ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈವ್ ಬ್ಯಾಂಡ್, ಡಿಸ್ಕೋಥೆಕ್ ಎಲ್ಲಾ ಬಂದ್ ಮಾಡ್ರಿ

By Mahesh
|
Google Oneindia Kannada News

Bring Down the Crime rate KJ George to BG JP Mirji
ಬೆಂಗಳೂರು, ಜೂ. 10: ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಗೆ ಕಾರಣವಾಗಿರುವ ಡಿಸ್ಕೋಥೆಕ್, ಲೈವ್ ಬ್ಯಾಂಡ್ ಇನ್ನಿತರ ಅಕ್ರಮ ಚಟುವಟಿಕೆ ತಾಣಗಳನ್ನು ಕೂಡಲೇ ಬಂದ್ ಮಾಡಿ ಎಂದು ಪೊಲೀಸ್ ಆಯುಕ್ತ ಮಿರ್ಜಿ ಅವರಿಗೆ ಗೃಹ ಸಚಿವ ಜಾರ್ಜ್ ಮತ್ತೊಮ್ಮೆ ಮೌಖಿಕ ಆದೇಶ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ಭರ್ಜರಿ ರೈಡ್ ಮಾಡಿದ ನಗರದ ಕ್ರೈಂ ಬ್ಯಾಂಚ್ ಪೊಲೀಸರು, ಸ್ವಚ್ಛತಾ ಕಾರ್ಯ ಮುಂದುವರೆಸಿದ್ದಾರೆ. ಅನಧಿಕೃತವಾಗಿ ಲೈವ್ ಬ್ಯಾಂಡ್ ಸೇರಿದಂತೆ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.

ನಗರದ ಯಾವುದೇ ಪ್ರದೇಶದಲ್ಲಿ ಅನಧಿಕೃತವಾಗಿ ಲೈವ್ ಬ್ಯಾಂಡ್ ತಲೆ ಎತ್ತಿದರೆ ಅದಕ್ಕೆ ಆಯಾ ವಿಭಾಗಗಳ ಪೊಲೀಸ್ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂದು ಗೃಹ ಸಚಿವ ಕೆಜೆ ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.

ಗೊಂದಲದ ಗೂಡಾದ ಆದೇಶ: ಲೈವ್ ಬಾಂಡ್ ನಿಷೇಧ ಈ ಹಿಂದಿನಿಂದಲೂ ಜಾರಿಯಲ್ಲಿದೆ ಹಾಗಾದರೆ ಗೃಹ ಸಚಿವರು ಬಂದ್ ಮಾಡಿ ಎಂದಿದ್ದು ಯಾವುದನ್ನು ಎಂಬುದು ಪೊಲೀಸರಿಗೆ ಗೊಂದಲವಾಗಿದೆ.

ಮೂಲಗಳ ಪ್ರಕಾರ ಡಿಸ್ಕೋಥೆಕ್, ಇಸ್ಪೀಟ್ ಕ್ಲಬ್, ಮಹಿಳಾ ಪರಿಚಾರಕಿಯರು ಕಾರ್ಯ ನಿರ್ವಹಿಸುವ ಬಾರ್ ಗಳನ್ನು ಬಂದ್ ಮಾಡಲು ಜಾರ್ಜ್ ಆದೇಶಿಸಿದ್ದಾರೆ. ಅದರೆ, ಇಸ್ಲೀಟ್ ಕ್ಲಬ್ ಹಾಗೂ ಬಾರ್ ಗಳಿಗೆ ಸರ್ಕಾರವೇ ಲೈಸನ್ಸ್ ನೀಡಿರುತ್ತದೆ. ಮಹಿಳಾ ಪರಿಚಾರಕಿಯರಿಗೆ ವಸ್ತ್ರ ಸಂಹಿತೆ ಕಡಿವಾಣವನ್ನು ರದ್ದುಗೊಳಿಸಲಾಗಿದೆ.

ಇನ್ನೂ ನಾಯಿಕೊಡೆಗಳಂತೆ ಮೇಲೇಳುವ ಮಸಾಜ್ ಪಾರ್ಲರ್ ಗಳ ಕಡಿವಾಣ ಕಷ್ಟಕರ. ಹಿಂದೊಮ್ಮೆ ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಮೇಲೆ ನಕಲಿ ರೈಡ್ ಆದ ಮೇಲೆ ಪೊಲೀಸರು ಕೂಡಾ ಹಿಂಜರಿಯುತ್ತಿದ್ದಾರೆ. ಇದರ ಜೊತೆಗೆ ವಿಡಿಯೋ ಗೇಮ್ಸ್ ಕೇಂದ್ರಗಳನ್ನು ಬಂದ್ ಮಾಡಲು ಅದೇಶ ನೀಡಲಾಗಿದೆ.

ಒಟ್ಟಾರೆ ಲೈವ್ ಬ್ಯಾಂಡ್, ಡಿಸ್ಕೋಥೆಕ್ ಬಂದ್ ಗೆ ಸರ್ವಾನುಮತದ ಒಪ್ಪಿಗೆ ಇದ್ದರೂ ಲೈಸನ್ಸ್ ಇರುವ ಇಸ್ಲೀಟ್ ಕ್ಲಬ್ ಬಂದ್ ಮಾಡದಂತೆ ಮಾಲೀಕರು ಮನವಿ ಸಲ್ಲಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ನಗರದ ಬ್ರಿಗೇಡ್ ರಸ್ತೆ, ಗಾಂಧಿನಗರ, ಕೋರಮಂಗಲ, ರೆಸಿಡೆನ್ಸಿ ರಸ್ತೆ, ಕೆಎಚ್ ರಸ್ತೆ, ಬಿಟಿಎಂ ಲೇಔಟ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಲೇಡಿಸ್ ಸರ್ವರ್ ಬಾರ್ ಗಳಿದೆ. ಇದಕ್ಕೆ ಕೋರ್ಟ್ ಕೂಡಾ ಒಪ್ಪಿಗೆ ನೀಡಿದೆ. ಗ್ರಾಹಕರಿಗೆ ಮದ್ಯ ಪೂರೈಕೆ ಮಾಡಲು ಅನುಮತಿ ನೀಡಲಾಗಿದೆ.

ಸುಮಾರು 21ಕ್ಕೂ ಅಧಿಕ ಬಾರ್ ಗಳಲ್ಲಿ 2000ಕ್ಕೂ ಅಧಿಕ ಯುವತಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸ್ಕೋಥೆಕ್ ಗಳಲ್ಲಿ ಗ್ರಾಹಕರ ಮುಂದೆ ಹಾಡು ಕುಣಿತ ಇತರೆ ಮನರಂಜನೆ ನೀಡುವುದು ಇವರ ನಿತ್ಯದ ಕಾಯಕವಾಗಿರುತ್ತದೆ.

ಇನ್ನೊಂದೆಡೆ ಅನಧಿಕೃತ ಮದ್ಯದ ಅಂಗಡಿಗಳನ್ನು ತೆರವುಗೊಳಿಸುವ ಸಂಬಂಧ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆಯಲ್ಲಿದ್ದಾರೆ.

English summary
Home minister KJ George to city police commissioner BG Jyothi Prakash Mirji regarding bringing down the crime rate in the city. Bangalore Police aim to eliminate Bar dancers, live band, gambling dens, prostitution etc said Commissioner Mirji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X