ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಹಿಡಿದ ಕೇಸು; ಯಾವುದೇ ಕ್ಷಣ ಶ್ರೀಶಾಂತ್ ಬಿಡುಗಡೆ

By Srinath
|
Google Oneindia Kannada News

spot-fixing-mcoca-charged-sreesanth-gets-court-relief
ನವದೆಹಲಿ, ಜೂನ್ 11: ಕಳ್ಳಾಟದ ಬೆನ್ನುಹತ್ತಿದ್ದ ದಿಲ್ಲಿ ಪೊಲೀಸರು ಕಳೆದ ವಾರವಷ್ಟೇ ಕಳ್ಳಾಟದಲ್ಲಿ ಶ್ರೀಶಾಂತನನ್ನು A1 ಎಂದು ಗುರುತಿಸಿ ಆತನ ವಿರುದ್ಧ ಮೋಕಾ (MCOCA) ಕೇಸು ಹಾಕಿದ್ದರು.

ಆದರೆ ಒಂದೇ ವಾರದಲ್ಲಿ ಆ ಕೇಸಿಗೆ ತೀವ್ರ ಹಿನ್ನಡೆಯುಂಟಾಗಿದೆ. ಅಷ್ಟೇ ಅಲ್ಲ MCOCAದಡಿ ಕೇಸು ದಾಖಲಿಸಿದ ಪೊಲೀಸರನ್ನು ದಕ್ಷಿಣ ದಿಲ್ಲಿಯ ಸಾಕೇತ್‌ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಬೌಲರ್‌ಗಳಾದ ಎಸ್ ಶ್ರೀಶಾಂತ್‌ ಮತ್ತು ಅಂಕಿತ್‌ ಚವಾಣ್‌ ಸೇರಿದಂತೆ 18 ಮಂದಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.

ಆರೋಪಿಗಳಿಗೆ ಪಾಸ್‌ಪೋರ್ಟ್‌ ಒಪ್ಪಿಸಲು ಸೂಚಿಸಿರುವ ನ್ಯಾಯಾಲಯ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಜಾಮೀನು ದೊರೆತವರಲ್ಲಿ ಬುಕ್ಕಿ ಮತ್ತು ಶ್ರೀಶಾಂತ್‌ ಗೆಳೆಯ ಜಿಜು ಜನಾರ್ದನ್‌ ಕೂಡ ಸೇರಿದ್ದಾರೆ. ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಆಟಗಾರರನ್ನು ಇತ್ತೀಚೆಗೆ ತಿಹಾರ್‌ ಜೈಲಿಗೆ ವರ್ಗಾಯಿಸಲಾಗಿತ್ತು.

ಶ್ರೀಶಾಂತ್ ಮತ್ತವನ ಗೆಳೆಯರು ಕಳ್ಳಾಟದಲ್ಲಿ ಭಾಗಿಯಾಗಿದ್ದಾರೆಂದು ಅವರ ವಿರುದ್ಧ ಮೋಕಾ ಕಾಯಿದೆಯಡಿ ಕೇಸು ದಾಖಲಿಸಿರುವುದು ಸರ್ವತಾ ಸಾಧುವಲ್ಲ. ಅಸಲಿಗೆ ಮೋಕಾ ಜಾರಿಗೆ ಅವರ ವಿರುದ್ಧ ಬಲವಾದ ಸಾಕ್ಷ್ಯಗಳೇ ಇಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹಾಗಾಗಿ ಅವರನ್ನು ತಕ್ಷಣ ಬಿಟ್ಟುಕಳಿಸಿ ಎಂದು ಘನ ನ್ಯಾಯಾಲಯ ದಿಲ್ಲಿ ಪೊಲೀಸರಿಗೆ ಕಪಾಳಮೋಕ್ಷ ಮಾಡಿದೆ. ಇದರಿಂದ ಕಪಾಳಮೋಕ್ಷ ಕಳಂಕಿತ ಶ್ರೀಶಾಂತ್ ಆನಂದತುಂದಿಲಿತನಾಗಿರುವುದರಲ್ಲಿ ಅನುಮಾನವಿಲ್ಲ.

