• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಸಲರ ಪೈಶಾಚಿಕ ಕೃತ್ಯ: 2 ರೈಲು ಪ್ರಯಾಣಿಕರ ಹತ್ಯೆ

By Srinath
|
maoists-attack-dhanbad-patna-express-many-killed
ಜಮೈ, ಪಟನಾ, ಜೂನ್ 13: ಪೈಶಾಚಿಕ ನಕ್ಸಲರು ಮತ್ತೊಮ್ಮೆ ವಿಜೃಂಭಿಸಿದ್ದಾರೆ. ರೈಲ್ವೆ ಪೊಲೀಸರನ್ನು ಗುರಿಯಾಗಿಸಿಕೊಂಡು ಧನಬಾದ್- ಪಟ್ನಾ ಎಕ್ಸೆಪ್ರೆಸ್ ಮೇಲೆ ಪೂರ್ವಯೋಜಿತ ದಾಳಿ ನಡೆಸಿರುವ ಪಾತಕಿಗಳು ಇಬ್ಬರು ರೈಲು ಪ್ರಯಾಣಿಕರನ್ನು ಹತ್ಯೆ ಮಾಡಿದ್ದಾರೆ. ರೈಲಿನ ಚಾಲಕ ಸೇರಿದಂತೆ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುಮಾರು ನೂರು ಮಂದಿ ಮಾವೋವಾದಿಗಳು ಬಿಹಾರದಲ್ಲಿ ಇಂದು ಈ ಕುಕೃತ್ಯ ನಡೆಸಿದ್ದಾರೆ. ಜಮೈ ರೈಲ್ವೆ ನಿಲ್ದಾಣಕ್ಕೂ ಮುನ್ನ ಕುಂದ್ರಾ ಹಾಲ್ಟ್ ಬಳಿ ಪ್ರಯಾಣಿಕರ ರೈಲಿನ ಮೇಲೆ ಮಾವೋವಾದಿಗಳು ಈ ದಾಳಿ ನಡೆಸಿದ್ದಾರೆ.

ನಕ್ಸಲ್ ದಾಳಿ ಬಗ್ಗೆ ಚರ್ಚಿಸಲು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಉನ್ನತಮಟ್ಟದ ಸಭೆ ನಡೆಸಿದ್ದಾರೆ.

ರೈಲಿನಲ್ಲಿ ರಕ್ಷಣೆಗೆ ನಿಯೋಜನೆಗೊಂಡಿದ್ದ ರೈಲ್ವೆ ರಕ್ಷಣಾ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ಗುರಿಯಾಗಿಸಿಕೊಂಡು ನಕ್ಸಲರು ಈ ದಾಳಿ ನಡೆಸಿದ್ದಾರೆ. ರಕ್ಷಣಾ ಸಿಬ್ಬಂದಿಯ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಎರಡು ಸಿಆರ್ ಪಿಎಫ್ ತುಕಡಿಗಳು ಸ್ಥಳಕ್ಕೆ ಧಾವಿಸಿವೆ.

* 1.15ರಲ್ಲಿ ಕೆಂಪು ಉಗ್ರರು ರೈಲಿನ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ದಾಳಿ ನಡೆದಿದೆ. ದಾಳಿಯಲ್ಲಿ ಮಹಿಳೆಯರೂ ಸೇರಿದ್ದರು.
* ದಾಳಿಯ ನಂತರ ಪ್ರಯಾಣಿ ಮುಂದುವರಿಸಿದ ಎಕ್ಸ್ ಪ್ರೆಸ್ ರೈಲು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಾಜಕೀಯ 'ಭೂಕಂಪ'ದ ಕೇಂದ್ರಬಿಂದು : ಬಿಹಾರ ರಾಜ್ಯ ಸದ್ಯಕ್ಕೆ ರಾಜಕೀಯ 'ಭೂಕಂಪ'ದ ಕೇಂದ್ರಬಿಂದುವಾಗಿದೆ. ಅಡ್ವಾಣಿಯವರನ್ನು ನಿರ್ಲಕ್ಷಿಸಿ ನರೇಂದ್ರ ಮೋದಿ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ದೂರಸರಿಯಲು ನಿರ್ಧರಿಸಿರುವ ಜೆಡಿ(ಯು) ತೃತೀಯ ರಂಗ ರಚಿಸುವ ತವಕದಲ್ಲಿದೆ. ಇದೇ ಸಮಯದಲ್ಲಿ ಬಿಜೆಪಿ ಸಹಕಾರದಿಂದ ಸರಕಾರ ರಚಿಸಿರುವ ನಿತೀಶ್ ಕುಮಾರ್ ರಾಜ್ಯದಲ್ಲಿ ಆಡಳಿತ ಕಳೆದುಕೊಳ್ಳುವ ಭೀತಿಯನ್ನೂ ಎದುರಿಸುತ್ತಿದ್ದಾರೆ. ನಕ್ಸಲರನ್ನು ಹತ್ತಿಕ್ಕುವ, ಎನ್‌ಡಿಎ ವಿರುದ್ಧದ ಮತ್ತು ಸರಕಾರ ಉಳಿಸಿಕೊಳ್ಳುವ ಮೂರು ಯುದ್ಧದಲ್ಲಿ ನಿತೀಶ್ ಕುಮಾರ್ ಯಾವುದರಲ್ಲಿ ಜಯಗಳಿಸಲಿದ್ದಾರೆ?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Over 100 Maoists attack Dhanbad-Patna Intercity Express in Bihar, killing at least 2 people, claim reports. The passenger train was attacked near Kundra halt just before Jamui railway station. At the same time Bihar is the epicenter of 'earthquake' in NDA. Bihar CM and JD(U) leader Nitish Kumar has threatened NDA of severing alliance and form third front.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more