ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಭವನದಲ್ಲಿ ಅಪರೂಪದ ಆಡಿಯೋ ವಿಡಿಯೋ

By Prasad
|
Google Oneindia Kannada News

President inaugurates audio-video section in Rashtrapati Bhavan
ನವದೆಹಲಿ, ಜೂ. 13 : ರಾಷ್ಟ್ರಪತಿ ಭವನದ ಗ್ರಂಥಾಲಯದಲ್ಲಿ ಆಡಿಯೋ-ವಿಡಿಯೋ ವಿಭಾಗವನ್ನು ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಉದ್ಘಾಟಿಸಿದರು. ಆಕಾಶವಾಣಿ, ಫಿಲ್ಮಂ ಡಿವಿಷನ್ ಮತ್ತು ದೂರದರ್ಶನದಿಂದ ಸಂಗ್ರಹಿಸಲಾದ ಹಳೆಯ ಅಪರೂಪದ ಆಡಿಯೋ ಮತ್ತು ವಿಡಿಯೋಗಳನ್ನು ಇಲ್ಲಿ ಇಡಲಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿದ್ದಂತೆ ಬ್ರಿಟಿಷರ ಕಟ್ಟಕಡೆಯ ವೈಸರಾಯ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರು ಭಾರತದಿಂದ ನಿರ್ಗಮಿಸುವ ವಿಡಿಯೋ, ರಾಜಾಜಿ ಎಂದೇ ಎಲ್ಲರಿಂದ ಕರೆಯಿಸಿಕೊಳ್ಳುತ್ತಿದ್ದ ಸಿ ರಾಜಗೋಪಾಲಾಚಾರಿ ಅವರು ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ಪ್ರಮಾಣ ಸ್ವೀಕರಿಸಿದ ಅಪೂರ್ವ ವಿಡಿಯೋಗಳನ್ನು ಪ್ರಣಬ್ ಮುಖರ್ಜಿ ಅವರು ನೋಡಿ ಆನಂದಿಸಿದರು.

ಇವುಗಳನ್ನು ಫಿಲ್ಮ್ಸ್ ಡಿವಿಷನ್‌ನಿಂದ ಸಂಗ್ರಹಿಸಲಾಗಿದ್ದರೆ, ಸಿ ರಾಜಗೋಪಾಲಾಚಾರಿ, ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಪ್ರಥಮ ಉಪರಾಷ್ಟ್ರಪತಿ ಡಾ. ಎಸ್ ರಾಧಾಕೃಷ್ಣನ್, ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಮುಂತಾದವರು ಮಾಡಿದ ಭಾಷಣದ ತುಣುಕುಗಳನ್ನು ಆಕಾಶವಾಣಿಯಿಂದ ತರಿಸಿಕೊಳ್ಳಲಾಗಿದೆ. ರಾಷ್ಟ್ರಪತಿ ಭವನಕ್ಕೆ ಅತ್ಯಮೂಲ್ಯವಾದ ಭಂಡಾರವೇ ಸಿಕ್ಕಂತಾಗಿದೆ.

ಇವುಗಳ ಜೊತೆಗೆ ಸಿ ರಾಜಗೋಪಾಲಾಚಾರಿ, ಡಾ. ಜಾಕಿರ್ ಹುಸೇನ್, ಡಾ. ರಾಜೇಂದ್ರ ಪ್ರಸಾದ್, ಡಾ. ರಾಧಾಕೃಷ್ಣನ್, ಸ್ವಾತಂತ್ರ್ಯಾನಂತರ ನಡೆದ ಮೊಟ್ಟಮೊದಲ ಗಣರಾಜ್ಯೋತ್ಸವ ಪರೇಡ್ ಕುರಿತು ಮಾಡಿರುವ ಚಲನಚಿತ್ರ ಕೂಡ ಇಲ್ಲಿ ಲಭ್ಯವಿದೆ. ಇಂಥ ಅತ್ಯಮೂಲ್ಯವಾದ ಆಡಿಯೋ-ವಿಡಿಯೋ ಸಂಗ್ರಹ ಬರೀ ಜನಪ್ರತಿನಿಧಿಗಳಿಗೆ ಮಾತ್ರ ಕೇಳಲು ಮತ್ತು ನೋಡಲು ಲಭ್ಯವೋ ಅಥವಾ ಜನಸಾಮಾನ್ಯರಿಗೂ ಅವಕಾಶ ಸಿಗುತ್ತದಾ ಎಂದು ತಿಳಿದುಬಂದಿಲ್ಲ.

English summary
The President of India, Shri Pranab Mukherjee on Thursday (June 13, 2013) inaugurated an audio-visual section in the Rashtrapati Bhavan Library. The audio-visual section brings together archival material procured from All India Radio, Films Division and Doordarshan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X