ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಹಗರಣ: ಸಂಸದ ಜಿಂದಾಲ್ ಮೇಲೆ ಎಫ್ ಐಆರ್

By Mahesh
|
Google Oneindia Kannada News

ನವದೆಹಲಿ, ಜೂ.11: ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ನವೀನ್ ಕುಮಾರ್ ಜಿಂದಾಲ್ ಹಾಗೂ ಕಲ್ಲಿದ್ದಲು ಖಾತೆ ಸಚಿವ ದಾಸರಿ ನಾರಾಯಣ ರಾವ್ ಅವರ ವಿರುದ್ಧ ಮಂಗಳವಾರ(ಜೂ.11) ಎಫ್ ಐಆರ್ ದಾಖಲಿಸಲಾಗಿದೆ.

ನವೀನ್ ಜಿಂದಾಲ್ ವಿರುದ್ಧ ಎಫ್ ಐಆರ್ ದಾಖಲಿಸುತ್ತಿದ್ದಂತೆ ಜಿಂದಾಲ್ ಒಡೆತನದ ಜಿಂದಾಲ್ ಸ್ಟೀಲ್ ಹಾಗೂ ಪವರ್ ಸಂಸ್ಥೆ ಷೇರುಗಳು ನೆಲಕಚ್ಚಿದೆ. ಹೆಚ್ಚಿನ ವಿವರಗಳನ್ನು ಗುಡ್ ರಿಟರ್ನ್ಸ್ ಕನ್ನಡದಲ್ಲಿ ನಿರೀಕ್ಷಿಸಿ...

ಸಿಬಿಐ ತಂಡ ಜಿಂದಾಲ್ ಸ್ಟೀಲ್ಸ್ ಹಾಗೂ ಪವರ್ ಲಿ. ಗಗನ್ ಸ್ಪಾಂಜ್ ಹಾಗೂ 2 ಇತರೆ ಕಂಪನಿ ವಿರುದ್ಧ ಎಫ್ ಐಆರ್ ದಾಖಲಿಸಿದೆ. ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ 15 ಕಡೆಗಳಲ್ಲಿ ಸಿಬಿಐ ತಂಡ ದಾಳಿ ನಡೆಸಿದೆ.

ಇದನ್ನೂ ಓದಿ: ಜಿಂದಾಲ್ ಕಂಪನಿ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿದ್ದ ಜೀ ಟಿವಿ ನವೀನ್ ಅವರ ಬಣ್ಣ ಬಯಲಿಗೆಳೆದಿತ್ತು. ಆದರೆ, ಈ ವಿಡಿಯೋ ಪ್ರಸಾರವಾಗಬಾರದು ಎಂದರೆ ಕೋಟ್ಯಂತರ ರುಪಾಯಿ ನೀಡುವಂತೆ ಬೆದರಿಕೆ ಒಡ್ಡಿತ್ತು ಎಂದು ನವೀನ್ ಜಿಂದಾಲ್ ಆರೋಪಿಸಿದ್ದರು.ವಿಡಿಯೋದಲ್ಲಿ ಜೀ ನ್ಯೂಸ್ ವರದಿಗಾರ ಹಾಗೂ ಜಿಂದಾಲ್ ಸಂಸ್ಥೆ ಸಿಬ್ಬಂದಿ ಜೊತೆ ಡೀಲ್ ಮಾಡುತ್ತಿರುವ ದೃಶ್ಯಗಳಿತ್ತು.

100 ಕೋಟಿ ಡೀಲ್ ಗೆ 150 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಾಂಗ್ರೆಸ್ ಸಂಸದ ನವೀನ್ ಕುಮಾರ್ ಜಿಂದಾಲ್ ಅವರು ಜೀ ಟಿವಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಜೀ ಟಿವಿ ಕೂಡಾ ಕಾನೂನು ಸಮರಕ್ಕೆ ನಡೆಸುತ್ತಿದೆ.

ಪ್ರಮುಖ ಆರೋಪಿಗಳು

ಪ್ರಮುಖ ಆರೋಪಿಗಳು

ಸಂಸದ ನವೀನ್ ಜಿಂದಾಲ್ ಹಾಗೂ ಮಾಜಿ ಕಲ್ಲಿದ್ದಲು ರಾಜ್ಯ ಸಚಿವ ದಾಸರಿ ನಾರಾಯಣರಾವ್ ಅವರನ್ನು ಚಾರ್ಜ್ ಶೀಟ್ ನಲ್ಲಿ ಆರೋಪಿಗಳೆಂದು ನಮೂದಿಸಲಾಗಿದೆ.

