ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಜಾವರಶ್ರೀಗಳ ಹೇಳಿಕೆಗೆ ದಲಿತ ಸಮಿತಿ ಅತೃಪ್ತಿ

By Mahesh
|
Google Oneindia Kannada News

Dalits condemns pankti bheda, Udupi Mutt
ಬೆಂಗಳೂರು, ಜೂ. 13: ಉಡುಪಿ ಶ್ರೀಕೃಷ್ಣ ದೇಗುಲ ಹಾಗೂ ಅಷ್ಟಮಠ ಆಚರಣೆ ಬಗ್ಗೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಪೇಜಾವರಶ್ರೀಗಳು ನೀಡಿದ ಸ್ಪಷ್ಟ ಪ್ರತಿಕ್ರಿಯೆ ರಾಜ್ಯ ದಲಿತ ಸಂಘರ್ಷ ಸಮಿತಿಗೆ ತೃಪ್ತಿ ತಂದಿಲ್ಲ. ಶ್ರೀಗಳು ಹೇಳಿಕೆಯಲ್ಲಿ ಸತ್ಯ ಇಲ್ಲ, ಉಡುಪಿ ಮಠದಲ್ಲಿ ಸಹ ಪಂಕ್ತಿ ಜೊತೆಗೆ ಪ್ರತ್ಯೇಕ ಪಂಕ್ತಿ ಇನ್ನೂ ಜಾರಿಯಲ್ಲಿದೆ ಎಂದು ದಲಿತ ಸಂಘರ್ಷ ಸಮಿತಿ ಹೇಳಿದೆ.

ಉಡುಪಿಯ ಕೃಷ್ಣಮಠದಲ್ಲಿ ಸಾರ್ವಜನಿಕ ಸಹ ಪಂಕ್ತಿ ಭೋಜನ ಇದ್ದರೂ ಸಸ್ಯಾಹಾರ ಹಾಗೂ ಮಾಂಸಾಹಾರದ ಆಧಾರದ ಮೇಲೆ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿರುವುದನ್ನು ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.

ಅನಾವಶ್ಯಕವಾಗಿ ಬಸವಣ್ಣನವರ ಹೆಸರನ್ನು ಪ್ರಸ್ತಾಪ ಮಾಡಿ ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ. ಬಸವಣ್ಣನವರು ಯಾವ ವಚನದಲ್ಲಿ ಬ್ರಾಹ್ಮಣರು ಶ್ರೇಷ್ಠ, ಅವರು ಮಾಂಸಾಹಾರಿಗಳ ಜೊತೆಯಲ್ಲಿ ಊಟ ಮಾಡಬಾರದು ಎಂದು ಹೇಳಿದ್ದಾರೆ ಎಂಬುದನ್ನು ಪೇಜಾವರಶ್ರೀಗಳು ಸ್ಪಷ್ಟಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಆಗ್ರಹಿಸಿದ್ದಾರೆ.

ಬಸವಣ್ಣನವರು ಅವರು ಮಾಡುವ ವೃತ್ತಿಗಳ ಹಿನ್ನೆಲೆಯಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಮಾನವ ವಿರೋಧಿ ವಿಚಾರಗಳನ್ನು ಹೇಳಿಲ್ಲ. ಪೇಜಾವರ ಶ್ರೀಗಳು ಮಾನವ ವಿರೋಧಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ನಾಗವಾರ ಹೇಳಿದ್ದಾರೆ.

ಏನಿದು ವಿವಾದ: ಉಡುಪಿ ದೇಗುಲದ ಅನ್ನ ಸಂತರ್ಪಣೆ, ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಹೊಣೆ ಹೊತ್ತಿರುವ ಅಷ್ಟಮಠಗಳಲ್ಲಿ ಜಾತಿಬೇಧ ನಡೆದಿದೆ ಎಂದು ಹಲವಾರು ಜನ ಆಕ್ಷೇಪಿಸಿದ್ದರು.
ದೇಗುಲದಲ್ಲಿ ಶ್ರೀಕೃಷ್ಣನ ಪ್ರಸಾದರ ರೂಪದಲ್ಲಿ ನೀಡುವ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಪಂಕ್ತಿ ಬೇಧ ಮಾಡಲಾಗುತ್ತದೆ ಎಂದು ಆರೋಪಿಸಲಾಗಿತ್ತು.

