ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಟ್ ಅಂಡ್ ರನ್ : ಇಬ್ಬರು ಅಮಾಯಕರು ಬಲಿ

|
Google Oneindia Kannada News

police
ಬೆಂಗಳೂರು, ಜೂ.13 : ನಗರದಲ್ಲಿ ಎರಡು ಪ್ರತ್ಯೇಕ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಇಬ್ಬರು ಅಮಾಯಕರ ಜೀವ ಬಲಿಯಾಗಿದೆ. ಮಂಗಳವಾರ ರಾತ್ರಿ ಯಲಹಂಕ ಮತ್ತು ಬಾಣಸವಾಡಿಯಲ್ಲಿ ಎರಡು ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿವೆ.

ಯಲಹಂಕದ ಆಳ್ಳಾಲಸಂದ್ರ ಗೇಟ್ ಬಳಿ ಮಂಗಳವಾರ ರಾತ್ರಿ ಜಗದೀಶ್ (40) ಎಂಬುವವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ಜಗದೀಶ್ ಶವವನ್ನು ರಸ್ತೆಯ ಪಕ್ಕದ ಪೊದೆಗೆ ಎಸೆದು ಹೋಗಿದ್ದಾರೆ.

ಕಮ್ಮನಹಳ್ಳಿ ಸಮೀಪ ನೆಹರು ರಸ್ತೆ ದಾಟುತ್ತಿದ್ದ ಶವರಣ (45) ಅವರಿಗೂ ಕಾರು ಡಿಕ್ಕಿ ಹೊಡೆದಿದ್ದು, ತೀವ್ರ ರಕಸ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಲೆ ಶಂಕೆ ವ್ಯಕ್ತವಾಗಿತ್ತು : ಯಲಹಂಕ ಬಳಿ ಹಿಟ್ ಅಂಡ್ ರನ್ ಪ್ರಕರಣಕ್ಕೆ ಬಲಿಯಾದ ಜಗದೀಶ್ ಶವವನ್ನು ಜನರು ಗುರುತು ಹಿಡಿದಿದ್ದರು. ಜಗದೀಶ್ ಕಟ್ಟಡಗಳಿಗೆ ಟೈಲ್ಸ್ ಕೂರಿಸುವ ಕೆಲಸ ಮಾಡುತ್ತಿದ್ದರು. ಇವರಿಗೆ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ತೀವ್ರವಾದ ಪೆಟ್ಟಾಗಿತ್ತು.

ಪೊಲೀಸರು ಇದು ಕೊಲೆ ಪ್ರಕರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಿಂದ ಜಗದೀಶ್ ವಾಹನ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ವಾಹನಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ.

ಸ್ನೇಹಿತನ ನೋಡಲು ಹೊರಟಿದ್ದ : ಕಮ್ಮಹಳ್ಳಿ ಸಮೀಪ ವಾಹನ ಡಿಕ್ಕಿ ಹೊಡೆದು ಬಲಿಯಾದ ಶರವಣ ನೆಹರು ರಸ್ತೆಯಲ್ಲಿದ್ದ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹೊರಟಿದ್ದ. ಮನೆಯ ಹತ್ತಿರವಿದ್ದೇನೆ ಎಂದು ಫೋನ್ ಮಾಡಿ ಮಾತನಾಡಿದ್ದ, ಆದರೆ ಮನೆ ತಲುಪುವ ಮೊದಲೆ ಮಸಣ ಸೇರಿದ್ದಾರೆ.

ಯಲಹಂಕ ಮತ್ತು ಬಾಣಸವಾಡಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ವಾಹನ ಸವಾರರಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

English summary
Two hit and run case field in Bangalore on Tuesday, June 11. In Yelahanka and Banaswadi police station limits Two people killed from hit and run. The persons identified as Jagadish (40) and Sharavana (45). police registered the case and searching for accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X