇಶತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ, ಪೂಜೆ ನೆರವೇರಿಸಿದರು. ಆ ವೇಳೆ ಅಶ್ವತ್ಥನಾರಾಯಣ ಮತ್ತು ಅವರ ಕುಟುಂಬದವರು ಶ್ರೀಗಳಿಗೆ ಪಾದಪೂಜೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ ಅವರು 'ಬಸವಣ್ಣನ ಕಾಲದಿಂದ ಪಂಕ್ತಿ ಬೇಧವಿದೆ. ಆ ಶಿಷ್ಟಾಚಾರವು ಆಹಾರ ಪದ್ಧತಿಯ ಒಂದು ಭಾಗವಾಗಿ ಆಚರಣೆಯಲ್ಲಿದೆಯಷ್ಟೇ' ಎಂದು ಅಭಿಪ್ರಾಯಪಟ್ಟರು.

ದಲಿತ ಸಮಿತಿಗಳ ಆರೋಪ: ಉಡುಪಿಯ ಎಂಟು ಮಠಗಳ ಊಟೋಪಚಾರ ವ್ಯವಸ್ಥೆ, ಪರ್ಯಾಯ ಮಠಾಧೀಶರ ನಡೆ ನುಡಿ, ಕೃಷ್ಣ ದೇಗುಲದ ಸುತ್ತ ಹುಟ್ಟಿಕೊಂಡಿರುವ ವಿವಾದ ಇದರ ಬಗ್ಗೆಯೇ ಮಾಧ್ಯಮಗಳು ಆಸಕ್ತಿ ವಹಿಸಿರುವುದಕ್ಕೆ ಪೇಜಾವರಶ್ರೀಗಳು ಇತ್ತೀಚೆಗೆ ಅಸಂತೋಷ ವ್ಯಕ್ತಪಡಿಸಿದ್ದರು.

ಅಷ್ಟಮಠಗಳ ಆಚರಣೆ ಬಗ್ಗೆ ಆಸಕ್ತಿ ವಹಿಸಿರುವ ಮಾಧ್ಯಮಗಳು ಶೃಂಗೇರಿ, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇಗುಲಗಳಲ್ಲಿ ಅನುಸರಿಸುವ ಪದ್ಧತಿಗಳ ಬಗ್ಗೆ ಪ್ರಶ್ನಿಸುವುದಿಲ್ಲ ಏಕೆ? ಎಂದೂ ಪೇಜಾವರ ಶ್ರೀಗಳು ಪ್ರತಿ ಪ್ರಶ್ನೆ ಹಾಕಿದ್ದರು.

ಈ ಸಂದರ್ಭದಲ್ಲಿ ಶ್ರೀಗಳು ಅನಗತ್ಯವಾಗಿ ಜನತೆಯನ್ನು ಜಾತಿ ಆಧಾರದ ಮೇಲೆ ಪ್ರತ್ಯೇಕಿಸಿ ಮಾತನಾಡಿದ್ದಾರೆ ಜತೆಗೆ ಬಸವಣ್ಣ ಅವರ ವಚನಗಳ ಉದಾಹರಣೆ ನೀಡಿ ಅಪಮಾನ ಮಾಡಿದ್ದಾರೆ ದಲಿತ ಸಮಿತಿಗಳು ಆರೋಪಿಸಿದ್ದವು.

English summary
Pejavara Seer today visited a dalit leader Ashwath's house in Puttenahalli JP Nagar in Bangalore. Ashwath ex Chairman of Karnataka State Development Corporation for Scheduled Castes and Scheduled Tribes performed Pada Puja to the Seer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X