ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಶಾಲೆಯಲ್ಲಿದ್ದಾರೆ ಬರೋಬ್ಬರಿ 22 ಜೊತೆ ಅವಳಿಗಳು!

By Srinath
|
Google Oneindia Kannada News

ಚಿಕಾಗೊ, ಜೂನ್ 12: ಅಮೆರಿಕದ ಇಲಿನಾಯ್‌ನ ವಿಲ್ ಮೆಟ್ಟೆಯಲ್ಲಿ ಹೈಕ್ರೆಸ್ಟ್ ಮಿಡ್ಲ್ ಸ್ಕೂಲ್ ಎಂಬ ಶಾಲೆಯೊಂದಿದೆ. ಅದು ವಿಶ್ವ ದಾಖಲೆಗೆ ಸಜ್ಜಾಗುತ್ತಿದೆ. ಏನಪ್ಪಾ ಅಂತಹ ವಿಶೇಷ ಈ ಶಾಲೆಯಲ್ಲಿ ಅಂದರೆ

ಒಂದೇ ಶಾಲೆಯಲ್ಲಿ 2 ಡಜನ್ ಅವಳಿ ಜೋಡಿ:

guinness-record-24-sets-of-twins-us-highcrest-school
24 ಜೊತೆ ಅವಳಿ ಮಕ್ಕಳು ಈ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಇವರೆಲ್ಲ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಈ ಶಾಲೆ ಮತ್ತು ಅಲ್ಲಿನ ಅವಳಿ ಮಕ್ಕಳು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಲಿದ್ದಾರೆ.

ಈ ಗುಂಪಿನಲ್ಲಿ 3 ಜೊತೆ ಮಕ್ಕಳು ಗಂಡು-ಗಂಡು, 11 ಜೊತೆ ಹೆಣ್ಣು-ಹೆಣ್ಣು ಮತ್ತು 10 ಜೊತೆ ಗಂಡು-ಹೆಣ್ಣು ಮಕ್ಕಳಿವೆ. ಒಂದೇ ಶಾಲೆಯ ಒಂದೇ ತರಗತಿಯಲ್ಲಿ ಇಷ್ಟೊಂದು ಅವಳಿ ಜೋಡಿ ಓದುತ್ತಿರುವುದು ವಿಶೇಷವಾಗಿದೆ.

ಪ್ರಸಕ್ತ ದಾಖಲೆಯ ಪ್ರಕಾರ ಅಮೆರಿಕದ ಮೂರು ಶಾಲೆಗಳಲ್ಲಿ ಒಂದೇ ತರಗತಿಯಲ್ಲಿ 16 ಜೊತೆ ಅವಳಿ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಸದ್ಯದ ದಾಖಲೆಯಾಗಿದೆ.
ಅಮೆರಿಕದಲ್ಲಿ 2010ರಲ್ಲಿ 1 ಸಾವಿರ ಮಕ್ಕಳ ಪೈಕಿ 33 ಅವಳಿ ಮಕ್ಕಳು ಜನಿಸಿದ್ದಾರೆ.

English summary
Twenty-four sets of twins at Highcrest Middle School in Wilmette, Illinois, are hoping to set a new record A Chicago-area middle school is hoping to claim the world record for the most sets of twins in one year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X