ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ವಲಸೆ ನೀತಿ, ಕಾಗ್ನಿಜೆಂಟ್ ಪ್ರಗತಿಗೆ ಕೊಕ್ಕೆ

By Mahesh
|
Google Oneindia Kannada News

ಬೆಂಗಳೂರು, ಜೂ.13: ಅಮೆರಿಕದ ಪ್ರಸ್ತಾವಿತ ಸುಧಾರಿತ ವಲಸೆ ನೀತಿ ಜಾರಿಗೆ ಬಂದರೆ ಕಾಗ್ನಿಜೆಂಟ್ ಸೇರಿದಂತೆ ಐಟಿ ಕಂಪನಿಗಳ ಪ್ರಗತಿ ಮಾರಕವಾಗಲಿದೆ ಎಂಬ ಸುದ್ದಿ ಬಂದಿದೆ. ಕಾಗ್ನಿಜೆಂಟ್ ಸಂಸ್ಥೆ ಅಮೆರಿಕದ ಮೂಲದ ಕಂಪನಿಯಾದರೂ ಭಾರತದಲ್ಲೂ ತನ್ನ ಮುಖ್ಯ ಕಾರ್ಯ ನಿರ್ವಹಣೆ ಹೊಂದಿದೆ.

ಇತ್ತೀಚೆಗೆ ಭಾರತದಲ್ಲಿ ಅತಿ ಹೆಚ್ಚು ಸಾಫ್ಟ್ ವೇರ್ ರಫ್ತುದಾರರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದ್ದ ಇನ್ಫೋಸಿಸ್ ಸಂಸ್ಥೆ ಹಿಂದಿಕ್ಕಿ ಮೇಲಕ್ಕೇರಿದ ಕಾಗ್ನಿಜೆಂಟ್ ಸಂಸ್ಥೆ ನಾಸ್ಡಾಕ್ ನಲ್ಲೂ ಇನ್ಫೋಸಿಸ್ ಗೆ ಹೊಡೆತ ನೀಡಿತ್ತ್ತು.

ಆದರೆ, ಜಾಗತಿಕ ಈಕ್ವಿಟಿ ವಿಶ್ಲೇಷಕ ಸಂಸ್ಥೆ ಜೆಪಿ ಮಾರ್ಗನ್ ವರದಿ ಪ್ರಕಾರ ಕಾಗ್ನಿಜೆಂಟ್ ಏಳಿಗೆಗೆ ಯುಎಸ್ ವಲಸೆ ನೀತಿ ಭಾರಿ ಪ್ರತಿರೋಧ ಒಡ್ಡಲಿದೆ ಎಂದು ಎಚ್ಚರಿಸಲಿದೆ.ಅಮೆರಿಕದಲ್ಲಿ ಆರ್ಥಿಕ ಸುಧಾರಣೆ ಅಳವಡಿಕೆ ನಂತರ ಕಾಗ್ನಿಜೆಂಟ್ ಸಂಸ್ಥೆಯ ಪ್ರತಿ ಷೇರಿಗೆ ಸಿಗುವ ಆದಾಯ(EPS) ಶೇ 25ರಷ್ಟು ಕುಸಿಯಲಿದೆ ಇದರಿಂದ ಸಂಸ್ಥೆಯ ಲಾಭಕ್ಕೆ ಕುತ್ತುಂಟಾಗಲಿದೆ.

Tough immigration rules in US may hit Cognizant hardest

ಅಮೆರಿಕದಲ್ಲಿ ಕಾಗ್ನಿಜೆಂಟ್ ಆದಾಯ ಹಾಗೂ ಕಾರ್ಯ ನಿರ್ವಹಣೆ ವೆಚ್ಚ ಆಧಾರಿಸಿ ಜೆಪಿ ಮಾರ್ಗನ್ ಈ ವರದಿ ನೀಡಿದೆ. ಕಾಗ್ನಿಜೆಂಟ್ ಜೊತೆಗೆ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳ ಸ್ಥಿತಿಗತಿಗಳನ್ನು ತುಲನೆ ಮಾಡಲಾಗಿದೆ.

ಸದ್ಯಕ್ಕೆ ಅಮೆರಿಕದ ಸೆನೆಟ್ ನಲ್ಲಿ ಚರ್ಚೆಗೊಳಗಾಗುತ್ತಿರುವ ವಲಸೆ ನೀತಿಗೆ ಸುಮಾರು 100ಕ್ಕೂ ತಿದ್ದುಪಡಿ ಅವಶ್ಯವಿದೆ ಎಂದು ಸೆನೆಟ್ ಬಯಸಿದೆ.

