ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದನಿ ಚಿಕಿತ್ಸೆಗೆ ಮುಖ್ಯಮಂತ್ರಿ ನಿಧಿಯಿಂದ ಪರಿಹಾರ

By Srinath
|
Google Oneindia Kannada News

medical-aid-madani-from-kerala-cm-relief-fund
ಬೆಂಗಳೂರು, ಜೂನ್ 13- ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅವರು ಮತ್ತೊಮ್ಮೆ ಬೆಂಗಳೂರು ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ನಾಸೀರ್ ಮದನಿ ನೆರವಿಗೆ ಧಾವಿಸಿದ್ದಾರೆ.

ಬೆಂಗಳೂರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ಅಬ್ದುಲ್ ನಾಸೀರ್ ಮದನಿಗೆ ಅನಾರೋಗ್ಯ ಕಾಡುತ್ತಿದ್ದು, ಸಾಕಷ್ಟು ಕಳ್ಳಾಟಗಳ ಬಳಿಕ ಕರ್ನಾಟಕದಲ್ಲೆ ಚಿಕಿತ್ಸೆ ಪಡೆದಿರುವುದು ಸರಿಯಷ್ಟೇ.

ಆದರೆ ಅದಕ್ಕೆ ಸುಮಾರು 5 ಲಕ್ಷ ರೂ. ವೆಚ್ಚ ತಗುಲಿದೆ. ಕೋರ್ಟ್ ಈ ವೆಚ್ಚವನ್ನು ಮದನಿಯೇ ಭರಿಸಬೇಕು ಎಂದು ಆದೇಶಿತ್ತು. ಹಾಗಾಗಿ ವೆಚ್ಚ ಭರಿಸಲು Justice for Madani Forum ಮದನಿ ನೆರವಿಗೆ ಧಾವಿಸಿದೆ.

ತತ್ಸಂಬಂಧ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅವರಿಗೆ ಮನವಿ ಮಾಡಿಕೊಂಡಿರುವ ವೇದಿಕೆಯು Chief Minister Relief Fund‎ನಿಂದ 4.5 ಲಕ್ಷ ರೂ ಹಣ ಬಿಡುಗೆ ಮಾಡುವಂತೆ ಕೋರಿದೆ.

ಮದನಿಯ ಮೂಲ ಜಿಲ್ಲೆಯಾದ ಕೊಲ್ಲಂನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ನಿರ್ದೇಶಕರು ಮೆಡಿಕಲ್ ಬಿಲ್ ಮತ್ತು ದಾಖಲೆಗಳನ್ನು ತಾಳೆ ಹಾಕಿ ನೋಡಲಿದ್ದಾರೆ. ಅಗರವಾಲ್ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಮದನಿಗೆ ಚಿಕಿತ್ಸೆ ನೀಡಲಾಗಿದೆ.

ತತ್ಸಂಬಂಧ, ವೇದಿಕೆಯು ಕರ್ನಾಟಕದ ಮುಖ್ಯಮಂತ್ರಿಯನ್ನೂ ಭೇಟಿ ಮಾಡುವುದಾಗಿ ಹೇಳಿಕೊಂಡಿದೆ.

English summary
Financial aid to Madani from Kerala Chief Ministers Relief Fund. As per the request made by 'Justice for Madani Forum' Kollam Collector and Health Director will check the medical bills amounting to 4.5 Lakh. For this purpose they are waiting for the essential certificate from Agarwal hospital and Manipal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X