ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಪಟ್ಟಿ ಬಿಡುಗಡೆ:ರಾಜ್ಯದ ಶ್ರೀಮಂತ ದೇವಾಲಯಗಳು

|
Google Oneindia Kannada News

ಬೆಂಗಳೂರು, ಜೂ 13: ಸರಕಾರೀಕರಣಗೊಂಡ ದೇವಾಲಯಗಳಲ್ಲಿ ಪೂಜಾ ವಿಧಿವಿಧಾನ, ಸ್ವಚ್ಚತೆ, ಭಕ್ತಾದಿಗಳಿಗೆ ನೀಡುವ ಸೌಲಭ್ಯ ಇತ್ಯಾದಿಗಳ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡು ಬರದಿದ್ದರೂ ಪ್ರಮುಖ ಹಿಂದೂ ದೇವಾಲಯಗಳು ಸರಕಾರದ ಬೊಕ್ಕಸಕ್ಕೆ ಉತ್ತಮ ಫಸಲನ್ನೇ ನೀಡುತ್ತಿದೆ.

ವರ್ಷ ವರ್ಷ ಸರಕಾರಕ್ಕೆ ದೇವಾಲಯದ ಕಡೆಯಿಂದ ಉತ್ತಮ ಆದಾಯ ಬರುತ್ತಿದ್ದರೂ ಮುಜರಾಯಿ ಎನ್ನುವುದು ಶಾಪಗ್ರಸ್ತ ಖಾತೆಯೆಂದು ಸರಕಾರದ ಕಡೆಯಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ.

ಮುಖ್ಯವಾಗಿ 'ಸಿ' ಗ್ರೇಡ್ ಪಟ್ಟಿಯಲ್ಲಿರುವ ದೇವಾಲಯಗಳಲ್ಲಿ ದೈನಂದಿನ ಪೂಜಾ ಸಾಮಗ್ರಿಗಳಿಗೆ ಸರಕಾರದಿಂದ ಬರುವ ವಾರ್ಷಿಕ ಹನ್ನೆರಡು ಸಾವಿರ ರೂಪಾಯಿ ಸರಿಯಾದ ಸಮಯಕ್ಕೆ ಪಾವತಿಯಾಗುತ್ತಿಲ್ಲ. 'ಸಿ' ಗ್ರೇಡ್ ಪಟ್ಟಿಯ ಅರ್ಚಕರಿಗೆ ಮಾಸಿಕ ವೇತನ ಎನ್ನುವುದೇ ಇಲ್ಲ. .

ವಾಸ್ತವಾಂಶ ಹೀಗಿರಬೇಕಾದರೆ ಕ್ರಮಬದ್ದವಾಗಿ ನಡೆಯುತ್ತಿರುವ ಸರಕಾರೇತರ ದೇವಾಲಯಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಸರಕಾರದ ಕ್ರಮ ಎಷ್ಟು ಸಮಂಜಸ ಎನ್ನುವುದು ಭಕ್ತಾದಿಗಳ/ಮಠಗಳ/ಮಠಾಧೀಶರ ಮಿಲಿಯನ್ ಡಾಲರ್ ಪ್ರಶ್ನೆ.

ರಾಜ್ಯ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡಿಹಾಳ 2012-13 ಆರ್ಥಿಕ ವರ್ಷದ ಅಂಕಿಅಂಶ ಬಿಡುಗಡೆ ಮಾಡಿ ಮಾತನಾಡುತ್ತಾ, ಕುಕ್ಕೇ ಸುಬ್ರಮಣ್ಯ ದೇವಾಲಯಕ್ಕೆ ಬರುತ್ತಿರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿದೆ ಎಂದಿದ್ದಾರೆ. ಮೊದಲ ಟಾಪ್ ಮೂರು ದೇವಾಲಯಗಳು ಅಂಕಿ ಅಂಶಗಳು ಮಾತ್ರ ಲಭ್ಯವಾಗಿದೆ.

ಅಂಕಿ ಅಂಶಗಳ ಪ್ರಕಾರ (ಮೊದಲ ಮೂರು) ರಾಜ್ಯದ ಟಾಪ್ ಹತ್ತು ದೇವಾಲಗಳ ಪಟ್ಟಿ (2011-12) ಇಂತಿದೆ.

ಕುಕ್ಕೆ ಸುಬ್ರಮಣ್ಯ ದೇವಾಲಯ

ಕುಕ್ಕೆ ಸುಬ್ರಮಣ್ಯ ದೇವಾಲಯ

ಮುಜರಾಯಿ ವ್ಯಾಪ್ತಿಯ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯ ಎನ್ನುವ ಹೆಗ್ಗಳಿಕೆಯನ್ನು ಕುಕ್ಕೆಸುಬ್ರಮಣ್ಯ ದೇವಾಲಯ ಮತ್ತೆ ತನ್ನಲ್ಲೇ ಉಳಿಸಿಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ 66.76 ಕೋಟಿ ರೂಪಾಯಿ ದೇವಾಲಯ ಆದಾಯಗಳಿಸಿದೆ. 2011-12ರಲ್ಲಿ 56.24 ಕೋಟಿ ರೂಪಾಯಿ ಆದಾಯಗಳಿಸಿತ್ತು.

ಮಲೆ ಮಹಾದೇಶ್ವರ ದೇವಾಲಯ

ಮಲೆ ಮಹಾದೇಶ್ವರ ದೇವಾಲಯ

ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಬರುವ ಮಲೆ ಮಹಾದೇಶ್ವರ ದೇವಾಲಯ ಎರಡನೇ ಸ್ಥಾನದಲ್ಲಿದೆ. ಈ ದೇವಾಲಯ 2012-13 ಸಾಲಿನಲ್ಲಿ 31 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸಿ ಎರಡನೇ ಸ್ಥಾನದಲ್ಲಿದೆ.

