ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆ, ಕಾದಂಬರಿ ಬರೆಯುವವರಿಗೆ ಒಳ್ಳೆ ವೆದರ್

|
Google Oneindia Kannada News

ಬೆಂಗಳೂರು, ಜೂ. 14 : ವಾರದ ಹಿಂದೆ ನಗರದಲ್ಲಿ ಬೊಬ್ಬಿರಿದು ಹೋಗಿದ್ದ ವರುಣ ದೇವ ಸದ್ಯ ಸಾಂದರ್ಭಿಕ ರಜೆಯ ಮೇಲೆ ತೆರಳಿದ್ದಾನೆ. ಆದರೆ, ನಗರದ ವಾತಾವರಣ ತುಂಬಾ ತಂಪಾಗಿದೆ. ಮೇಘರಾಜ ನಗರವನ್ನು ತನ್ನ ಅಪ್ಪುಗೆಯಲ್ಲಿ ಇಟ್ಟುಕೊಂಡಿದ್ದು, ಬೆಂಗಳೂರು ಫುಲ್ ಕೂಲಾಗಿದೆ.

ವಿಕೇಂಡ್ ಮೋಜು, ಮಸ್ತಿ, ಪ್ರವಾಸಕ್ಕಾಗಿ ಊಟಿ, ಕೊಡಗು ಮುಂತಾದ ತಾಣಗಳಿಗೆ ಹೋಗಬೇಕು ಎಂದು ಯೋಜನೆ ತಯಾರಿಸಿದವರು. ತಮ್ಮ ಪ್ಲಾನ್ ಬದಿಗಿಟ್ಟು ಬೆಂಗಳೂರಿನಲ್ಲೆ ಇರಲು ಚಿಂತಿಸುತ್ತಿದ್ದಾರೆ.

ಬೆಂಗಳೂರಿನ ಹವಮಾನ ಕೂಲ್ ಆಗಿದ್ದು, ಜನರಿಗೆ ಸಂತೋಷ ಉಂಟುಮಾಡಿದ್ದರೂ ನೆಗಡಿ, ಕೆಮ್ಮು ಮುಂತಾದವುಗಳಿಂದಾಗಿ ಜನರು ಬಿಸಿಲು ಬೇಗ ಬರಲಿ ಎಂದು ಕಾಯತೊಡಗಿದ್ದಾರೆ. ಮಕ್ಕಳಿಗೆ ಶಾಲೆಗಳು ಪ್ರಾರಂಭವಾಗಿರುವುದರಿಂದ ಅವರಿಗೇ ನೆಗಡಿ ಬರುತ್ತದೆ ಎಂಬ ಆತಂಕ ಪೋಷಕರದ್ದು.

clouds

ನಗರದ ಹವಮಾನ ಸುತ್ತಾಡಲು, ಶಾಪಿಂಗ್ ಮಾಡಲು ಯೋಗ್ಯವೇ. ಆದರೆ, ಕಾರು ತೆಗೆದುಕೊಂಡು ಸುತ್ತಾಡಲು ಹೋದರೆ, ಮಳೆ ಬಂದು ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೆವೆಯೋ ಎಂಬ ಚಿಂತೆ ನಿಮ್ಮದು!

ಊಟಿ, ಕೊಡಗು, ಕೇರಳ ಮುಂತಾದ ಗಿರಿಧಾಮಗಳನ್ನು ನಾಚಿಸುವಂತೆ ಬೆಂಗಳೂರು ತಣ್ಣಗಿದೆ. ಸತತವಾಗಿ ಮೂರು ದಿನಗಳಿಂದ ಭಾರೀ ಗಾಳಿ ಬೀಸುತ್ತಿದ್ದು, ಯಾವುದೇ ಕ್ಷಣದಲ್ಲಿ ಮಳೆ ಸುರಿಯುವಂತಿದೆ. ಚಳಿ ತಡೆದುಕೊಳ್ಳಬಹುದು ಆದರೆ, ರಭಸದ ಮೇಲ್ಮೈ ಸಹಿಸುವುದು ಕಷ್ಟ

ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಶನಿವಾರದಿಂದ ನಗರದಲ್ಲಿ ಮಳೆ ಪ್ರಾರಂಭವಾಗಲಿದೆ. ಶುಕ್ರವಾರ ಬೆಳಗ್ಗೆಯಿಂದಲೇ ನಗರದ ವಿವಿಧ ಬಡಾವಣೆಗಳಲ್ಲಿ ತುಂತುರು ಮಳೆ ಯಾಗುತ್ತಿದೆ. ಅತ್ತ, ಕರಾವಳಿ ಪ್ರದೇಶದಲ್ಲಿ ಮಳೆ ಧೋ ಅಂತ ಸುರೀತಿದೆ. ಕೆಂಪುಹೊಳೆ ಧುಮುಗುಡುತ್ತಿದೆ, ನೇತ್ರಾವತಿ ನಗುತ್ತಿದ್ದಾಳೆ.

ಅಂದಹಾಗೆ, ಶುಕ್ರವಾರ ಬೆಳಗ್ಗೆ 11.30 ಗೆ ಟ್ವಿಟ್ಟರ್ ನಲ್ಲಿ ವರದಿಯಾದ ಹವಾಮಾನ ರಿಪೋರ್ಟ್ ನೋಡಿ. ‏@BloreFeelsLike
Conditions for Bangalore, IN at 11:30 am IST: Current Conditions: Partly Cloudy, 27 CForecast: Fri - Cloudy/Wind. High: 27 Low: 19

ಇಷ್ಟೆಲ್ಲಾ ವಿವರ ನೀಡಲು ಮತ್ತೊಂದು ಕಾರಣವಿದೆ. ಅಸಲು ಬೆಂಗಳೂರೇ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ 920 ಮೀಟರ್ ಎತ್ತರದಲ್ಲಿದೆ. ಇದ್ದ ಜಾಗವೇ ಗಿರಿಧಾಮವಾಗಿರುವಾಗ, ಊಟಿಯಂತೆ, ವಯನಾಡಂತೆ, ಮುನ್ನಾರಂತೆ, ಹೀಗೆ ತಂಪಾದ ತಾಣಗಳನ್ನು ಅರಸಿ, ಅಪಾರ ಹಣ ಖರ್ಚುಮಾಡಿ ಪ್ರವಾಸಕ್ಕೆ ತೆರಳುವುದೇಕೋ!

ಹಾಗಾಗಿ ನಾನು ಇವತ್ತು ಮನೆಯಲ್ಲಿದ್ದೇನೆ. ಕಾಫಿ ಮಗ್ ಹಿಡಿದು ಆಗಾಗ ಬಾಲ್ಕನಿಗೆ ಹೋಗುತ್ತೇನೆ. ನಮ್ಮ ಮನೆ ಬಾಲ್ಕನಿ ಕಿಟಕಿಯಿಂದ ಕಾಣುವ ಮೋಡಗಳನ್ನು ಮರೆಮಾಡುವ ಮರ, ಕೊಂಬೆಗಳ ಸಂದಿಯಿಂದ ಇಣುಕುವ ಮೋಡಗಳನ್ನು ನೋಡುತ್ತಾ ಇರ್ತೇನೆ.

English summary
With the on set of Monsoon, several places in Karnataka receiving rain fall. Over all heavy cloud cover and cool weather prevails in Bangalore. The city apes Munnar, ooty and Munnar weather conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X