ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಣಸವಾಡಿ : ನಕಲಿ ಪೊಲೀಸ್ ಅಂದರ್!

|
Google Oneindia Kannada News

arrest
ಬೆಂಗಳೂರು, ಜೂ.13 : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಟ್ಟೆತೊಟ್ಟು, ನಕಲಿ ರಿವಾಲ್ವರ್ ಹಿಡಿದು, ನಾನು ಪೊಲೀಸ್ ಎಂದು ಹೇಳುತ್ತಾ, ಜನರನ್ನು ವಂಚಿಸುತ್ತಿದ್ದ ನಕಲಿ ಪೊಲೀಸಪ್ಪನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಯುವತಿಗೆ ವಿವಾಹವಾಗುತ್ತೇನೆ ಎಂದು ನಂಬಿಸಿದ್ದ ಈತ, ಆಕೆಯಿಂದ ಹಣ ಕಿತ್ತಿದ್ದ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ.

ಬಿಹಾರ ಮೂಲದ ಪ್ರದೀಪ್ ಕುಮಾರ್ (28) ಬಂಧಿತ ವ್ಯಕ್ತಿ. ಪಿಯುಸಿ ಫೇಲ್ ಆಗಿರುವ ಈತ, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಪೊಲೀಸ್ ಆಗಬೇಕು ಎಂಬ ಕನಸು ಕಂಡಿದ್ದ. ಆದರೆ, ಪಿಯುಸಿ ಫೇಲ್ ಆದ ಕಾರಣ ಅವನ ಕನಸು ಹಾಗೆ ಉಳಿದಿತ್ತು.

ಕೆಲವು ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಈತ, ನಂತರ ಪೊಲೀಸರ ವೇಷ ಧರಿಸಿ, ಜನರನ್ನು ವಂಚಿಸಲು ಪ್ರಾರಂಭಿಸಿದ್ದ. ಬಾಣಸವಾಡಿ ಪೊಲೀಸರು, ಈತನನ್ನು ಬಂಧಿಸಿ, ಪೊಲೀಸ್ ಎಂದರೆ ಏನು ಎಂದು ತೋರಿಸಿದ್ದಾರೆ. (ನಾಲ್ಕು ಕಡೆ ನಕಲಿ ಪೊಲೀಸರ ಕೈಚಳಕ)

ಯುವತಿಗೂ ಮೋಸ : ಪೊಲೀಸ್ ಇನ್ಸ್ ಪೆಕ್ಟರ್ ಬಟ್ಟೆತೊಟ್ಟು ಅಂಗಡಿಗಳಿಂದ ಈತ ಹಫ್ತಾ ವಸೂಲಿ ಮಾಡುತ್ತಿದ್ದ. ನಕಲಿ ಗನ್ ಹಿಡಿದು, ಇಸ್ತ್ರೀ ಮಾಡಿದ ಗರಿ-ಗರಿ ಖಾಕಿ ಹಾಕಿ ವಿವಿಧ ಬಡಾವಣೆಗಳಲ್ಲಿ ಅನೇಕ ಜನರಿಗೆ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಖಾಸಗಿ ಕಂಪನಿಯ ರಿಸೆಪ್ಷನಿಸ್ಟ್ ಳನ್ನು ಪರಿಚಯ ಮಾಡಿಕೊಂಡ ಈತ, ಆಕೆಗೆ ತಾನು ಪೊಲೀಸ್ ಎಂದು ಹೇಳಿಕೊಂಡು ಅವಳನ್ನು ಪ್ರೀತಿಸುವ ನಾಟಕವಾಡಿದ್ದ. ಪ್ರದೀಪ್ ನನ್ನು ನಂಬಿದ್ದ ಯುವತಿ ಆತನೊಂದಿಗೆ ಮದುವೆಯಾಗಲು ಹಂಬಲಿಸಿದ್ದಳು.

ಮದುವೆಯಾಗಿ ಬೇರೆ ಜಿಲ್ಲೆಯಲ್ಲಿ ನೆಲೆಸೋಣ ವರ್ಗಾವಣೆ ಮಾಡಿಸಿಕೊಳ್ಳಲು ಹಣ ಕೇಳುತ್ತಾರೆ. ನೀನು 7 ಲಕ್ಷ ರೂಪಾಯಿ ಕೊಡು ಎಂದು ಪ್ರದೀಪ್ ಬೇಡಿಕೆ ಇಟ್ಟಿದ್ದ. ಪ್ರದೀಪ್ ನನ್ನು ನಂಬಿ ಯುವತಿ ಹಣ ನೀಡಿದ್ದಳು. ಹಣ ದೊರಕಿದ ನಂತರ ಪ್ರದೀಪ್ ಕಾಣೆಯಾಗಿದ್ದ. (ಬಾಣಸವಾಡಿ ಹಿಟ್ ಅಂಡ್ ರನ್ ಕೇಸ್)

ಇದರಿಂದ ಅನುಮಾನಗೊಂಡ ಯವತಿ ಬಾಣಸವಾಡಿ ಠಾಣೆಗೆ ದೂರು ನೀಡಿದ್ದಳು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಕಲಿ ಪೊಲೀಸನನ್ನು ಬಂಧಿಸಿದ್ದಾರೆ. ಹಲವಾರು ಜನರಿಗೆ ಈತ ನಕಲಿ ಪೊಲೀಸ್ ವೇಷದಲ್ಲಿ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

English summary
Banaswadi police arrested a 28- year-old man who allegedly cheated a woman of Rs 7 lakh by offering to marry her. Pradeep Kumar alias Vaddu Kumar, who claimed to be a sub-inspector, allegedly took the money from Mary Anita (29) saying that he needed it for getting posted in a good police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X