ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಬಂಧನ

By Mahesh
|
Google Oneindia Kannada News

Musharraf arrested in Bugti murder case
ಇಸ್ಲಾಮಾಬಾದ್, ಜೂ.13: ಅಕ್ಬರ್ ಬುಗ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಬಲೂಚಿಸ್ತಾನ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.

ಬುಗ್ತಿ ಹತ್ಯೆ ಪ್ರರಣದ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಆರೋಪಿ ಮುಷರಫ್ ಅವರಿಗೆ ಎರಡು ವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

2006ರಲ್ಲಿ ನಡೆದ ಸೇನಾ ಕಾರ್ಯಚರಣೆಯಲ್ಲಿ ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಬುಗ್ತಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥನಾಗಿದ್ದ ಮುಷರಫ್ ಅವರು ಹತ್ಯೆ ಪ್ರಕರಣದ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬಲೂಚಿಸ್ತಾನದಪೊಲೀಸರು ತನಿಖೆ ನಡೆಸಿದ್ದರು.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದಿನ ಮುಷರಫ್ ಅವರ ಫಾರ್ಮ್ ಹೌಸ್ ನಲ್ಲಿ ಪೊಲೀಸರು ಬಂಧಿಸಿದ್ದು, ಮುಷರಫ್ ಅವರ ಫಾರ್ಮ್ ಹೌಸ್ ನ್ನು ಸಬ್ ಜೈಲಾಗಿ ಪರಿವರ್ತನೆ ಮಾಡಿ ಪ್ರಕರಣದ ವಿಚಾರಣೆಯನ್ನು ಅಲ್ಲೇ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಸಬ್ ಜೈಲಾಗಿ ಪರಿವರ್ತಿಸಲಾಗಿರುವ ಫಾರ್ಮ್ ಹೌಸ್ ಇಸ್ಲಾಮಾಬಾದಿನ ಚಕ್ ಶಹಾಜಾದ್ ಗ್ರಾಮದಲ್ಲಿದೆ. ಆಗಸ್ಟ್ 26,2006ರಲ್ಲಿ ಬಲೂಚಿಸ್ತಾನದ ಗುಹೆಯೊಂದರಲ್ಲಿ ಅಡಗಿದ್ದ ನವಾಬ್ ಅಕ್ಬರ್ ಬುಗ್ತಿಯನ್ನು ಹೊರಗೆಳೆದು ಕೊಲ್ಲುವಂತೆ ಪರ್ವೇಜ್ ಮುಷರಫ್ ಆದೇಶಿಸಿದ್ದರು.

ಬಲೂಚಿಸ್ತಾನದ ಸ್ವಾಯುತ್ತತೆ, ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಅಕ್ಬರ್ ಬುಗ್ತಿ ಹೋರಾಟ ನಡೆಸಿದ್ದರು. ಸಶಸ್ತ್ರ ಪಡೆಯನ್ನು ಬೆಳೆಸಿದ್ದಲ್ಲದೆ ನೈಸರ್ಗಿಕ ಸಂಪತ್ತು ಹಂಚಿಕೆಯಲ್ಲಿ ಹೆಚ್ಚಿನ ಪಾಲು ಸಿಗಬೇಕು ಎಂದು ಪಾಕಿಸ್ತಾನವನ್ನು ಆಗ್ರಹಿಸಿದ್ದರು. ಇದರಿಂದ ಕೆರಳಿದ ಅಂದಿನ ಅಧ್ಯಕ್ಷ ಹಾಗೂ ಮಿಲಿಟರಿ ಪಡೆ ಮುಖ್ಯಸ್ಥ ಮುಷರಫ್ ಅವರು ಬುಗ್ತಿಯನ್ನು ಹತ್ಯೆಗೈಯಲು ಮುಂದಾಗಿದ್ದರು.

ಮಾಜಿ ಅಧ್ಯಕ್ಷ ಮುಷರಫ್ ಅವರ ಮೇಲೆ ಒಟ್ಟು ಎರಡು ಕೊಲೆ ಪ್ರಕರಣಗಳಿವೆ. ಅಕ್ಬರ್ ಬುಗ್ತಿ ಕೊಲೆ ಪ್ರಕರಣದಲ್ಲಿ ಈಗ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ಇನ್ನೊಂದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ಹತ್ಯೆಗೈದ ಆರೋಪ ಕೂಡಾ ಹೊತ್ತಿದ್ದಾರೆ.

ಬುಗ್ತಿ ಕೊಲೆ ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗುತ್ತಿದ್ದಂತೆ ಮುಷರಫ್ ಅವರು ಸೌದಿ ಅರೇಬಿಯಾದಲ್ಲಿರುವ ತಮ್ಮ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ ಅವರನ್ನು ನೋಡಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಮುಷರಫ್ ಮನವಿ ತಿರಸ್ಕರಿಸಿದ ನ್ಯಾಯಾಲಯ ಮಾಜಿ ಅಧ್ಯಕ್ಷ ಮುಷರಫ್ ಗೆ ನ್ಯಾಯಾಂಗ ಬಂಧನ ಶಿಕ್ಷೆ ವಿಧಿಸಿದೆ. (ಐಎಎನ್ಎಸ್)

English summary
Pakistan's former president Pervez Musharraf has been formally arrested by a Balochistan Police team in the Akbar Bugti murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X