ಕೊಲ್ಲೂರು ಮೂಕಾಂಬಿಕಾ ದೇವಾಲಯ

ಕೊಲ್ಲೂರು ಮೂಕಾಂಬಿಕಾ ದೇವಾಲಯ

ಉಡುಪಿ ಜಿಲ್ಲಾ ವ್ಯಾಪ್ತಿಯ ಕೊಲ್ಲೂರು ದೇವಾಲಯ ಮೂರನೇ ಸ್ಥಾನದಲ್ಲಿದೆ. ವಾರ್ಷಿಕ 20 ಕೋಟಿ ರೂಪಾಯಿ ಆದಾಯದೊಂದಿಗೆ ಮೂಕಾಂಬಿಕಾ ದೇವಾಲಯ ಮೂರನೇ ಸ್ಥಾನದಲ್ಲಿದೆ.

ಚಾಮುಂಡೇಶ್ವರಿ ದೇವಾಲಯ

ಚಾಮುಂಡೇಶ್ವರಿ ದೇವಾಲಯ

ಮೈಸೂರು ಜಿಲ್ಲೆ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯ ಮೈಸೂರು ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ಹನ್ನೆರಡನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಈ ದೇವಾಲಯ ಸ್ಥಾಪನೆಯಾಯಿತು ಎನ್ನುವುದು ಇತಿಹಾಸ.

ಶ್ರೀಕಂಠೇಶ್ವರ ದೇವಾಲಯ

ಶ್ರೀಕಂಠೇಶ್ವರ ದೇವಾಲಯ

ಮೈಸೂರು ಜಿಲ್ಲೆ ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಾಲಯ ಕಪಿಲಾ ನದಿ ತೀರದಲ್ಲಿದೆ. ಈ ದೇವಾಲಯವನ್ನು ದಕ್ಷಿಣದಕಾಶಿ ಎಂದೂ ಕರೆಯುತ್ತಾರೆ.

ಚೆಲುವ ನಾರಾಯಣಸ್ವಾಮಿ ದೇವಾಲಯ

ಚೆಲುವ ನಾರಾಯಣಸ್ವಾಮಿ ದೇವಾಲಯ

ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿರುವ ಚೆಲುವ ನಾರಾಯಣಸ್ವಾಮಿ ದೇವಾಲಯವನ್ನು ತಿರುನಾರಾಯಣಪುರ ದೇವಾಲಯ ಎಂದೂ ಕರೆಯುತ್ತಾರೆ. ಇದು ಮೈಸೂರಿನಿಂದ 48 ಕಿ.ಮೀ ದೂರದಲ್ಲಿದೆ.
(ಮೇಲುಕೋಟೆ ದೇವಾಲಯದಲ್ಲಿ ಅಪಶಕುನ)

ಶ್ರೀರಂಗನಾಥಸ್ವಾಮಿ ದೇವಾಲಯ

ಶ್ರೀರಂಗನಾಥಸ್ವಾಮಿ ದೇವಾಲಯ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ ಶ್ರೀವಿಷ್ಣುವಿನ ಪಂಚ ಪವಿತ್ರ ಕ್ಷೇತ್ರಗಳಲ್ಲೊಂದು ಎನ್ನುವುದು ಪ್ರತೀತಿ. ಇತಿಹಾಸದ ಪ್ರಕಾರ ಒಂಬತ್ತನೇ ಶತಮಾನದಲ್ಲಿ ಗಂಗರು ಈ ದೇವಾಲಯವನ್ನು ನಿರ್ಮಿಸಿದರು.

ಕಟೀಲು ದುರ್ಗಾಪರಮೇಶ್ವರಿ ದೇವಾಲಯ

ಕಟೀಲು ದುರ್ಗಾಪರಮೇಶ್ವರಿ ದೇವಾಲಯ

ನಂದಿನಿ ನದಿ ದಂಡೆಯಲ್ಲಿರುವ ದಕ್ಷಿಣಕನ್ನಡ ಜಿಲ್ಲೆಯ ಐತಿಹಾಸಿಕ ದೇವಾಲಯಗಳಲ್ಲೊಂದು. ಮಂಗಳೂರು ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.

ಯಲ್ಲಮ್ಮನಗುಡ್ಡ ಶ್ರೀ ರೇಣುಕಯಲ್ಲಮ್ಮ

ಯಲ್ಲಮ್ಮನಗುಡ್ಡ ಶ್ರೀ ರೇಣುಕಯಲ್ಲಮ್ಮ

ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿರುವ ಶಕ್ತಿ ದೇವಾಲಯಗಳಲ್ಲೊಂದು. ಶತಮಾನದಷ್ಟು ಹಳೆಯದಾದ ಈ ದೇವಾಲಯ ಯಲ್ಲಮ್ಮಗುಡ್ಡದ ಮೇಲಿದೆ.

ಮಂದರ್ತಿ ದುರ್ಗಾಪರಮೇಶ್ವರಿ

ಮಂದರ್ತಿ ದುರ್ಗಾಪರಮೇಶ್ವರಿ

ಉಡುಪಿ ಜಿಲ್ಲಾ ವ್ಯಾಪ್ತಿಗೆ ಬರುವ ಮತ್ತೊಂದು ಪುರಾಣ ಪ್ರಸಿದ್ದ ದೇವಾಲಯ.

English summary
The Kukke Sri Subramanya temple, has again emerged as the richest muzrai temples in Karnataka. 2012-13 year figures released by the office of commissioner for religious endowments department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X