ಅಸಲಿಗೆ ಕೇಸಿನಲ್ಲಿ ಫಿಟ್ ಆಗಿದ್ದ ಆಟಗಾರರ ಮನಃಸ್ಥಿತಿ ಎಂತಹುದೋ ನೋಡಿ. ಶ್ರೀಶಾಂತ ಆರಂಭದಲ್ಲೇ ಪೊಲೀಸರೆದುರು ತನ್ನಿಂದ ತಪ್ಪಾಯ್ತು ಎಂದು ಅಲವತ್ತುಕೊಂಡು, ಅಳುಮುಂಜಿಯಾಗಿದ್ದ. ಇನ್ನು ಮತ್ತೂಬ್ಬ ಆಟಗಾರ ಅಜಿತ್‌ ಚಾಂಡಿಲ ತನ್ನ ಕಥೆ ಮುಗಿದೇ ಹೋಯ್ತು ಎಂದು ಕೊಂಡು ಅಸಲಿಗೆ ಜಾಮೀನಿಗೇ ಅರ್ಜಿ ಸಲ್ಲಿಸಿಲ್ಲ.

ಪರಿಸ್ಥಿತಿ ಹೀಗಿರುವಾಗ ಮಹಾಮಹಿಮ ವಕೀಲವೃಂದ ಆಟಗಾರರ ನೆರವಿಗೆ ಧಾವಿಸಿದೆ. ವಕೀಲಿಕೆಯ ತಮ್ಮ ಅಷ್ಟೂ ಕಲಿಕೆಯನ್ನು ಆಟಗಾರರ ರಕ್ಷಣೆಗೆ ಧಾರೆಯೆರೆದಿದೆ. ಅಸಲಿಗೆ ಪ್ರಕರಣವು ಕನಿಷ್ಠ 420 ಕೇಸು ದಾಖಲಿಸಲೂ ಅರ್ಹವಲ್ಲ ಎಂದು ಘರ್ಜಿಸಿದ್ದಾರೆ. ತತ್ಫಲವಾಗಿ Team Sreesanth ಮೋಕಾದ ಬೀಸೋ ದೊಣ್ಣೆಯಿಂದ ಬಚಾವಾಗಿದೆ.

ಅಸಲಿಗೆ ಕಳ್ಳಾಟದ ಧೂರ್ತರ ವಿರುದ್ಧ ಪೊಲೀಸರು ಮೋಕಾ ಕಾಯಿದೆಯನ್ನು ಜಾರಿಗೆ ಗೊಳಿಸಿರುವುದೇ ಹಾಸ್ಯಾಸ್ಪದವಾಗಿದೆ. ಅವರ ವಿರುದ್ಧ ಮೋಕಾ ಅನ್ವಯಗೊಳಿಸಿದಾಗಲೇ ಖಚಿತವಾಗಿತ್ತು - ಸರಿಯಾ ದಸಾಕ್ಷ್ಯಧಾರವಿಲ್ಲದೆ ಆಟಗಾರರನ್ನು ಕೇಸಿನಲ್ಲಿ ಫಿಟ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು,

ಮತ್ತು ಪೊಲೀಸರು ಮಾಡಿರುವ ಈ ಎಡವಟ್ಟಿನಿಂದಲೇ ಆಟಗಾರರು ಬಚಾವಾಗುತ್ತಾರೆ ಎಂಬುದು ವಿಧಿತವಾಗಿತ್ತು ಎಂದು ಹಿರಿಯ ಕಾನೂನು ತಜ್ಞರೊಬ್ಬರು ವಿಶ್ಲೇಷಿಸಿದ್ದಾರೆ. ಆದ್ದರಿಂದ ಸದ್ಯಕ್ಕೆ, Wish you speedy freedom Sreeshanth ಅನ್ನದೆ ವಿಧಿಯಿಲ್ಲ.

English summary
IPL Spot Fixing - MCOCA charged Cricketer Sreesanth gets court relief. In a major setback to Delhi Police, a court on Monday indicted them for slapping the stringent provisions of MCOCA on cricketers S Sreesanth, Ankeet Chavan and 17 others and granted the accused bail in the IPL spot-fixing case. "There is no reason for believing that the accused are guilty under the Maharashtra Control of Organised Crime Act (MCOCA) at this stage," Additional Sessions Judge Vinay Kumar Khanna said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X