ಕಾಗ್ನಿಜೆಂಟ್ ಸಂಸ್ಥೆಯ ಕಾರ್ಯ ನಿರ್ವಹಣಾ ವೆಚ್ಚ ಅಂತರ ಶೇ 19-20 ರಷ್ಟಿರುವುದರಿಂದ ಸಂಸ್ಥೆ ಲಾಭದತ್ತ ಮುಖ ಮಾಡಿದೆ. ಭಾರತದಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೂ ಹೆಚ್ಚಿನ ಅದಾಯಕ್ಕೆ ಯುಎಸ್ ಆರ್ಥಿಕತೆಯನ್ನು ಕಾಗ್ನಿಜೆಂಟ್ ನಂಬಿದೆ. ಸುಮಾರು ಶೇ 80 ರಷ್ಟು ಆದಾಯ ಅಮೆರಿಕದಲ್ಲೇ ಉತ್ಪನ್ನವಾಗುತ್ತಿದೆ. ಹೀಗಾಗಿ, ವಲಸೆ ನೀತಿ, ಯುಎಸ್ ವಿದೇಶಾಂಗ ನೀತಿ ಬದಲಾವಣೆ ಕಂಡರೆ ಕಾಗ್ನಿಜೆಂಟ್ ಗೆ ಕಷ್ಟ ಕಷ್ಟ.

ಕಾಗ್ನಿಜೆಂಟ್ ನಂತರದ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತೊಂದರೆ ಅನುಭವಿಸಲಿದ್ದು, ಟಿಸಿಎಸ್ ನ ಇಪಿಎಸ್ ದರ ಶೇ 18ರಷ್ಟಿದೆ. ನಂತರ ಇನ್ಫೋಸಿಸ್ ಇಪಿಎಸ್ ದರ ಶೇ 15 ರಷ್ಟಿದ್ದು, ಇರುವುದರಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್ ಸ್ವಲ್ಪಮಟ್ಟಿಗೆ ಸೇಫ್ ಆಗಿದೆ.

ಸ್ಥಳೀಯರಿಗೆ ಉದ್ಯೋಗ, ಸ್ಥಳೀಯ ಸಂಸ್ಥೆಗಳಿಗೆ ಸಬ್ಸಿಡಿ, ಆಫ್ ಶೋರ್ ಐಟಿ ಸರ್ವೀಸ್ ಸಂಸ್ಥೆಗಳಿಗೆ ಕಡಿವಾಣ, ವೀಸಾ ದರ ಹೆಚ್ಚಳ ಮುಂತಾದ ವಿಷಯಗಳನ್ನು ವಲಸೆ ನೀತಿ ಹೊಂದಿದೆ.

ಪರಿಣಾಮ, ಕ್ಲೈಂಟ್ ಸ್ಥಳಕ್ಕೆ (ಅಮೆರಿಕ) ಭಾರತದಿಂದ ಉದ್ಯೋಗಿಗಳನ್ನು ಸಲೀಸಾಗಿ ಕಳಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಸ್ಥಳೀಯರು ಕಡಿಮೆ ಮೊತ್ತಕ್ಕೆ ದುಡಿಯುವುದಂತೂ ಇಲ್ಲ. ಇದರಿಂದ ಸಂಸ್ಥೆಗಳು ಯೋಜನೆ ಮೇಲೆ ಹಾಕಿದ ಮೊತ್ತ ದುಪ್ಪಟ್ಟಾಗುತ್ತದೆ. ಒಟ್ಟಾರೆ, ಅಮೆರಿಕದ ವಲಸೆ ನೀತಿ, ವೀಸಾ ನಿಯಮಗಳು ಕಾಗ್ನಿಜೆಂಟ್ ಸಂಸ್ಥೆಗಷ್ಟೇ ಅಲ್ಲ ಹೊರಗುತ್ತಿಗೆ ನಂಬಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆಗಳಿಗೆ ಸರಿಯಾದ ಪಾಠ ಕಲಿಸಲಿದೆ.

English summary
The proposed comprehensive immigration reforms Bill in the US would affect all major offshore-centric information services (IT) services companies. But it is expected Nasdaq-listed Cognizant would be hit the hardest, followed by TCS, Infosys and others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X