ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿಎಫ್ ಸಿ ಸೇರಿ 3 ಬ್ಯಾಂಕುಗಳಿಗೆ ಭಾರಿ ದಂಡ

By Mahesh
|
Google Oneindia Kannada News

RBI fines Axis Bank, HDFC Bank, ICICI Bank for rule violations
ಮುಂಬೈ, ಜೂ.11: ಕೋಬ್ರಾಪೋಸ್ಟ್ ವರದಿಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಮೂರು ಪ್ರಮುಖ ಖಾಸಗಿ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಂಡಿದೆ.

ಕೆವೈಸಿ ನಿಯಮಾವಳಿ ಹಾಗೂ ಕಪ್ಪು ಹಣ ಬಿಳಿಯನ್ನಾಗಿ ಮಾಡುವ ಮನಿಲಾಂಡ್ರಿಂಗ್ ನಲ್ಲಿ ತೊಡಗಿರುವ ಆರೋಪ, ಮಾರ್ಗಸೂಚಿಗಳ ಉಲ್ಲಂಘನೆ ಆರೋಪದಲ್ಲಿ ಬ್ಯಾಂಕುಗಳಿಗೆ ದಂಡ ವಿಧಿಸಲಾಗಿದೆ.

ಎಕ್ಸಿಸ್ ಬ್ಯಾಂಕಿಗೆ 5 ಕೋಟಿ, ಎಚ್ ಡಿಎಫ್ ಸಿ ಬ್ಯಾಂಕಿಗೆ 4.5 ಕೋಟಿ ಹಾಗೂ ಐಸಿಐಸಿಐ ಬ್ಯಾಂಕಿಗೆ 1 ಕೋಟಿ ದಂಡ ವಿಧಿಸಲಾಗಿದೆ. ಬ್ಯಾಂಕುಗಳ ಮೇಲಿನ ಆರೋಪಗಳ ತನಿಖೆ ನಡೆಸಿದ ಬಳಿಕ ಆರ್‌ಬಿಐ ಈ ದಂಡ ವಿಧಿಸಿದೆ. ಆದರೆ, ತನಿಖೆಯ ವೇಳೆ ಕಪ್ಪುಹಣ ಬಿಳಿಯನ್ನಾಗಿಸಿರುವುದಕ್ಕೆ ಯಾವುದೇ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಆರ್ ಬಿಐ ತಿಳಿಸಿದೆ.ಇದೇ ವೇಳೆ, ಇನ್ನೂ 36 ಬ್ಯಾಂಕುಗಳ ಕಾರ್ಪೊರೇಟ್ ಕಚೇರಿಗಳ ತನಿಖೆ ನಡೆಸಲಾಗುತ್ತಿದೆ ಎಂದೂ ಆರ್ ಬಿಐ ಹೇಳಿದೆ.

ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಮಂಗಳವಾರ ಐಸಿಐಸಿಐ, ಏಕ್ಸಿಸ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕು ಗಳಿಗೆ ನೋಟಿಸ್ ನೀಡಿತ್ತು. ಆರ್‌ಬಿಐ ಮತ್ತು ಹಣಕಾಸು ಗುಪ್ತಚರ ವಿಭಾಗ ನೀಡಿದ ರಹಸ್ಯ ವರದಿಯನ್ನು ಆಧರಿಸಿ ಈ ನೋಟಿಸ್ ಜಾರಿ ಮಾಡಲಾಗಿತ್ತು.

ಆದಾಯ ತೆರಿಗೆ ಇಲಾಖೆಯ ಮುಖ್ಯ ಉದ್ದೇಶ ತೆರಿಗೆ ಉಲ್ಲಂಘನೆಗೆ ಸಂಬಂಧಿಸಿ ಪರಿಶೀಲಿಸುವುದು, ಕಾಳಧನ ದಂಧೆಗೆ ಸಹಕಾರ ನೀಡಿದ್ದರಿಂದ ಆದ ಆದಾಯ ನಷ್ಟವನ್ನು ಪತ್ತೆಹಚ್ಚುವುದಾಗಿದೆ.

ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಬಳಿಕ ಬ್ಯಾಂಕ್‌ಗಳು ನಡೆಸಿದ ಆಂತರಿಕ ತನಿಖೆಯ ವಿವರ ನೀಡುವಂತೆಯೂ ಇಲಾಖೆ ಕೇಳಿದೆ. ಕೆಲವು ಪ್ರಕರಣಗಳಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಖುದ್ದು ಹಾಜರಿದ್ದು, ವಿವರಣೆ ಮತ್ತು ಸ್ಪಷ್ಟನೆ ನೀಡಬೇಕು ಎಂದೂ ಆದಾಯ ತೆರಿಗೆ ಸೂಚಿಸಿತ್ತು.

ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯಿಂದ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಸುಮಾರು 23 ಬ್ಯಾಂಕ್ ಹಾಗೂ ವಿಮೆ ಕಂಪನಿಗಳಲ್ಲಿ ಮನಿ ಲಾಂಡ್ರಿಂಗ್ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ತನಿಖೆಯಿಂದ ಹೊರ ಬಿದ್ದ ಬ್ಯಾಂಕುಗಳ ಹೆಸರುಗಳು ಇಂತಿದೆ: ಎಸ್ ಬಿಐ, ಎಲ್ ಐಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ರಿಲಯನ್ಸ್ ಲೈಫ್, ಟಾಟಾ ಎಐಎ, ಯೆಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ದೇನಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಡಿಸಿಬಿ ಬ್ಯಾಂಕ್ ಹಾಗೂ ಬಿರ್ಲಾ ಸನ್ ಲೈಫ್

ತೆರಿಗೆ ಇಲಾಖೆ ಕಣ್ಣಿಗೆ ಬಿದ್ದು ಹಣ ಜಪ್ತಿಯಾಗುವ ಭೀತಿ ಎದುರಾದಾಗ ಡರ್ಟಿ ಮನಿಯನ್ನು ಸ್ವಚ್ಛ ನಗದಾಗಿ ಪರಿವರ್ತಿಸಲು ಮನಿ ಲಾಂಡ್ರಿಂಗ್ ಬಳಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
RBI (Reserve Bank of India) on Monday said it had imposed fines on Axis Bank, HDFC Bank and ICICI Bank for violating guidelines related to details of customer identity known as "know your customer" (KYC) norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X