ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಿ ಸ್ಥಾನ ತಪ್ಪಲು ಸ್ವಾತಂತ್ರ್ಯ ಹೋರಾಟಗಾರರ ಸಂಚು

By Srinath
|
Google Oneindia Kannada News

congress-dk-shivakumar-takes-oath-as-legislature
ಬೆಂಗಳೂರು, ಜೂನ್ 13- ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರು ಮನೆಯ ಹಿರಿಯನಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮುನಿಸಿಕೊಂಡಿದ್ದ ಮನೆ ಮಗನಿಗೆ ಚೂರು ಬುದ್ಧಿವಾದ ಹೇಳಿ ಸರಿದಾರಿಗೆ ತಂದಿದ್ದಾರೆ.

ಅದೇ ಅತ್ತ ಭಾಜಪದಲ್ಲಿ ವಯೋವೃದ್ಧ ನಾಯಕರೊಬ್ಬರು ಕಿರಿಯ ವಯಸ್ಸಿನ ಶಿಷ್ಯಕೋಟಿ ಪಟ್ಟಕ್ಕೇರಿದ್ದನ್ನು ಸಹಿಸದೆ ಚಿಕ್ಕಮಕ್ಕಳಂತೆ ಮುನಿಸಿಕೊಂಡಿದ್ದ ದೃಷ್ಟಾಂತ ನಮ್ಮ ಕಣ್ಣೇದುರಿಗೇ ಇರುವಾಗ ಕಾಂಗ್ರೆಸ್ ನಾಯಕನ ವರ್ತನೆ ಮೆಚ್ಚುಗೆಗೆ ಪಾತ್ರವಾಗಿದೆ.

ಸದನಕ್ಕೆ ಎಂಟ್ರಿ ಕೊಡದೆ, ಮಂತ್ರಿ ಪಟ್ಟ ಬೇಕೇಬೇಕು ಎಂದು ರಚ್ಚೆ ಹಿಡಿದಿದ್ದ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರ ಸದಾಶಿವನಗರ ಮನೆಗೇ ತೆರಳಿದ್ದ ಡಾ ಪರಮೇಶ್ವರ್, ಹಾಗೆಲ್ಲ ಹಠ ಹಿಡಿಯಬಾರದು ಎಂದು ಡಿಕೆಶಿಗೆ ತಿಳಿಯಹೇಳಿ ಬಂದಿದ್ದರು.

ಅಂದು ಇಂದು ಫಲ ನೀಡಿದೆ. ಹಿರಿಯರ ಮಾತಿಗೆ ಮಣೆ ಹಾಕಿದ ಕಾಂಗ್ರೆಸ್ಸಿನ ಹಿರಿಯ ನಾಯಕ, ವರ್ಚಸ್ವೀ ಶಿವಕುಮಾರ್ ಕೊನೆಗೂ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಬಹಿರಂಗವಾಗಿ ಸದನದಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ವಾರಿಗೆಯವರು ಮೂದಲಿಸಿಯಾರು ಎಂದು ಸ್ಪೀಕರ್ ಕಚೇರಿಯಲ್ಲಿ ಗೌಪ್ಯವಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸ್ತ್ರ ಮುಗಿಸಿದ್ದಾರೆ.

ಗಮನಾರ್ಹವೆಂದರೆ 14ನೇ ವಿಧಾನಸಭೆಯ ಮೊದಲ ಅವಧಿಯ ಅಧಿವೇಶನಕ್ಕೆ ಗೈರುಹಾಜರಾಗುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. 'ನನ್ನ ಆ ನಡುವಳಿಕೆಯಿಂದ ಯಾರಿಗೆ ಏನನ್ನು ಹೇಗೆ ಅರ್ಥ ಮಾಡಿಸಬೇಕು ಎಂಬುದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ಇನ್ನು ಅದರ ಗೊಡವೆ ಬೇಡ. ಹಾಗಾಗಿ ಪ್ರಮಾನ ವಚನ ಸ್ವೀಕರಿಸಿದ್ದು ಶಾಸಕನಾಗಿ ನನ್ನ ಜವಾಬ್ದಾರಿಯನ್ನು ಪೂರೈಸುವೆ ಎಂದು ಡಿಕೆಶಿ ಹೇಳಿರುವುದು ಗಮನಾರ್ಹ.

224ನೇ ಶಾಸಕರಾಗಿ ಪ್ರಮಾಣವಚನ:
ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರು ಪೂರ್ವನಿಗದಿಯಂತೆ ಗುರುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಹಾಲಿ ವಿಧಾನಸಭೆಯ 224ನೇ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಪ್ರಮಾಣವಚನ ಬೋಧಿಸಿದರು.

ತತ್ಸಂಬಂಧ ನಿನ್ನೆ ಬುಧವಾರ ಸ್ಪೀಕರ್ ಜತೆ ಚರ್ಚಿಸಲು ಅವರು ವಿಧಾನಸೌಧಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭಧಲ್ಲಿ ವಿಧಾನಸಭೆಯ ಪ್ರತಿಪಕ್ಷಗಳ ಮೊಗಸಾಲೆಯಲ್ಲಿ ಕಾಣಿಸಿಕೊಂಡಿದ್ದ ಡಿಕೆಶಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ, 'ನನ್ನ ಮೇಲೆ ಸವಾರಿ ಮಾಡಲು ಅವಕಾಶ ನೀಡುವುದಿಲ್ಲ. ಯಾರಿಗೆ ಸಂದೇಶ ರವಾನೆ ಮಾಡಬೇಕಿತ್ತೋ ಅದು ಅವರಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ' ಎಂದು ಮಾರ್ಮಿಕವಾಗಿ ಹೇಳಿದ್ದರು.

'ನನ್ನ ಮೇಲಿರುವ ಆರೋಪಗಳು ಸಾಬೀತಾಗದೆ ನಾನು ಕಳಂಕಿತನಾಗಲು ಹೇಗೆ ಸಾಧ್ಯ? ಕಾಂಗ್ರೆಸ್ ಕಟ್ಟಲು ಮೂರು ದಶಕಗಳಿಂದ ಹಗಲಿರುಳು ಶ್ರಮ ಹಾಕಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ನನ್ನದೇ ಆದ ಕೊಡುಗೆ ನೀಡಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ. ನಾನು ಕಳಂಕಿತನಾಗಿದ್ದರೆ ಕ್ಷೇತ್ರದ ಜನ ಸತತ ಆರು ಬಾರಿ ವಿಧಾನಸಭೆಗೆ ಆರಿಸಿ ಕಳುಹಿಸಲು ಹೇಗೆ ಸಾಧ್ಯವಿತ್ತು ? ಕೆಲವರ ಕುತಂತ್ರದಿಂದ ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಹೈಕಮಾಂಡ್ ಶ್ರೀರಕ್ಷೆ ನನ್ನ ಮೇಲಿದೆ' ಎಂದು ಗುಡುಗಿದ್ದರು.

English summary
Senior Congress leader, ex Minister DK Shivakumar atlast today took oath as 224th legislature in 14th Karnataka assembly in the Speaker Kagodu Thimmappa's Chamber.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X