ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು : 1 ರೂ.ಗೆ ಶುದ್ಧ ಕುಡಿಯುವ ನೀರು

|
Google Oneindia Kannada News

water
ತುಮಕೂರು, ಜೂ.12 : ಪಾವಗಡ ಮತ್ತು ಮಧುಗಿರಿ ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಕೊರತೆ ಬಗೆಹರಿಸಲು ಸರ್ಕಾರ ಸಜ್ಜಾಗಿದೆ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಹುಲಕೋಟಿ ಮಾದರಿಯಲ್ಲಿ ಯೋಜನೆ ರೂಪಿಸಿ, ಕಾಮಗಾರಿ ಪ್ರಾರಂಭಿಸಿದೆ.

ಗದಗ ಜಿಲ್ಲೆಯಲ್ಲಿ ಕೆ.ಎಚ್.ಪಾಟೀಲ್ ಪ್ರತಿಷ್ಟಾನ ಪ್ರತಿ ಲೀ. 10 ಪೈಸೆಯಂತೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್ ಅವರ ಸಲಹೆಯಂತೆ, 53 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತುಮಕೂರು ಜಿಲ್ಲಾಡಳಿತ ಕಾರ್ಯ ಪ್ರಾರಂಭಿಸಿದೆ.

ತುಮಕೂರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳು ಹುಲಕೋಟಿ ಗ್ರಾಮಕ್ಕೆ ಭೇಟಿ ನೀಡಿ ಯೋಜನೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಅದರಂತೆ ಪಾವಗಡ ಮತ್ತು ಮಧುಗಿರಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ 53 ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು ಕಾಮಗಾರಿ ಆರಂಭವಾಗಿದೆ.

ಮಧುಗಿರಿ ಮತ್ತು ಪಾವಗಡ ತಾಲೂಕಿನ ನಾಲ್ಕು ಹಳ್ಳಿಗಳಲ್ಲಿ ಆಗಸ್ಟ್ 15ರೊಳಗೆ ಈ ಶುದ್ಧ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಲಿದೆ. ಜಿಲ್ಲಾ ಪಂಚಾಯಿತಿ ಸಿಇಎ ಗೋಂವಿದರಾಜು ಅವರು ಹೇಳುವಂತೆ, ಪ್ರತಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು 15 ಲಕ್ಷ ರೂ.ವೆಚ್ಚವಾಗಲಿದೆ.

ಡಿ-ಫ್ಲೋರೈಡ್ ಯಂತ್ರವನ್ನು ನೀಡುವ ಏಜೆನ್ಸಿಯವರು ನಿರ್ವಹಣಾ ಘಟಕಗಳನ್ನು ಒಂದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. 1 ರೂ. ನಾಣ್ಯ ಹಾಕಿದರೆ, 10 ಲೀಟರ್ ಶುದ್ಧ ಕುಡಿಯುವ ನೀರು ಜನರಿಗೆ ದೊರೆಯುತ್ತದೆ ಎಂದು ಯೋಜನೆಯ ಮಾಹಿತಿ ನೀಡಿದರು.

ಈಗಾಗಲೇ ಶುದ್ಧ ಕುಡಿಯುವ ನೀರಿನ ಯೋಜನೆ ಮೂಲಕ ಪಾವಗಡದಲ್ಲಿ 16, ಮಧುಗಿರಿಯಲ್ಲಿ 20 ಮತ್ತು ಶಿರಾ ತಾಲೂಕಿನಲ್ಲಿ 8 ಡಿಫ್ಲೋರೈಡ್ ಯುಕ್ತ ನೀರನ್ನು ಜನರಿಗೆ ನೀಡಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ : ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ, ಅದರ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಆಗಸ್ಟ್ 15ರಂದು ಹತ್ತು ಕೇಂದ್ರಗಳು ಉದ್ಘಾಟನೆಯಾಗಲಿವೆ ಎಂದರು.

ವೆಚ್ಚವೆಷ್ಟು : ಕಟ್ಟಡ ನಿರ್ಮಿಸಲು 3 ಲಕ್ಷ, ವಾರ್ಷಿಕ ವಿದ್ಯುತ್ ಶುಲ್ಕ 36 ಸಾವಿರ, ಘಟಕ ನಿರ್ವಹಣೆಗೆ 60 ಸಾವಿರ, ಡಿಫ್ಲೋರೈಡ್ ಯಂತ್ರ ಖರೀದಿಸಲು 13 ಲಕ್ಷ ವೆಚ್ಚವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಅಂದಾಜಿಸಿದೆ.

ರಾಜ್ಯ ಸರ್ಕಾರದ ಸಹಾಯದಿಂದ ತಾಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಈ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಿಂದಾಗಿ ತುಮಕೂರು ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿ.

English summary
Tumkur Zilla Panchayat plans to set up pure drinking water units at Pavagada and Madhugiri taluks said, Zilla Panchayat CEO Govindraj. district plans to set up 53 drinking water units in different villages. the contraction work of units begins. on August 15th, 20 center will open for people. by this unit people pay 1 rs and get 10 liter pure drinking water he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X