ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಮಾರಿಗೆ ಗಾಯಕಿ ರಂಜನಿ ಹೆಬ್ಬಾರ್ ಬಲಿ

By Mahesh
|
Google Oneindia Kannada News

ಉಡುಪಿ, ಜೂ.10: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದ ಗಾಯಕಿ ರಂಜನಿ ಹೆಬ್ಬಾರ್ ಗುರುಪ್ರಸಾದ್ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಚೆನ್ನೈನಲ್ಲಿ ನೆಲೆಸಿದ್ದ 31 ವರ್ಷ ವಯಸ್ಸಿನ ರಂಜನಿ ಅವರು ಭಾನುವಾರ ರಾತ್ರಿ ಉಡುಪಿ ಸಮೀಪದ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಕನ್ನಡ ಮೂಲದ ರಂಜನಿ ಹೆಬ್ಬಾರ್ ಅವರು ಕ್ಯಾನ್ಸರ್ ಮಾರಿಗೆ ಬಲಿಯಾಗಿದ್ದಾರೆ. ಸಸ್ಯಶಾಸ್ತ್ರ ಪ್ರೊಫೆಸರ್ ಅರವಿಂದ್ ಹೆಬ್ಬಾರ್ ಹಾಗೂ ವಸಂತಲಕ್ಷ್ಮಿ ಅವರ ಪುತ್ರಿ ರಂಜನಿ ಅವರಿಗೆ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

ರಂಜನಿ ಅವರ ಹುಟ್ಟೂರು ಇಂದ್ರಾಳಿಯಲ್ಲಿ ಪಾರ್ಥೀವಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿದೆ.

Carnatic vocalist Ranjani Hebbar passes away

ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ರಂಜನಿ ಅವರಿಗೆ ಆರಂಭದಲ್ಲಿ ಪೋಷಕರಿಂದಲೇ ಮಾರ್ಗದರ್ಶನ ಸಿಕ್ಕಿತ್ತು. ನಂತರ ಮಧೂರು ಬಾಲಸುಬ್ರಮಣ್ಯಂ, ಗಾಯಕಿ ಎಸ್ ಸೌಮ್ಯ ಹಾಗೂ ಶ್ರೀನಿವಾಸನ್ ಅವರ ಶಿಷ್ಯೆಯಾದರು.

ನಂತರ ವಿದ್ವಾನ್ ಚೆಂಗಲ್ ಪೇಟ್ ರಂಗನಾಥನ್ ಅವರ ಮಾರ್ಗದರ್ಶನ ಪಡೆದ ರಂಜನಿ ಅವರು ದಾಸರ ಪದಗಳನ್ನು ಹಾಡುವುದರಲ್ಲಿ ಜನಪ್ರಿಯತೆ ಗಳಿಸಿದ್ದರು.

ಪತಿ ಸಾಫ್ಟ್ ವೇರ್ ಇಂಜಿನಿಯರ್ ಗುರುಪ್ರಸಾದ್ ಅವರನ್ನು ಮದುವೆಯಾದ ಮೇಲೆ ಚೆನ್ನೈಗೆ ತೆರಳಿದ ರಂಜನಿ ತಮ್ಮ ಸಂಗೀತಾಭ್ಯಾಸ ಮುಂದುವರೆಸಿದ್ದರು.

ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದರು. ಕಲ್ಕಿ ಪ್ರಶಸ್ತಿ, ಇಸೈ ಚುಡರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಎಂಎಸ್ ಸುಬ್ಬಲಕ್ಷ್ಮಿ ಅವರ ಹೆಸರಿನ ಶಿಷ್ಯವೇತನ ಪಡೆದಿದ್ದರು. ಪ್ರತಿಭಾವಂತ ಗಾಯಕಿ ರಂಜನಿ ಅಕಾಲಿಕ ಸಾವಿಗೆ ಸಂಗೀತ ಲೋಕ ಕಂಬನಿ ಮಿಡಿದಿದೆ.

English summary
Carnatic vocalist Ranjani Hebbar Guruprasad died on Sunday in Manipal Hospital, Udupi, after a prolonged battle with cancer. One of the bright young talents in Carnatic music, 31-year old Ranjani, a native of Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X