ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್‌ ಏರ್ ವೇಸ್‌ ಮಾಲೀಕನ ಪತ್ನಿ ದಂಡಕಟ್ಟಿದ್ದೇಕೆ?

|
Google Oneindia Kannada News

Jet Airways
ಮುಂಬೈ, ಜೂ.13 : ಜೆಟ್‌ ಏರ್ ವೇಸ್‌ ಮುಖ್ಯಸ್ಥ ನರೇಶ್‌ ಗೋಯಲ್‌ ಅವರ ಪತ್ನಿ ಅನಿತಾ ಗೋಯಲ್‌ ವಿಮಾನ ಸಂಚಾರದ ವೇಳೆ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೊನೆಗೆ ದಂಡ ಕಟ್ಟಿ ಬಿಡುಗಡೆ ಹೊಂದಿದ್ದಾರೆ. ಅನಿತಾ ಮಾಡಿದ ಚಿಕ್ಕ ಅಪರಾಧವೆಂದರೆ, ತಮ್ಮ ಮುದ್ದಿನ ನಾಯಿಯ ಜೊತೆ ಪ್ರಯಾಣ ಮಾಡಿದ್ದು.

ಏರ್ ಲೈನ್ಸ್ ಕಂಪನಿಯೊಂದರ ಮಾಲೀಕನ ಪತ್ನಿಯಾದರೂ ಸರಿ ನಿಯಮವೆಂದರೆ, ನಿಯಮ ಎಂದು ಪೊಲೀಸರು ಅನಿತಾ ಅವರನ್ನು ಬಂಧಿಸಿ, ದಂಡ ಕಟ್ಟಿಸಿಕೊಂಡು ಅವರನ್ನು ಬಿಡುಗಡೆ ಮಾಡಿದ್ದಾರೆ. ಜೆಟ್‌ ಏರ್ ವೇಸ್‌ ಮುಖ್ಯಸ್ಥ ಪತ್ನಿ ನಾಯಿಗಾಗಿ ಕಟ್ಟಿದ್ದು, ಕೇವಲ 36,200 ರೂ.ದಂಡ.

ಆಗಿದ್ದೇನು : ಅನಿತಾ ಗೋಯಲ್ ಕಳೆದ ಶನಿವಾರ ಲಂಡನ್‌ನಿಂದ ಮುಂಬೈಗೆ ಬರುವಾಗ ತಮ್ಮ ಜೊತೆ ಮುದ್ದು ನಾಯಿಯನ್ನೂ ಕರೆತಂದಿದ್ದರು. ಅನಿತಾ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಅವರ ಕೈಯಲ್ಲಿದ್ದ ನಾಯಿಯ ಮೇಲೆ ಕಸ್ಟಮ್ ಅಧಿಕಾರಿಗಳ ಕಣ್ಣು ಬಿದ್ದಿದೆ.

ಅಧಿಕಾರಿಗಳು ಅನಿತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅನಿತಾ ತಮ್ಮ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು ಯಾವುದೇ ಅನುಮತಿ ಪಡೆದಿರಲಿಲ್ಲ. ಇದರಿಂದಾಗಿ ದಂಡ ಕಟ್ಟುಬೇಕು ಎಂದು ಅಧಿಕಾರಿಗಳು ಆದೇಶಿಸಿದರು.

ದಂಡದ ಮೊತ್ತಗೊತ್ತೆ : ಆಮದು ವ್ಯಾಪಾರ ನಿಯಂತ್ರಣ ಕಾಯ್ದೆಯ ಅನ್ವಯ ಅನಿತಾ ಅವರಿಗೆ ದಂಡ ವಿಧಿಸಲಾಯಿತು. ನಾಯಿಯ ಬೆಲೆಯ ಅರ್ಧದಷ್ಟು ದಂಡ ರೂಪದಲ್ಲಿ ಅನಿತಾ ಕಟ್ಟಬೇಕಾಯಿತು. ಅವರ ಮುದ್ದಿನ ನಾಯಿಯ ಬೆಲೆ 45,000 ವಿತ್ತು.

ಆದ್ದರಿಂದ ಶೇ 36ರಷ್ಟು ಅಂದರೆ 16,200ರೂಗಳನ್ನು ದಂಡವಾಗಿ ಅನಿತಾ ಕಟ್ಟಬೇಕಾಯಿತು. ನಿಯಮ ಉಲ್ಲಂಘನೆ ಮಾಡಿರುವುದಕ್ಕಾಗಿ 8000 ಸೇರಿದಂತೆ ಒಟ್ಟು 36,200 ರೂ.ಗಳನ್ನು ಅನಿತಾ ದಂಡ ರೂಪದಲ್ಲಿ ಕಟ್ಟಿ ಪೊಲೀಸರಿಂದ ಬಿಡುಗಡೆ ಹೊಂದಿದರು.

ನಿಯಮವೇನು : ವಿಮಾನದಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯುವಂತಿಲ್ಲ ಎಂಬ ನಿಯಮವಿದೆ. ಪ್ರಯಾಣಿಕರು ಅಂವಿಕಲರಾಗಿದ್ದರೆ, ಅಥವ ಶಾಶ್ವತವಾಗಿ ತಮ್ಮ ವಾಸಸ್ಥಾನ ಬದಲಾವಣೆ ಮಾಡುತ್ತಿದ್ದರೆ, ಸಾಕು ಪ್ರಾಣಿಗಳನ್ನು ವಿವಿಧ ಇಲಾಖೆಗಳ ಅನುಮತಿ ಪಡೆದು ವಿಮಾನದಲ್ಲಿ ಕರೆದೊಯ್ಯಬಹುದು.

ಆದರೆ, ಅನಿತಾ ಅವರು ಒಂದು ತಿಂಗಳಿಗೂ ಹೆಚ್ಚುಕಾಲ ಭಾರತದಲ್ಲಿ ವಾಸ್ತವ್ಯ ಹೂಡುವುದರಿಂದ ನಾಯಿಯನ್ನು ಕರೆತಂದಿದ್ದರು. ಅದಕ್ಕೆ ಅನುಮತಿ ಸಹ ಪಡೆದಿರಲಿಲ್ಲ. ಆದರೆ, ಅನಿತಾ ವಿಮಾನ ಹತ್ತುವಾಗ ಅಧಿಕಾರಿಗಳು ಏಕೆ ತಡೆದಿಲ್ಲ ಎಂಬ ಪ್ರಶ್ನೆಗೆ ಉತ್ತರ ದೊರಕಿಲ್ಲ.

English summary
Anita Goyal, wife of Jet Airways chairman NareshGoyal, was detained at Mumbai airport for carrying her pet dog, a Maltese breed, on a Jet Airways flight from London. After the flight landed, Anita was stopped by customs officials for carrying the dog against rules, after she paid up Rs 36,200 penalty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X