ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಾಟ್ ಫಿಕ್ಸಿಂಗ್: ರಾಜ್ ಕುಂದ್ರಾ ಅಮಾನತು

By Mahesh
|
Google Oneindia Kannada News

Rajasthan Royals co-owner Raj Kundra suspended for cricket
ಮುಂಬೈ, ಜೂ,10: ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಹಾಗೂ ಬುಕ್ಕಿಗಳ ಸಂಪರ್ಕ ಹೊಂದಿರುವ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರನ್ನು ಬಿಸಿಸಿಐ ಅಮಾನತುಗೊಳಿಸಿದೆ.

ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ರಾಜ್ ಕುಂದ್ರಾ ಅವರನ್ನು 10-12 ಗಂಟೆ ವಿಚಾರಣೆಗೆ ಒಳಪಡಿಸಿದ್ದರು. ರಾಜ್ ಕುಂದ್ರಾ ಅವರು ಬೆಟ್ಟಿಂಗ್ ಮಾಡಿದ್ದನ್ನು ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.

ಕುಂದ್ರಾ ಆಪ್ತ ಗೆಳೆಯ ಉಮೇಶ್ ಗೊಯಿಂಕಾ ಅವರು ಕುಂದ್ರಾ ಹೆಸರು ದುರ್ಬಳಕೆ ಮಾಡಿಕೊಂಡರು ಎಂದು ಶಿಲ್ಪಾ ಹೇಳಿದ್ದರು. ನಂತರ ಶಿಲ್ಪಾ ಶೆಟ್ಟಿ ಕೂಡಾ ಬೆಟ್ಟಿಂಗ್ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜ್ ಕುಂದ್ರಾ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲಾಗಿದ್ದು, ದೇಶ ಬಿಟ್ಟು ತೆರಳದಂತೆ ಆದೇಶಿಸಲಾಗಿತ್ತು.

ರಾಜ್ ಕುಂದ್ರಾ ಬಂಧನವನ್ನು ತಳ್ಳಿ ಹಾಕಿದ ದೆಹಲಿ ಪೊಲೀಸರು, ಸರಿಯಾದ ಸಾಕ್ಷಿ ಸಿಕ್ಕಿಲ್ಲ ಎಂದಿದ್ದರು. ಬ್ರಿಟಿಷ್ ನಾಗರೀಕ ರಾಜ್ ಕುಂದ್ರಾ ಬಂಧನ ಕೂಡಾ ಅಷ್ಟು ಸುಲಭವಲ್ಲ ಎನ್ನಲಾಗಿದೆ. ಆದರೆ,ಪೊಲೀಸರಿಗೂ ಮುಂಚಿತವಾಗಿ ಜಗಮೋಹನ್ ದಾಲ್ಮಿಯಾ ನೇತೃತ್ವ ಬಿಸಿಸಿಐ ಅಧಿಕಾರಿಗಳು ಈ ಕ್ರಮವನ್ನು ಜರುಗಿಸಿರುವುದನ್ನು ಕುಂದ್ರಾ ಅವರ ಪರ ವಕೀಲರು ಖಂಡಿಸಿದ್ದಾರೆ.

English summary
Rajasthan Royals' co-owner Raj Kundra has been suspended by BCCI from all cricket activities for his allegedly betting on IPL matches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X