"ನಮ್ಮಲ್ಲಿ ಪಂಕ್ತಿ ಬೇಧ ಇಲ್ಲ (ಬ್ರಾಹ್ಮಣರು ಹಾಗೂ ಅನ್ಯ ಜಾತಿ/ಧರ್ಮೀಯರನ್ನು ಪ್ರತ್ಯೇಕ ಊಟದ ಸಾಲುಗಳನ್ನು ಅನುಸರಿಸುವುದು) ಶ್ರೀಕೃಷ್ಣ ದೇಗುಲ/ಮಠದಲ್ಲಿ ಈ ರೀತಿ ಯಾವುದೇ ಬೇಧ ಭಾವ ಅನುಸರಿಸುತ್ತಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಸಹ ಪಂಕ್ತಿ ಭೋಜನ ವ್ಯವಸ್ಥೆ ಈಗಲೂ ನಡೆಯುತ್ತಿದೆ" ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಹೇಳಿದ್ದರು.

ಇದೇ ವೇಳೆ, ಉಡುಪಿಯ ಎಂಟು ಮಠಗಳ ಊಟೋಪಚಾರ ವ್ಯವಸ್ಥೆ, ಪರ್ಯಾಯ ಮಠಾಧೀಶರ ನಡೆ ನುಡಿ, ಕೃಷ್ಣ ದೇಗುಲದ ಸುತ್ತ ಹುಟ್ಟಿಕೊಂಡಿರುವ ವಿವಾದ ಇದರ ಬಗ್ಗೆಯೇ ಮಾಧ್ಯಮಗಳು ಆಸಕ್ತಿ ವಹಿಸಿರುವುದಕ್ಕೆ ಪೇಜಾವರಶ್ರೀಗಳು ಅಸಂತೋಷ ವ್ಯಕ್ತಪಡಿಸಿದರು.

ಅಷ್ಟಮಠಗಳ ಆಚರಣೆ ಬಗ್ಗೆ ಆಸಕ್ತಿ ವಹಿಸಿರುವ ಮಾಧ್ಯಮಗಳು ಶೃಂಗೇರಿ, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇಗುಲಗಳಲ್ಲಿ ಅನುಸರಿಸುವ ಪದ್ಧತಿಗಳ ಬಗ್ಗೆ ಪ್ರಶ್ನಿಸುವುದಿಲ್ಲ ಏಕೆ? ಎಂದು ಪೇಜಾವರ ಶ್ರೀಗಳು ಪ್ರತಿ ಪ್ರಶ್ನೆ ಹಾಕಿದ್ದರು.

ಈ ಸಂದರ್ಭದಲ್ಲಿ ಶ್ರೀಗಳು ಅನಗತ್ಯವಾಗಿ ಜನತೆಯನ್ನು ಜಾತಿ ಆಧಾರದ ಮೇಲೆ ಪ್ರತ್ಯೇಕಿಸಿ ಮಾತನಾಡಿದ್ದಾರೆ ಜೊತೆಗೆ ಬಸವಣ್ಣ ಅವರ ವಚನಗಳ ಉದಾಹರಣೆ ನೀಡಿ ಅಪಮಾನ ಮಾಡಿದ್ದಾರೆ ದಲಿತ ಸಮಿತಿಗಳು ಆರೋಪಿಸಿವೆ. ಲಭ್ಯ ಮಾಹಿತಿ ಪ್ರಕಾರ ಮುಜರಾಯಿ ಇಲಾಖೆಗೆ ಸೇರಿದ ಸುಮಾರು 250ಕ್ಕೂ ಅಧಿಕ ದೇಗುಲಗಳಲ್ಲಿ ಈ ರೀತಿ ಪಂಕ್ತಿ ಬೇಧ ಪ್ರಸಾದ ವಿತರಣೆ ನಡೆಯುತ್ತಲೇ ಇದೆ.

English summary
Vishwesha Tirtha Swamiji of Pejawar Math said ‘pankti bheda’ (separate seating arrangements for Brahmins and non-Brahmins for meals) was not being followed in Sri Krishna Math/Temple. But, Dalit Sangharsha Samiti said Udupi Math still follows Pankti bheda and condemns Pejawars Seers Statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X