ಜಿಂದಾಲ್ ಸ್ಟೀಲ್ ಮತ್ತು ಪವರ್ ಕಂಪೆನಿ ಸರ್ಕಾರದಿಂದ ಕಲ್ಲಿದ್ದಲು ನಿಕ್ಷೇಪಗಳನ್ನು ಪಡೆಯುವ ಸಂದರ್ಭದಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿದೆ. ಜಿಂದಾಲ್ ನಿಕ್ಷೇಪ ಪರವಾನಗಿ ಪಡೆಯಲು ಅಂದಿನ ಸಚಿವ ದಾಸರಿ ನಾರಾಯಣರಾವ್ ಅವರಿಗೆ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಅಂಶ ಚಾರ್ಜ್ ಶೀಟ್ ನಲ್ಲಿದೆ

ಸಿಬಿಐ ದಾಳಿ ಚಿತ್ರ

ಸಿಬಿಐ ದಾಳಿ ಚಿತ್ರ

ಇಂದು ಮುಂಜಾನೆಯಿಂದಲೇ ಜಿಂದಾಲ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿಯನ್ನೂ ನಡೆಸಿದ್ದು, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದೆ

ಪ್ರಧಾನಿ ಸಚಿವಾಲಯದ ಅಡಿಯಲ್ಲಿ

ಪ್ರಧಾನಿ ಸಚಿವಾಲಯದ ಅಡಿಯಲ್ಲಿ

2004ರಿಂದ 2009ರ ವರೆಗೆ ಹಂಚಿಕೆಯಾದ ಕಲ್ಲಿದ್ದಲು ಪರವಾನಗಿಗಳು ಸಮರ್ಪಕ ರೂಪುರೇಷೆಗಳ ಆಧಾರದ ಮೇಲೆ ನಡೆದಿಲ್ಲ ಎಂಬ ಅಂಶ ಬಹಿರಂಗಗೊಂಡಿತ್ತು. ಪ್ರಧಾನಿಗಳ ಅಧೀನ ಕಾರ್ಯದರ್ಶಿಗಳೇ ಕೆಲ ದಿನಗಳ ಮಟ್ಟಿಗೆ ಗಣಿ ಖಾತೆಯನ್ನು ನೇರವಾಗಿ ನಿರ್ವಹಿಸಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಎಫ್ ಐಆರ್ ದಾಖಲಿಸಿದ ನಂತರ ಇದೀಗ ಜಿಂದಾಲ್ ಮತ್ತು ಮಾಜಿ ಸಚಿವ ದಾಸರಿ ಹೆಸರು ಕೇಳಿಬಂದಿದೆ.

ರಾಜೀನಾಮೆಗೆ ಆಗ್ರಹ

ರಾಜೀನಾಮೆಗೆ ಆಗ್ರಹ

ಈಗಾಗಲೇ ಕಲ್ಲಿದ್ದಲು ಹಗರಣದ ತನಿಖೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಬಹಿರಂಗಗೊಳಿಸಿದ ಆರೋಪದ ಮೇಲೆ ಕಾನೂನು ಸಚಿವರಾಗಿದ್ದ ಅಶ್ವನಿಕುಮಾರ್ ರಾಜೀನಾಮೆಯನ್ನು ಕೊಟ್ಟಿದ್ದಾರೆ.

ಈಗ ನವೀನ್ ಜಿಂದಾಲ್ ಹಾಗೂ ಕಲ್ಲಿದ್ದಲು ಖಾತೆ ಸಚಿವ ದಾಸರಿ ನಾರಾಯಣ ರಾವ್ ಅವರ ರಾಜೀನಾಮೆಗೂ ಬಿಜೆಪಿ ಆಗ್ರಹಿಸಿದೆ,

ಎಷ್ಟು ಮೊತ್ತದ ಹಗರಣ

ಎಷ್ಟು ಮೊತ್ತದ ಹಗರಣ

ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ಸುಮಾರು 85 ಸಾವಿರ ಕೋಟಿ ರು. ಮೊತ್ತದ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪವಿದೆ.

2006ರಿಂದ ಆರಂಭವಾಗಿ ನಾಲ್ಕು ವರ್ಷಗಳಲ್ಲಿ 51 ಲಕ್ಷ ಕೋಟಿ ಮೌಲ್ಯದ 17 ಶತಕೋಟಿ ಮೆಟ್ರಿಕ್ ಟನ್ ಕಲ್ಲಿದ್ದಲು ಹೊಂದಿರುವ 73 ಬ್ಲಾಕ್ ಗಳನ್ನೂ 143 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿತ್ತು. ಹಾಗಾಗಿ 2006ರಲ್ಲಿ 51, 2007ರಲ್ಲಿ 19, 2008ರಲ್ಲಿ 41 ಮತ್ತು 2009ರಲ್ಲಿ 32 ಕಂಪನಿಗಳು ಗಣಿ ಗುತ್ತಿಗೆ ಪಡೆದಿದ್ದವು ಎಂದು ಆರೋಪಿಸಲಾಗಿದೆ.

English summary
The Central Bureau of Investigation (CBI) today registered fresh cases in coal block allotment scam and has named Congress MP Naveen Jindal and former Minister of State for Coal Dasari Narayan Rao as accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X